ಕ್ಲಿಸ್ಟರ್ ಕ್ಲಿಯರ್ ಫೇಸ್, ನ್ಯಾಚುರಲ್ ಬ್ಯೂಟಿ ಖ್ಯಾತಿಯ ಸಾಯಿ ಪಲ್ಲವಿ ತೆಗೆದುಕೊಂಡಿರುವ ನಿರ್ಧಾರದಿಂದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಈ ಸಿಂಪಲ್ ಬ್ಯೂಟಿ ಕ್ವೀನ್‌ನ ಹೃದಯ ವೈಶಾಲ್ಯತೆಯನ್ನು ಮತ್ತಷ್ಟು ಮೆಚ್ಚಿ, ಭೇಷ್ ಭೇಷ್ ಎನ್ನುತ್ತಿದ್ದಾರೆ.

ಬ್ಯುಸಿನೆಸ್ ಮಾರುಕಟ್ಟೆಯನ್ನೇ ನುಂಗಿರುವ ಸಾವಿರಾರು ಫೇರ್‌ನೆಸ್ ಕ್ರಿಮ್‌ಗಳ ಜಾಹೀರಾತುಗಳು ಬರುತ್ತವೆ. ಇಂಥ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ತಾ ಮುಂದು, ನಾ ಮುಂದು ಎಂದು ಚಿತ್ರ ನಟಿಯರು ಕಾಯುತ್ತಿರುತ್ತಾರೆ. ಅಂಥದ್ರಲ್ಲಿ ತಾನಾಗಿಯೇ ಹುಡುಕಿಕೊಂಡು ಬಂದ ಇಂಥದ್ದೊಂದನ್ನು ಆ್ಯಡನ್ನು ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ್ದಾರೆ. ಇಂಥ ಅವಕಾಶಕ್ಕೆ ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್ ನಟ-ನಟಿಯರು ಕಣ್ಣು ಬಾಯಿ ಬಿಟ್ಕೊಂಡು ಕಾಯುತ್ತಾರೆ. ಬಟ್ ಪಲ್ಲವಿ ಇಂಥದ್ದೊಂದನ್ನು ಆಫರ್ ರಿಜೆಕ್ಟ್ ಮಾಡಿ, ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಇದು ಮತ್ತಷ್ಟು ಅಭಿಮಾನಿಗಳನ್ನು ಗಳಿಸುವಂತೆ ಮಾಡಿದೆ.

2 ಕೋಟಿ ಆಫರನ್ನು ನಿರಾಕರಿಸಿದ್ರಾ ಸಾಯಿಪಲ್ಲವಿ?

 

‘ನಾನು ಎಂದಿಗೂ ಸೌಂದರ್ಯವರ್ಧಕಗಳ ಬಗ್ಗೆ ಅಥವಾ ಅದರ ಅನುಮೋದನೆಗೆ ಕೈ ಜೋಡಿಸುವುದಿಲ್ಲ. ನಿಮ್ಮ ಆತ್ಮ ವಿಶ್ವಾಸದ ಮುಂದೆ ಈ ಸೌಂದರ್ಯವರ್ಧಕಗಳು ಏನೂ ಅಲ್ಲ. ’ ಎಂದಿದ್ದಾರೆ. ಅಷ್ಟೇ ಅಲ್ಲದೇ ತಾವು ಕನ್ನಡಿ ಮುಂದೆ ನಿಂತಾಗ ನನ್ನ ತಂಗಿಗೆ ಕಪ್ಪು ಬಣ್ಣವೆಂದು ಚಿಂತಿತರಾಗುತ್ತಾರೆ. ಅಲ್ಲದೇ ದಕ್ಷಿಣ ಭಾರತೀಯರ ಬಣ್ಣವೇ ಎಣ್ಣೆಗೆಂಪಾಗಿದ್ದು, ಸೌಂದರ್ಯ ವರ್ಧಕಗಳನ್ನು ಬಳಿಸಿದರೆ ಅದೇನೂ ಬದಲಾಗೋಲ್ಲವೆಂದು ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

ಚಿತ್ರ ಫ್ಲಾಪ್: ಅರ್ಧ ಸಂಭಾವನೆ ಮರಳಿಸಿದ ಮೊದಲ ನಟಿ!

ತಮ್ಮ ಸಿಂಪಲ್ ಬ್ಯೂಟಿ, ಅದ್ಭುತ ಅಭಿನಯ ಜತೆ ಇಂಥ ನಿರ್ಧಾರಗಳಿಂದಲೇ ಸಾಯಿ ಪಲ್ಲವಿ ದಕ್ಷಿಣ ಭಾರತದಲ್ಲಿ ಪ್ರಭಾವಿ ನಟಿಯಾಗಿ ಹೊರಹೊಮ್ಮುತ್ತಿರುವುದು. ದೈಹಿಕ ಸೌಂದರ್ಯದೊಂದಿಗೆ, ಆಂತರಿಕ ಸೌಂದರ್ಯವೇ ಮುಖ್ಯ ಎಂಬುದನ್ನು ಎಲ್ಲರೂ ಅರಿತು ಕೊಂಡರೆ ಒಳಿತು.