- Home
- Entertainment
- Sandalwood
- ರಿಷಬ್ ಶೆಟ್ಟಿಗೆ ಗೌರವ ನಮನ: ಕುಂದಾಪುರದಲ್ಲಿ ದಿಗ್ಗಜರ ಸಮ್ಮುಖದಲ್ಲಿ 'ರಿಷಭೋತ್ಸವ': ಯಾವಾಗ?
ರಿಷಬ್ ಶೆಟ್ಟಿಗೆ ಗೌರವ ನಮನ: ಕುಂದಾಪುರದಲ್ಲಿ ದಿಗ್ಗಜರ ಸಮ್ಮುಖದಲ್ಲಿ 'ರಿಷಭೋತ್ಸವ': ಯಾವಾಗ?
ರಿಷಬ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ ‘ರಿಷಭೋತ್ಸವ’ ಜನವರಿ 3ರಂದು ಕುಂದಾಪುರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗದ ದಿಗ್ಗಜರು, ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಜ.3ರಂದು ರಿಷಭೋತ್ಸವ
ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ರಿಷಬ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ ‘ರಿಷಭೋತ್ಸವ’ ಜನವರಿ 3ರಂದು ಕುಂದಾಪುರದಲ್ಲಿ ನಡೆಯಲಿದೆ. ಕೋಟೇಶ್ವರದ ಯುವ ಮೆರಿಡಿಯನ್ ಫಿಲ್ಮ್ ಸ್ಟುಡಿಯೋದಲ್ಲಿ ನಡೆಯಲಿರುವ ಈ ಬೃಹತ್ ಮಟ್ಟದ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ಅಭಿನಂದನಾ ಕಾರ್ಯಕ್ರಮ
ಕುಂದಾಪುರದ ಕೆರಾಡಿ ಎಂದ ಸಣ್ಣ ಊರಲ್ಲಿ ಹುಟ್ಟಿ ದೇಶಾದ್ಯಂತ ಮನೆ ಮಾತಾಗಿರುವ ರಿಷಬ್ ಅವರಿಗೆ ಊರಿನ ಮಂದಿ ಹಾಗೂ ಅಭಿಮಾನಿಗಳು ಸೇರಿ ಈ ಅಭಿನಂದನಾ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗದ ದಿಗ್ಗಜರು, ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಟಾಕ್ ಆಫ್ ದಿ ವರ್ಲ್ಡ್
ಕಾಂತಾರ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಿಷಬ್ ಶೆಟ್ಟಿಯವರು ಇದೀಗ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ದೈವದ ಒಪ್ಪಿಗೆ ಪಡೆದು ಮಾಡಿದ್ದಾರೆ. ಈ ಸಿನಿಮಾ ಈಗ ಅವರಿಗೆ ವಿಶ್ವವ್ಯಾಪಿ ಖ್ಯಾತಿ ತಂದುಕೊಟ್ಟಿದೆ. ಇದೀಗ ತೆರೆಯಲ್ಲಿ ಮೆರೆಯುತ್ತಿರುವ 'ಕಾಂತಾರ 1' ಸಿನಿಮಾ ಮೂಲಕ ರಿಷಬ್ ಶೆಟ್ಟಿಯವರು ಟಾಕ್ ಆಫ್ ದಿ ವರ್ಲ್ಡ್' ಆಗಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ
ಇದು 'ದೇವರು-ದೈವದ ಮಹಿಮೆಯೇ' ಎಂದು ಸ್ವತಃ ರಿಷಬ್ ಅವರೇ ಎಷ್ಟೀ ಕಡೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಾಂತಾರ ಸಿನಿಮಾಗಳ ಮೇಕಿಂಗ್ ಹಾಗೂ ಸಿಕ್ಕಿರುವ 'ರಿಷಬ್ ಶೆಟ್ಟಿಯವರಿಂದ ತುಳುನಾಡು ದೇವರು-ದೈವ ಪ್ರಪಂಚಕ್ಕೆ ಪರಿಚಯ ಆಗಿದ್ದೋ ಅಥವಾ ತುಳುನಾಡ ದೈವದ ಕೃಪೆಯಿಂದ ರಿಷಬ್ ಶೆಟ್ಟಿಯವರು ಜಗತ್ತಿನ ಕಣ್ಣಿಗೆ ಬಿದ್ದಿರೋ' ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ.
ಇನ್ನೇಕೆ ಚರ್ಚೆ?
ಸಾಮಾನ್ಯ ಜನಪ್ರಿಯತೆ ದೇವರು-ದೈವಗಳ ಅನುಗ್ರಹವೇ ಎಂದು ಹೇಳುತ್ತ ಭಾರತದ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟು, ಭಕ್ತಿಯಿಂದ ತಲೆಬಾಗಿ ನಮಸ್ಕರಿಸಿ ಎಲ್ಲಾ ದೇವರುಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಸ್ವತಃ ರಿಷಬ್ ಶೆಟ್ಟಿಯವರು. ಇನ್ನೇಕೆ ಚರ್ಚೆ? ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಈ ಪ್ರಶ್ನೆಯೇ ಮಾಯವಾಗಬೇಕಾದ ಟೈಂ ಬಂದಾಯ್ತು ಅಲ್ಲವೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

