- Home
- Entertainment
- News
- ಚಿಕಿರಿ ಚಿಕಿರಿ ಸಾಂಗ್‌ನಲ್ಲಿ ನೆಟ್ಟಿಗರ ಕಣ್ಣಿಗೆ ಬಿದ್ದ ಜಾನ್ವಿ ಕಪೂರ್ ಪಕ್ಕದಲ್ಲಿರುವ ಯುವತಿ; ಯಾರೀಕೆ?
ಚಿಕಿರಿ ಚಿಕಿರಿ ಸಾಂಗ್‌ನಲ್ಲಿ ನೆಟ್ಟಿಗರ ಕಣ್ಣಿಗೆ ಬಿದ್ದ ಜಾನ್ವಿ ಕಪೂರ್ ಪಕ್ಕದಲ್ಲಿರುವ ಯುವತಿ; ಯಾರೀಕೆ?
Peddi song girl: ಪೆದ್ದಿ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಮೊದಲ ಹಾಡೇ ಈಗಾಗಲೇ ಹೊಸ ದಾಖಲೆ ಸೃಷ್ಟಿಸಿದೆ. ಈ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಂದಹಾಗೆ ಚಿಕಿರಿ ಚಿಕಿರಿ.. ಹಾಡಿನಲ್ಲಿ ಕಾಣಿಸಿಕೊಂಡ ಓರ್ವ ಯುವತಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟನೆ
ತೆಲುಗಿನಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಪೆದ್ದಿ ಕೂಡ ಒಂದು. 'ಗೇಮ್ ಚೇಂಜರ್' ನಂತರ ರಾಮ್ ಚರಣ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ನಿರ್ದೇಶಕ ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ರಾಮ್ ಚರಣ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಿರೀಕ್ಷಿತ ಯಶಸ್ಸನ್ನ ಗಳಿಸಲಿಲ್ಲಈ ಸಿನಿಮಾ
ಆರ್‌ಆರ್‌ಆರ್ ಸಿನಿಮಾದ ಮೂಲಕ ರಾಮ್ ಚರಣ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೆಸರು ಮಾಡಿದರು. ಆರ್‌ಆರ್‌ಆರ್ ಸಿನಿಮಾದ ನಂತರ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತು. ಶಂಕರ್ ನಿರ್ದೇಶನದ ಈ ಸಿನಿಮಾ ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾಯಿತು. ಆದರೆ ಈ ಸಿನಿಮಾ ನಿರೀಕ್ಷಿತ ಯಶಸ್ಸನ್ನು ಗಳಿಸಲಿಲ್ಲ.
ಜಾನ್ವಿ ಕಪೂರ್ ನಾಯಕಿಯಾಗಿ ನಟನೆ
ಈಗ ರಾಮ್ ಚರಣ್ ಪೆದ್ದಿ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಬುಚ್ಚಿಬಾಬು ಸನಾ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಜಾನ್ವಿ ಕಪೂರ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮ್ ಚರಣ್ ಅಭಿಮಾನಿಗಳು ಈ ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಕ್ರೀಡಾಧಾರಿತ ಸಿನಿಮಾ
ಇದು ಕ್ರೀಡಾಧಾರಿತ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಕ್ರಿಕೆಟ್, ಕುಸ್ತಿ ಮತ್ತು ಕಬಡ್ಡಿಯಂತಹ ವಿವಿಧ ಆಟಗಳು ಇರುತ್ತವೆ. ರಾಮ್ ಚರಣ್ 'ಕ್ರೀಡಾಪಟು' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಿಂದ ಬಿಡುಗಡೆಯಾದ ಮೊದಲ ಟೀಸರ್ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ರಾಮ್ ಚರಣ್ ಲುಕ್ ತುಂಬಾ ವಿಭಿನ್ನ
ಪೆದ್ದಿ ಚಿತ್ರದಲ್ಲಿ ರಾಮ್ ಚರಣ್ ಅವರ ಲುಕ್ ತುಂಬಾ ವಿಭಿನ್ನವಾಗಿದೆ. ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ. ಏತನ್ಮಧ್ಯೆ, ಇತ್ತೀಚೆಗೆ ಈ ಚಿತ್ರದಿಂದ ಚಿಕಿರಿ ಚಿಕಿರಿ ಎಂಬ ಹಾಡು ಬಿಡುಗಡೆಯಾಯಿತು. ಈ ಹಾಡಿನಲ್ಲಿ ರಾಮ್ ಚರಣ್ ತಮ್ಮ ನೃತ್ಯದಿಂದ, ಜಾನ್ವಿ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.
ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡ ಯುವತಿ
ಪೆದ್ದಿ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಮೊದಲ ಹಾಡೇ ಈಗಾಗಲೇ ಹೊಸ ದಾಖಲೆ ಸೃಷ್ಟಿಸಿದೆ. ಈ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಂದಹಾಗೆ ಚಿಕಿರಿ ಚಿಕಿರಿ.. ಹಾಡಿನಲ್ಲಿ ಕಾಣಿಸಿಕೊಂಡ ಓರ್ವ ಯುವತಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹಾಡಿನಲ್ಲಿ ಜಾನ್ವಿ ಪಕ್ಕದಲ್ಲಿ ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡ ಈ ಯುವತಿಯನ್ನ ನೆಟ್ಟಿಗರು ಹುಡುಕುತ್ತಿದ್ದಾರೆ.
ಕಿರುಚಿತ್ರಗಳಲ್ಲಿ ನಟನೆ
ಅದಕ್ಕೂ ಉತ್ತರ ಸಿಕ್ಕಿದೆ. ಅವರ ಹೆಸರು ಶ್ವೇತಾ ಸಾಲುರು. ಈಗಾಗಲೇ ಅನೇಕ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಈ ಯುವತಿ ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.