ಬಾಲಿವುಡ್ ನಟಿ ಜಾನ್ವಿ ಕಪೂರ್, ತಮ್ಮ 15ನೇ ವಯಸ್ಸಿನಲ್ಲಿ ಶಾಲಾ ದಿನಗಳಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಪೋರ್ನ್ ಸೈಟ್‌ನಲ್ಲಿ ತಮ್ಮ ಅಶ್ಲೀಲ ಚಿತ್ರವನ್ನು ಕಂಡ ಅನುಭವ ಮತ್ತು ಡೀಪ್ ಫೇಕ್ ತಂತ್ರಜ್ಞಾನದ ದುಷ್ಪರಿಣಾಮಗಳ ಬಗ್ಗೆ ಅವರು ವಿವರಿಸಿದ್ದಾರೆ.

ಕರಾಳ ನೆನಪು ಹಂಚಿಕೊಂಡ ನಟಿ ಜಾನ್ವಿ ಕಪೂರ್:

ಬಾಲಿವುಡ್ ನಟಿ ಜಾನ್ವಿ ಕಪೂರ್ ಶಾಲಾ ದಿನಗಳಲ್ಲಿ ತನ್ನ ಅಶ್ಲೀಲ ಚಿತ್ರವನ್ನು ಪೋರ್ನ್ ಸೈಟ್‌ನಲ್ಲಿ ಕಂಡು ಆದ ಆಘಾತದ ಬಗ್ಗೆ ವಿವರಿಸಿದ್ದಾರೆ. ಡೀಪ್ ಫೇಕ್ ಟೆಕ್ನಾಲಜಿ ಎಳೆಯ ಮನಸ್ಸುಗಳ ಮೇಲೆ ಎಂಥಾ ದುಷ್ಪರಿಣಾಮ ಬೀರುತ್ತದೆ ಎಂಬುದನ್ನೂ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನಗಾಗ 15 ವರ್ಷ ವಯಸು, ಡೀಪ್ ಫೇಕ್ ಅನ್ನೋ ಟೆಕ್ನಾಲಜಿ ಇದೆ ಅನ್ನೋದೂ ಆಗ ನಮಗೆ ಗೊತ್ತಿರಲಿಲ್ಲ. ಒಮ್ಮೆ ಐಟಿ ಕ್ಲಾಸ್ ಆಗ್ತಿತ್ತು. ನಮ್ಮ ಕ್ಲಾಸ್ ಹುಡುಗರು ಫನ್‌ಗಾಗಿ ಪೋರ್ನ್ ಸೈಟ್ ವಿಸಿಟ್ ಮಾಡಿದ್ರು. ಅನಿಸುತ್ತೆ. ಅಲ್ಲಿ ನನ್ನ ಫೋಟೋ ಇರೋದು ಗೊತ್ತಾಯ್ತು. ಆ ಕ್ಷಣ ನನಗಾದ ಆಘಾತವನ್ನು ಪದಗಳಲ್ಲಿ ವಿವರಿಸೋದು ಕಷ್ಟ, ಅನೇಕ ಕಡೆ ಆ ವೀಡಿಯೋ ಓಡಾಡ್ತಿರೋದೂ ಗೊತ್ತಾಯ್ತು. ಇವತ್ತಿಗೂ ಆ ಘಟನೆ ನೆನೆಸಿಕೊಂಡರೆ ಮನಸು ವಿಹ್ವಲಗೊಳ್ಳುತ್ತದೆ ಎಂದು ಆ ಘಟನೆ ಬಗ್ಗೆ ಜಾನ್ವಿ ಕಪೂರ್ ವಿವರಣೆ ನೀಡಿದ್ದಾರೆ. ಈ ಮೂಲಕ ಡೀಪ್ ಎಐ ಮುಂತಾದ ಟೆಕ್ನಾಲಜಿ ಬಳಸಿ ದಯವಿಟ್ಟು ಹೆಣ್ಣುಮಕ್ಕಳ ಬದುಕಿನ ಜೊತೆ ಆಟ ಆಡಬೇಡಿ ಎಂಬ ಮನವಿಯನ್ನೂ ಮಾಡಿದ್ದಾರೆ ಜಾನ್ವಿ ಕಪೂರ್.

ಇದನ್ನೂ ಓದಿ: ಮಹಿಳಾ ಕಸ್ಟಮ್ಸ್ ಅಧಿಕಾರಿ ಮೇಲೆ ಅತ್ಯಾ*ಚಾರ: ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ : ಉದ್ಯಮಿ ಅಂದರ್