MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ

ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ

ನಟಿ ಕರೀನಾ ಕಪೂರ್ ಅವರು ನಾಯಕರೊಬ್ಬರ ಜೊತೆ ಡೇಟಿಂಗ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಈ ಬಯಕೆಯನ್ನು ವ್ಯಕ್ತಪಡಿಸಿದ್ದ ಅವರು, ಇತ್ತೀಚಿನ ಸಂದರ್ಶನವೊಂದರಲ್ಲಿಯೂ ತಮ್ಮ ಆಸೆ ಈಡೇರಿಲ್ಲ ಎಂದು ಹೇಳಿದ್ದಾರೆ, ಅವರು ಇವರೇ ನೋಡಿ!

2 Min read
Author : Suchethana D
Published : Mar 30 2026, 10:29 PM IST
Share this Photo Gallery
  • FB
  • TW
  • Linkdin
  • Whatsapp
16
ಮಗಳೇ ಎಂದವರ ಜೊತೆ ಮದ್ವೆ
Image Credit : Instagram

ಮಗಳೇ ಎಂದವರ ಜೊತೆ ಮದ್ವೆ

ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅವರ ಮೊದಲ ಮದುವೆಗೆ ಹೋಗಿದ್ದ ಕರೀನಾ ಕಪೂರ್​ರನ್ನು ಮಗಳೇ ಎಂದು ಬಾಯ್ತುಂಬ ಕರೆದಿದ್ದರು ಸೈಫ್. ಕೊನೆಗೆ ಕರೀನಾ ಅವರನ್ನೇ ಮದುವೆಯಾಗಿ ಎರಡನೆಯ ಪತ್ನಿ ಮಾಡಿಕೊಂಡು, ಮತ್ತೆರಡು ಮಕ್ಕಳ ಅಪ್ಪ ಆದವರು ಸೈಫ್​ ಅಲಿ ಖಾನ್​. ಸದ್ಯ ಕರೀನಾ ಕಪೂರ್ ಖಾನ್​, ಸೈಫ್​ ಜೊತೆ ಚೆನ್ನಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

26
ಹಳೆಯ ವಿಡಿಯೋ ವೈರಲ್​
Image Credit : Social Media

ಹಳೆಯ ವಿಡಿಯೋ ವೈರಲ್​

ಈ ಸಂದರ್ಭದಲ್ಲಿ ಕರೀನಾ ಕಪೂರ್​ ಅವರ ಹಳೆಯ ವಿಡಿಯೋ ಒಂದು ಈಗ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದೇನೆಂದರೆ, ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎಂದೇ ಫೇಮಸ್​ ಆಗಿರೋ ಕಾಂಗ್ರೆಸ್​ ನಾಯಕ, ರಾಹುಲ್​​ ಗಾಂಧಿ ಜೊತೆ ನಟಿ ಡೇಟಿಂಗ್​ ಮಾಡೋ ಆಸೆ ವ್ಯಕ್ತಪಡಿಸಿದ್ದರು. ಆದರೆ ಇದುವರೆಗೂ ನಟಿಯ ಆಸೆ ಇನ್ನೂ ಈಡೇರಲಿಲ್ಲವಂತೆ!

Related Articles

Related image1
53 ಕ್ಷೇತ್ರಗಳಲ್ಲಿ 'ಕೈ' ಸೋಲಿಗೆ ಕಾರಣವಾದ ರಾಹುಲ್​ ಗಾಂಧಿ ನಾಯಿ? ಏನಿದು ರೋಚಕ ಘಟನೆ?
Related image2
ಎಲ್ಲರೆದುರು ಅಮ್ಮನ ಎದೆಹಾಲು ಕುಡಿದ IPS ಅಧಿಕಾರಿ: ಭಾರಿ ಚರ್ಚೆ ಹುಟ್ಟುಹಾಕಿದೆ ವೈರಲ್​ ವಿಡಿಯೋ
36
ಸಂದರ್ಶನದಲ್ಲಿ ರಿವೀಲ್​
Image Credit : Asianet News

ಸಂದರ್ಶನದಲ್ಲಿ ರಿವೀಲ್​

ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಈಕೆಗೆ 'ನೀವು ಯಾರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ' ಎಂದು ಕೇಳಿದ್ದಾಗ ಆಕೆ ಕೊಟ್ಟ ಉತ್ತರ 'ರಾಹುಲ್ ಗಾಂಧಿ' ಎಂದರು. ಅಷ್ಟಕ್ಕೂ ನೀವ್ಯಾಕೆ ಅವರನ್ನು ಆಯ್ದುಕೊಂಡಿದ್ದೀರಿ ಎಂದು ಕೇಳಿದಾಗ ಕರೀನಾ, 'ನೋಡಿ ನಾನು ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ ಕುಟುಂಬಕ್ಕೆ ಸೇರಿದವಳು. ನನ್ನ ಅಪ್ಪ, ಅಜ್ಜ ಈಗ ಗಂಡ ಸೈಫ್​ ಅಲಿ ಖಾನ್​ (Saif Ali Khan) ಎಲ್ಲರೂ ಸಿನಿಮಾ ಕ್ಷೇತ್ರದಲ್ಲಿ ಸೇರಿದವರು. ನನಗೆ ರಾಜಕೀಯ (Political) ಕ್ಷೇತ್ರದ ಬಗ್ಗೆ ತಿಳಿಯುವ ಕುತೂಹಲ ಎಂದಿದ್ದರು.

46
ರಾಹುಲ್​ ಯಾಕೆ?
Image Credit : Asianet News

ರಾಹುಲ್​ ಯಾಕೆ?

ಅದಕ್ಕಾಗಿಯೇ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅವರು ರಾಜಕೀಯ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಕಾರಣ, ಅವರ ಜೊತೆ ಡೇಟಿಂಗ್​ ಮಾಡಿದರೆ ಎಲ್ಲವನ್ನೂ ತಿಳಿದುಕೊಳ್ಳಬಹುದು' ಎಂದಿದ್ದರು. 'ನಾನು ರಾಹುಲ್​ ಗಾಂಧಿಯವರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ, ನಾನು ಅವರ ಫೋಟೋಗಳನ್ನು ನೋಡುತ್ತಿದ್ದೇನೆ. ಅವರ ಜೊತೆ ಮಾತನಾಡಬೇಕು, ಡೇಟಿಂಗ್​ ಮಾಡಬೇಕು ಎನ್ನುವ ಆಸೆ' ಇದೆ ಎಂದಿದ್ದರು.

56
ಪ್ರಧಾನಿಯಾಗಿ ನೋಡಲು ಇಷ್ಟ
Image Credit : Social Media

ಪ್ರಧಾನಿಯಾಗಿ ನೋಡಲು ಇಷ್ಟ

ಇದು ಇತ್ತೀಚಿನ ಸಂದರ್ಶನದ ಮಾತಾಯಿತು. ಅದರ ಮುಂದುವರೆದ ಭಾಗವಾಗಿ ಈಗ ಅದೇ ಪ್ರಶ್ನೆಯನ್ನು ಕರೀನಾ ಮುಂದೆ ಇಡಲಾಗಿತ್ತು. ಕ್ಯಾಚ್‌ನ್ಯೂಸ್‌ ಇವರ ಜೊತೆ ಸಂದರ್ಶನ ನಡೆಸಿತ್ತು. ಆಗ ಕರೀನಾ ಇನ್ನೂ ತಮ್ಮ ಈ ಆಸೆ ಈಡೇರಲಿಲ್ಲ ಎಂದು ನೇರಾನೇರವಾಗಿಯೇ ಹೇಳಿದ್ದಾರೆ. 'ಈಗಲೂ ನನ್ನ ಆಸೆ ಈಡೇರಲಿಲ್ಲ. ಈಗಲೂ ನನಗೆ ರಾಹುಲ್​ ಗಾಂಧಿ ಜೊತೆ ಡೇಟಿಂಗ್​ ಮಾಡುವ ಆಸೆ. ಅವರನ್ನು ಆತಿಥಿಯಾಗಿ ನಮ್ಮ ಮನೆಗೆ ಬರಮಾಡಿಕೊಳ್ಳಲು ಇಷ್ಟಪಡುತ್ತೇನೆ. ನಾನು ಅವರನ್ನು ಪ್ರಧಾನಿಯಾಗಿ (Prime Minister) ನೋಡಲು ಬಯಸುತ್ತೇನೆ' ಎಂದಿದ್ದಾರೆ.

66
ಇಬ್ಬರ ವಯಸ್ಸೆಷ್ಟು?
Image Credit : instagram

ಇಬ್ಬರ ವಯಸ್ಸೆಷ್ಟು?

ಅಂದಹಾಗೆ ಕರೀನಾ ಕಪೂರ್​, 2012 ರಲ್ಲಿ ನಟ ಸೈಫ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ ಸೈಫ್‌ಗೆ ತೈಮೂರ್ ಮತ್ತು ಜಹಾಂಗೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈಗ ಕರೀನಾಗೆ 45 ವರ್ಷ ವಯಸ್ಸು ಹಾಗೂ ಸೈಫ್​ಗೆ 55 ವರ್ಷ. ಕರೀನಾಗೂ ಮದುವೆಯಾಗುವ ಮುಂಚೆ ಸೈಫ್​ ನಟಿ ಅಮೃತಾ ಸಿಂಗ್​ ಅವರನ್ನು ಮದುವೆಯಾಗಿದ್ದರು. 1991ರಲ್ಲಿ ಇವರ ಮದುವೆ (Wedding) ನಡೆದಿತ್ತು, 2004ರಲ್ಲಿ ಡಿವೋರ್ಸ್​ (Divorce) ಪಡೆದುಕೊಂಡಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರೀನಾ ಕಪೂರ್
ಸೈಫ್ ಅಲಿ ಖಾನ್
ರಾಹುಲ್ ಗಾಂಧಿ
ಸಂಬಂಧಗಳು
ಮದುವೆ
ರಾಜಕೀಯ ಸುದ್ದಿ

Latest Videos
Recommended Stories
Recommended image1
ಎಲ್ಲರೆದುರು ಅಮ್ಮನ ಎದೆಹಾಲು ಕುಡಿದ IPS ಅಧಿಕಾರಿ: ಭಾರಿ ಚರ್ಚೆ ಹುಟ್ಟುಹಾಕಿದೆ ವೈರಲ್​ ವಿಡಿಯೋ
Recommended image2
MRI ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಜೊತೆಗೆ ಮೆಷಿನ್ ಒಳಗೆ ಹೋದ ಅಪ್ಪ
Recommended image3
ಪೋಸ್ಟಿಂಗ್ ಜೀರೋ: ಜೆನ್‌ ಝೀ ಯುವಕ ಯುವತಿಯರ ಅಜ್ಞಾತ ಲೋಕ
Related Stories
Recommended image1
53 ಕ್ಷೇತ್ರಗಳಲ್ಲಿ 'ಕೈ' ಸೋಲಿಗೆ ಕಾರಣವಾದ ರಾಹುಲ್​ ಗಾಂಧಿ ನಾಯಿ? ಏನಿದು ರೋಚಕ ಘಟನೆ?
Recommended image2
ಎಲ್ಲರೆದುರು ಅಮ್ಮನ ಎದೆಹಾಲು ಕುಡಿದ IPS ಅಧಿಕಾರಿ: ಭಾರಿ ಚರ್ಚೆ ಹುಟ್ಟುಹಾಕಿದೆ ವೈರಲ್​ ವಿಡಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved