ಟಾಲಿವುಡ್, ಮಾಲಿವುಡ್, ಕಾಲಿವುಡ್ ಸಿನಿ ರಂಗದಲ್ಲಿ ಹೆಸರು ಮಾಡಿರುವ ಸಾಯಿ ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.  ಸದ್ಯದಲ್ಲೇ  'ವೆಬ್ ಸೀರೀಸ್‌'ವೊಂದರಲ್ಲಿ ನಟಿಸಲಿದ್ದಾರೆ. 

ಫಸ್ಟ್‌ ಟೈಮ್ ಲಿಪ್ ಲಾಕ್‌ಗೆ ಓಕೆ ಅಂದ ತಮನ್ನಾ.. ನಾಯಕ ಇವ್ರೇ ಬೇಕಂತೆ!

ಖ್ಯಾತ ನಿರ್ದೇಶಕ ವಿಟ್ರಿಮಾರನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೆಬ್ ಸೀರೀಸ್‌ವೊಂದರಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಇದೇ ಸೀರೀಸ್‌ನಲ್ಲಿ ಪ್ರಕಾಶ್ ರೈ ಕೂಡಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  ವಿಟ್ರಿಮಾರನ್ ಮಹಿಳಾ ಪ್ರಧಾನ ಸಿನಿಮಾ ಮಾಡುವುದರಲ್ಲಿ, ಕಥೆ ಬರೆಯುವದರಲ್ಲಿ ಸಿಕ್ಕಾಪಟ್ಟೆ ಫೇಮಸ್.  ಒಂದು ವೇಳೆ ಸಾಯಿ ಪಲ್ಲವಿ ಇವರ ವೆಬ್ ಸೀರೀಸ್‌ನಲ್ಲಿ ನಟಿಸಿದ್ದೇ ಹೌದಾದರೆ ಒಂದೊಳ್ಳೆ ವೆಬ್ ಸೀರೀಸ್‌ ಆಗುವುದರಲ್ಲಿ ಅನುಮಾನವೇ ಇಲ್ಲ. 

ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಲವ್ಲಿ ಅಕ್ಕ ಪೂಜಾ ಹೇಗಿದ್ದಾರೆ ನೋಡಿ...

ಸದ್ಯ ಸಾಯಿಪಲ್ಲವಿ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಜೊತೆ ನಟಿಸಲಿದ್ದಾರೆ. ಚಿತ್ರಕ್ಕೆ 'ಲವ್‌ಸ್ಟೋರಿ' ಎಂದು ಹೆಸರಿಡಲಾಗಿದೆ. ಜೊತೆಗೆ ವಿರಾಟ ಪರ್ವಂ ಸಿನಿಮಾದಲ್ಲಿ ನಟಿಸಿದ್ದಾರೆ. ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.