ಬ್ರಹ್ಮಗಂಟು ಸೀರಿಯಲ್ನಲ್ಲಿ ನರಸಿಂಹನ ಪಾತ್ರದಲ್ಲಿ ನಟಿಸ್ತಿರೋ ಭರತ್ ನಾಯಕ್ ಅವರ ರಿಯಲ್ ಪತ್ನಿ ಯಾರು? ಇವರ ಸ್ಟೋರಿ ಕೇಳಿ...
ತಂಗಿ ದೀಪಾಳಿಗಾಗಿ, ಆಕೆಯ ಸುಖಕ್ಕಾಗಿ ಏನು ಬೇಕಾದರೂ ಮಾಡಲು ತಯಾರು ಇರುವ ಅಣ್ಣ ನರಸಿಂಹ. ನಾಯಕ ಚಿರು ಅತ್ತಿಗೆ ಸೌಂದರ್ಯ, ಮೋಸದಿಂದ ತನ್ನ ತಮ್ಮನನ್ನು ಸಂಜನಾ ಜೊತೆ ಮದುವೆ ಮಾಡಲು ನೋಡಿದಾಗ ಆಕೆಗೆ ಖುದ್ದು ತಾಳಿ ಕಟ್ಟಿ ತಂಗಿಯ ಜೀವನ ಕಾಪಾಡಿದವನೇ ಈ ನರಸಿಂಹ. ಇದಕ್ಕೂ ಮುನ್ನ ನರಸಿಂಹನನ್ನು ಪ್ರೀತಿ ಮಾಡಿದಂತೆ ಮಾಡಿ ಮೋಸ ಮಾಡಿದ ವಂಚಕಿ ಸಂಜನಾ. ಈಗ ಇಬ್ಬರೂ ಪತಿ-ಪತ್ನಿಯಾಗಿದ್ದಾರೆ. ಆದರೆ ತನ್ನನ್ನು ಹೀಗೆ ಮಾಡಿದ ನರಸಿಂಹನಿಗೆ ಚಿತ್ರಹಿಂಸೆ ಕೊಡಲು ಹೆಜ್ಜೆ ಹೆಜ್ಜೆಗೂ ರೆಡಿ ಇದ್ದಾಳೆ ಸಂಜನಾ. ನರಸಿಂಹನಿಗೆ ನೋವು ತರಿಸುವುದಕ್ಕಾಗಿ ಆತನ ಅಪ್ಪ-ಅಮ್ಮನಿಗೂ ಹಿಂಸೆ ಕೊಡುತ್ತಿದ್ದಾಳೆ. ಸಿಂಹದಂತೆ ಮೆರೆಯುತ್ತಿದ್ದ ನರಸಿಂಹ ಈಗ ಮನೆಯವರಿಗಾಗಿ ಇಲಿಯಾಗಿದ್ದು, ಒಂದು ಹಂತದಲ್ಲಿ ಪತ್ನಿ ಸಂಜನಾಳ ಕಾಲನ್ನೂ ಹಿಡಿದಿದ್ದಾನೆ. ಆದರೆ ಚಿತ್ರಹಿಂಸೆ ಕೊಡುವುದಕ್ಕಾಗಿಯೇ ಬಂದ ಸಂಜನಾ ಆತನ ಬಾಳಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತಿದ್ದಾಳೆ.
ಇದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್ ಸ್ಟೋರಿ. ಇದರಲ್ಲಿ ನಾಯಕಿ ದೀಪಾಳ ಅಣ್ಣನಾಗಿದ್ದಾನೆ ನರಸಿಂಹ. ನರಸಿಂಹ ಪಾತ್ರಧಾರಿಯ ಅಸಲಿ ಹೆಸರು ಭರತ್ ನಾಯಕ್. ಸೀರಿಯಲ್ನಲ್ಲಿ ಪತ್ನಿಯ ಕೈಗೆ ಸಿಕ್ಕು ನರಳಾಡುತ್ತಿರೋ ನರಸಿಂಹ ಅರ್ಥಾತ್ ಭರತ್ ಅವರ ರಿಯಲ್ ಪತ್ನಿ ಅಷ್ಟೇ ಕ್ಯೂಟ್ ಆ್ಯಂಡ್ ಸಾಫ್ಟ್. ಇವರಿಬ್ಬರ ಸ್ಟೋರಿ ಇಲ್ಲಿದೆ. ಅಷ್ಟಕ್ಕೂ ನರಸಿಂಹ ರೂಪದಲ್ಲಿ ಮೊದಲಿಗೆ ಹುಲಿಯಾಗಿ ಕಾಣಿಸಿಕೊಂಡಾಗಲೇ ಹಲವು ವೀಕ್ಷಕರಿಗೆ ನಟನ ಮೇಲೆ ಕ್ರಷ್ ಆಗಿತ್ತು. ಕಮೆಂಟ್ಸ್ಗಳಲ್ಲಿಯೂ ರೂಪವನ್ನು ಹೊಗಳುತ್ತಿದ್ದರು. ಆದರೆ ಅಸಲಿಗೆ ಅವರಿಗೆ ಇದಾಗಲೇ ಮದುವೆಯೂ ಆಗಿದ್ದು, ರಿಯಲ್ ಪತ್ನಿಯ ಜೊತೆ ಆಗಾಗ್ಗೆ ಫೋಟೋಶೂಟ್ಗಳನ್ನೂ ಮಾಡಿಸಿಕೊಳ್ಳುತ್ತಾರೆ.
ಅಂದಹಾಗೆ ಭರತ್ ಅವರು ಅಸಲಿಗೆ ಸಿಂಗರ್. ಅವರದ್ದೇ ಆದ ಮ್ಯೂಸಿಕ್ ಬ್ಯಾಂಡ್ ಇದೆ. ರಂಗಭೂಮಿ ಕಲಾವಿದರೂ ಹೌದು. ಈಗ ಬ್ರಹ್ಮಗಂಟು ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ. ಇವರ ರಿಯಲ್ ಪತ್ನಿಯ ಹೆಸರು ಪ್ರತಿಭಾ. ಮದುವೆಯಾಗಿ ನಾಲ್ಕನೇ ವರ್ಷಕ್ಕೆ ಜೋಡಿ ಕಾಲಿಟ್ಟಿದೆ. ಈ ದಂಪತಿ ಆಗಾಗ್ಗೆ ಕ್ಯೂಟ್ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇವರು ಪತ್ನಿಯ ಜೊತೆಗೂಡಿ ಕಲಾಧರ ಕ್ರಿಯೇಷನ್ಸ್ ಎನ್ನುವ ಇವೆಂಟ್ ಮ್ಯಾನೇಜ್ಮೆಂಟ್ ಅನ್ನು ಕೂಡ ನಡೆಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ ಭರತ್. ಸದ್ಯ ರೂಪ ಅವರ ಅಣ್ಣನ ಪಾತ್ರದಲ್ಲಿ ಭರತ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಭರತ್ ಅವರ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ.
