Asianet Suvarna News Asianet Suvarna News

ಡ್ಯಾನ್ಸ್‌ ಮಾಡ್ಲೇಬೇಕು: ಸಾಯಿ ಪಲ್ಲವಿಗೆ ಫ್ಯಾನ್‌ ಎಮೋಷನಲ್‌ ಬ್ಲ್ಯಾಕ್‌ಮೇಲ್‌

ತಮ್ಮ ಹೊಸ ಸಿನೆಮಾ ಲವ್ ಸ್ಟೋರಿಯಲ್ಲಿ ನಾಗಚೈತನ್ಯ ಜೊತೆ ಭರ್ಜರಿ ಡ್ಯಾನ್ಸ್‌ ಮೂವ್‌ಗಳಿಗೆ ಸಾಯಿ ಪಲ್ಲವಿ ಸ್ಟೆಪ್‌ ಹಾಕಿರುವುದು ಈಗ ಆಕೆಯ ನೃತ್ಯಕ್ಕಾಗಿಯೇ ಕಾಯುತ್ತಿರುವ ಸಿನೆಮಾ ರಸಿಕರಿಗೆ ಹಬ್ಬದೂಟದಂತಾಗಲಿದೆ.

Fans blackmails Malayalam actress Sai Pallavi to dance
Author
Bengaluru, First Published Jan 17, 2020, 3:37 PM IST
  • Facebook
  • Twitter
  • Whatsapp

ಸಾಯಿ ಪಲ್ಲವಿ ಎಂದು ನರ್ತನ ಸುಂದರಿ ನಿಮಗೆ ಚೆನ್ನಾಗಿಯೇ ಗೊತ್ತು ಅಲ್ಲವೇ? ಹೊಸ ಚಿತ್ರ 'ಲವ್‌ ಸ್ಟೋರಿ'ಯ ಮೊದಲ ಲುಕ್‌ ಬಿಡುಗಡೆಯಾಗಿದೆ. ಇದರಲ್ಲಿ ನಾಗಚೈತನ್ಯ ಜೊತೆ ನಟಿಸಿರುವ ಈಕೆಗೆ ಇದರಲ್ಲಿ ಸಾಕಷ್ಟು ಡ್ಯಾನ್ಸ್‌ ಮೂವ್ಸ್‌ ಇವೆಯಂತೆ. ಮಲಯಾಳಂನ ಪ್ರೇಮಂ ಚಿತ್ರದಲ್ಲಿ ಹುಡುಗರಿಗೆ ಡ್ಯಾನ್ಸ್‌ ಹೇಳಿಕೊಡುವ ಈ ಚೆಲುವೆಯ ಡ್ಯಾನ್ಸ್‌ಗೆ ಸಾವಿರಾರು ಮಂದಿ ಫಿದಾ ಆಗಿದ್ದಾರೆ. ಹಾಗೇ ಈಕೆ ಧನುಷ್‌ ಜೊತೆ ಹೆಜ್ಜೆ ಹಾಕಿರುವ ಮಾರಿ ೨ ಚಿತ್ರದ 'ರೌಡಿ ಬೇಬಿ' ಸಾಂಗ್‌ ಕೂಡ ತುಂಬ ಫೇಮಸ್‌. ದೇಶಾದ್ಯಂತ ಇದು ಯೂಟ್ಯೂಬ್‌ನಲ್ಲಿ 75 ಕೋಟಿ ಹಿಟ್‌ ಕಂಡಿದೆಯಂತೆ.

ಈಕೆಯ ಮೊಡವೆ ಬಿದ್ದ ಮುಖದ ಚೆಲುವು, ಯಾವುದೇ ಬಾಲಿವುಡ್‌ನ ಅತಿಲೋಕ ಸುಂದರಿಗಿಂತಲೂ ಹೆಚ್ಚು ಚಂದ ಎಂದು ನಮ್ಮ ದಕ್ಷಿಣ ಭಾರತೀಯ ಸಿನಿಮಾ ರಸಿಕರು ಗಾಢವಾಗಿ ನಂಬಿದ್ದಾರೆ. ಮಲಯಾಳಂ, ತೆಲುಗು ಮತ್ತು ತಮಿಳು ಸಿನೆಮಾಗಳಲ್ಲಿ ನಟಿಸಿ ರಸಿಕರ ಹಾಟ್‌Fಥ್ರೋಬ್‌ ಅನಿಸಿರುವ ಈ ತೆಳ್ಳಗೆ, ಕೆಂಪಗಿನ ಸುಂದರಿಯ ಹೊಸ ಸಿನೆಮಾ ಲವ್‌ ಸ್ಟೋರಿಯಲ್ಲಿ ನೀವು ಆಕೆಯ ಡ್ಯಾನ್ಸನ್ನು ತುಂಬಾ ಎಂಜಾಯ್‌ ಮಾಡಬಹುದಂತೆ. ಆ ಫಿಲಂನಲ್ಲಿ ಆಕೆಗಾಗಿ ಸಾಕಷ್ಡು ಡ್ಯಾನ್ಸ್‌ ಸೀಕ್ವೆನ್ಸ್‌ ಸೃಷ್ಟಿಸಲಾಗಿದೆ ಎಂದಿದ್ದಾರೆ ಸಿನೆಮಾ ನಿರ್ದೇಶಕರು.ಇದಕ್ಕೆ ಕಾರಣ, ಆಕೆಯ ಫ್ಯಾನ್‌ಗಳಿಂದ ಬರುತ್ತಿರುವ ಫೋನ್‌ ಹಾಗೂ ಪತ್ರಗಳ ಪ್ರವಾಹ. ಎಲ್ಲರೂ ಆಕೆಯನ್ನು ಡ್ಯಾನ್ಸಿಂಗ್‌ ಪಾತ್ರಗಳಲ್ಲಿ ನೋಡಲು ಹೆಚ್ಚು ಹೆಚ್ಚು ಬಯಸುತ್ತಿದ್ದಾರಂತೆ. ಒಬ್ಬ ಅಭಿಮಾನಿಯಂತೂ ಚೆನ್ನೈಯಿಂದ ಫೋನ್‌ ಮಾಡಿ, ನಿನ್ನ ಮುಂದಿನ ಚಿತ್ರದಲ್ಲಿ ಸಾಕಷ್ಟು ಡ್ಯಾನ್ಸ್‌ ಇಲ್ಲದೇ ಹೋದರೆ ತನ್ನ ತಂಗಿ ತುಂಬಾ ಬೇಜಾರು ಮಾಡಿಕೊಳ್ಳುವುದಾಗಿ ಎಮೋಷನಲ್‌ ಬ್ಲ್ಯಾಕ್‌ಮೇಲ್‌ ಮಾಡಿದ್ದಾನಂತೆ. ಹೀಗಾಗಿ ಆಕೆ ಲವ್‌ ಸ್ಟೋರಿಯಲ್ಲಿ ಸಾಕಷ್ಟು ಹಾಡು ನೃತ್ಯ ಇರುವಂತೆ ನೋಡಿಕೊಂಡಿದ್ದಾಳೆ ಎಂಬುದು ಸುದ್ದಿ.

ಟಾಲಿವುಡ್‌, ಮಾಲಿವುಡ್‌ ಆಯ್ತು ಹೊಸ ಸಾಹಸಕ್ಕೆ ಕೈ ಹಾಕಿದ ಸಾಯಿ ಪಲ್ಲವಿ!...

ಅದಿರಲಿ, ಮುಖದ ತುಂಬಾ ಮೊಡವೆ ಇದ್ದರೂ ಈಕೆಯ ಮುಖದ ಚೆಲುವು ಕುಂದಿಲ್ಲ. ಪಿಂಪಲ್‌ನಿಂದಲೇ ಆಕೆ ಸೌಂದರ್ಯ ಹೆಚ್ಚಿಸಿಕೊಂಡಿದ್ದಾಳೆ. ಈಕೆ ಒಮ್ಮೆ ಅದೇ ಕಾರಣಕ್ಕಾಗಿ ಫೇಸ್‌ ಕ್ರೀಮ್‌ ಜಾಹೀರಾತು ನಿರಾಕರಿಸಿದ್ದು ನಿಮಗೆ ಗೊತ್ತಾ?

ಈಕೆಯ ತಂಗಿ ಪೂಜಾ ಈಕೆಗಿಂತ ಐದು ವರ್ಷ ಚಿಕ್ಕವಳು. ಅಕ್ಕನಂತೆ ಮುಖದ ಚೆಲುವು ಹೆಚ್ಚಿಸಿಕೊಳ್ಳಬೇಕು ಎಂಬುದು ಆಕೆಯ ಕನಸು. ಆಕೆ ಕನ್ನಡಿಯಲ್ಲಿ ತನ್ನ ಮುಖ ಒಮ್ಮೆ, ಅಕ್ಕನ ಮುಖ ಒಮ್ಮೆ ನೋಡುತ್ತಿದ್ದಳಂತೆ. ನಂತರ, ಮುಖ ಬೆಳ್ಳಗಾಗಲು ಏನು ಮಾಡಬೇಕು ಎಂದು ಸಾಯಿ ಪಲ್ಲವಿಯನ್ನು ಕೇಳಿದಳು, ತರಕಾರಿ ಮತ್ತು ಹಣ್ಣು ತಿನ್ನು ಎಂದು ಸಾಯಿ ಪಲ್ಲವಿ ಹೇಳಿದ್ದಾಳೆ. ಆದರೆ ಪೂಜಾಗೆ ತರಕಾರಿ ಮತ್ತು ಹಣ್ಣು ಅಂದರೆ ಇಷ್ಟವಿಲ್ಲ. ಆದರೂ ಬೆಳ್ಳಗಾಗಬೇಕು ಎಂಬ ಆಸೆಯಿಂದ ತಿನ್ನುತ್ತಿದ್ದಳಂತೆ. ಇದನ್ನು ನೋಡಿ ಸಾಯಿ ಪಲ್ಲವಿಗೆ ಬೇಜಾರಾಗಿದೆ. ನಾವು ಯಾಕೆ ಹೀಗಿದ್ದೇವೆ. ಯಾಕೆ ಫಾರಿನರ್‌ಗಳ ಹಾಗೆ ಬೆಳ್ಳಗಾಗಲು ಬಯಸುತ್ತಿದ್ದೇವೆ ಎಂಬ ಪ್ರಶ್ನೆ ಆಕೆಯನ್ನು ಕಾಡಿದೆ. ನಾವು ಭಾರತೀಯರು, ನಮ್ಮದೇ ಆದ ಚರ್ಮದ ಬಣ್ಣ ಹೊಂದಿದ್ದೇವೆ. ನಮ್ಮಂತೆ ಆಗಬೇಕು ಎಂಬ ಆಸೆಯಿಂದ ವಿದೇಶಿಗರು ಇಲ್ಲಿಗೆ ಬಂದು ಬೀಚುಗಳಲ್ಲಿ ಓಡಾಡುತ್ತಾರೆ. ಆದ್ರೆ ನಾವು ಅವರಂತೆ ಆಗಲು ಬಯಸುತ್ತಿದ್ದೇವಲ್ಲ ಎಂದೆಲ್ಲ ಪ್ರಶ್ನೆ ಕಾಡಿದೆ.

ಪ್ರೇಮಂ ನಟಿಯ ಹೊಸ ಲವ್ ಸ್ಟೋರಿ

ಸಾಯಿ ಪಲ್ಲವಿಯ ಮೊದಲ ಫಿಲಂ ಮಲಯಾಳಂನ ಪ್ರೇಮಂ. ಈ ಫಿಲಂನಲ್ಲಿ ಸಾಯಿ ಪಲ್ಲವಿ ಪೆಡಿಕ್ಯೂರ್‌, ಮೆನಿಕ್ಯೂರ್‌ ಇತ್ಯಾದಿ ಮಾಡಿಸಿಕೊಳ್ಳದೆ, ಫೇಶಿಯಲ್ ಕೂಡ ಇಲ್ಲದೆ, ಹೆಚ್ಚು ಮೇಕಪ್‌ ಕೂಡ ಮಾಡದೆ ನಟಿಸಿದ್ದಾಳೆ. ಆದರೆ ಆಕೆಗೆ ಪ್ರೇಕ್ಷಕಕರು ತನ್ನನ್ನು ಹೇಗೆ ಸ್ವೀಕರಿಸುತ್ತಾರೋ, ಫಿಲಂ ತನ್ನಿಂದಾಗಿ ಗೋತಾ ಆದರೆ ಏನು ಗತಿ ಎಂದೆಲ್ಲ ಭಯ ಕಾಡುತ್ತಿತ್ತು. ಮೊದಲ ಶೋದಲ್ಲಿ ಆಕೆ ಭಯದಿಂದ ಅಮ್ಮನ ತೋಳನ್ನು ಗಟ್ಟಿಯಾಗಿ ಹಿಡಿದುಕೊಂಡು ಆಕೆಯ ಕೈ ಮೂಳೆಗಳನ್ನು ಮುರಿದೇ ಬಿಟ್ಟಿದ್ದಳಂತೆ! ಫಿಲಂ ನೋಡಿದ ಬಳಿಕ ಎಲ್ಲರೂ ಆಕೆಯನ್ನು ಅಭಿನಂದಿಸಿದರು, ಫಿಲಂ ಎಷ್ಟು ಹಿಟ್‌ ಆಯಿತೆಂದರೆ, ಸಾಯಿ ಪಲ್ಲವಿಗೆ ಬೇಡಿಕೆಯ ಮಹಾಪೂರವೇ ಮೂರು ಭಾಷೆಗಳಿಂದ ಹರಿದುಬಂತು.

ಸಾಯಿ ಪಲ್ಲವಿ ಇದರಿಂದ ಕಲಿತುಕೊಂಡದ್ದೆಂದರೆ, ಮುಖದ ಚೆಲುವು ಮುಖ್ಯವಲ್ಲ ಆತ್ಮವಿಶ್ವಾಸವೇ ಮುಖ್ಯ ಎಂಬುದನ್ನ. ಹೀಗಾಗಿ ಫೇಸ್‌ಕ್ರೀಮ್‌ ಜಾಹೀರಾತು ನಿರಾಕರಿಸುವ ಧೈರ್ಯ ಮಾಡಿದೆ ಅನ್ನುತ್ತಾರೆ.

Follow Us:
Download App:
  • android
  • ios