ಬ್ರಹ್ಮಗಂಟು ಶೂಟಿಂಗ್ ವೇಳೆ ದೀಪಾಳನ್ನು ಹಿಡಿಯಲು ಹೋಗಿ ಹೀಗೆ ಬೀಳಿಸೋದಾ ಹಜ್ಬಂಡು ಚಿರು? ವಿಡಿಯೋ ವೈರಲ್ ಆಗಿದೆ...
ಹಜ್ಬಂಡು ಹಜ್ಬಂಡು ಎನ್ನುತ್ತಲೇ ಮುಂಗೋಪಿ ಗಂಡ ಚಿರುನನ್ನು ತನ್ನ ಒಳ್ಳೆಯತನದಿಂದ ಪ್ರೀತಿಯ ಬಲೆಗೆ ಸಿಲುಕಿಸಿದವಳು ದೀಪಾ. ಸೌಂದರ್ಯಳ ಮೋಸದಿಂದ ಗಂಡನಿಗೇ ಇಷ್ಟವಿಲ್ಲದಿದ್ದರೂ ಇನ್ನೊಂದು ಮದುವೆಗೆ ಮುಂದಾಗಿದ್ದಳು ದೀಪಾ. ದೀಪಾಳ ಒಳ್ಳೆಯತನದಿಂದ ಆಕೆಯನ್ನು ಲವ್ ಮಾಡಲು ಶುರು ಮಾಡಿರೋ ಚಿರುಗೆ ಇದು ಅರಗಿಸಿಕೊಳ್ಳಲಾಗದಿದ್ದರೂ ಆಣೆಗೆ ಕಟ್ಟುಬಿದ್ದು ಮತ್ತೊಂದು ಮದುವೆಗೆ ಅಣಿಯಾಗಿದ್ದ. ಆದರೆ ಇವರದ್ದು ಬ್ರಹ್ಮಗಂಟು ತಾನೆ? ಆ ಮದುವೆ ಸಾಧ್ಯವಾಗಲಿಲ್ಲ. ಸದ್ಯ ಈ ಸೀರಿಯಲ್ ಇಷ್ಟರಮಟ್ಟಿಗೆ ಬಂದು ನಿಂತಿದೆ. ಆದರೆ ಸೀರಿಯಲ್ ಶೂಟಿಂಗ್ ವೇಳೆ ಆದ ಎಡವಟ್ಟಿನ ವಿಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಚಿರು ದೀಪಾಳ ಕೈಹಿಡಿದುಕೊಳ್ಳುವ ದೃಶ್ಯವಿದೆ. ಈ ಸಂದರ್ಭದಲ್ಲಿ ದೀಪಾಳನ್ನು ಚಿರು ಬೀಳಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಇನ್ನು ಇವರಿಬ್ಬರ ಕುರಿತು ಹೇಳುವುದಾದರೆ, ದೀಪಾಳ ನಿಜವಾದ ಹೆಸರು ದಿಯಾ ಪಾಲಕ್ಕಲ್ (Diya Palakkal). ಸೀರಿಯಲ್, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್ ಮಾಡುವುದು ಇದೆ. ಆದರೆ ಈ ಸೀರಿಯಲ್ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್ ಮಾಡಲಾಗಿದೆ. ಅಸಲಿಗೆ ದೀಪಾ ಅಂದರೆ ದಿಯಾ ಸೀರಿಯಲ್ನಲ್ಲಿ ಕಾಣುವ ಹಾಗೆ ರಿಯಲ್ ಲೈಫ್ನಲ್ಲಿ ಇಲ್ಲ. ಆದರೆ ಈಕೆ ನಿಜಕ್ಕೂ ಹೀಗೆಯೇ ಇದ್ದಾಳಾ ಎನ್ನುವಷ್ಟರ ಮಟ್ಟಿಗೆ ಈಕೆಯನ್ನು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಸೀರಿಯಲ್, ಸಿನಿಮಾಗಳಲ್ಲಿ ಹೀರೋಯಿನ್ ಆಗಲು ಯಾವ್ಯಾವ ರೀತಿಯ ಕ್ವಾಲಿಟಿಗಳು ಇರಬೇಕೋ, ಯಾವ ರೀತಿಯಲ್ಲಿ ಗ್ಲಾಮರಸ್ ಲುಕ್ ಇರಬೇಕೋ ಎಲ್ಲವೂ ರಿಯಲ್ ಲೈಫ್ನಲ್ಲಿ ದಿಯಾ ಅವರಿಗೆ ಇದೆ. ಮಾಡರ್ನ್ ಗರ್ಲ್ ಆಗಿ, ಹಳ್ಳಿಯ ಹುಡುಗಿಯಾಗಿ, ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡು ಫೋಟೋಶೂಟ್ ಕೂಡ ಮಾಡಿಸಿಕೊಳ್ಳುತ್ತಾರೆ ದಿಯಾ.
ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.
ಚಿರು ಕುರಿತು ಹೇಳುವುದಾದರೆ, ಇವರ ಹೆಸರು ಭುವನ್ ಸತ್ಯ ಅವರು, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇನ್ನು ಬ್ರಹ್ಮಗಂಟು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಅತ್ತಿಗೆಯ ಮಾತು ಕೇಳಿ ಪತ್ನಿಯನ್ನೇ ದೂಷಿಸುವ, ಪತ್ನಿ ಕಂಡರೆ ಕಿರಿಕಿರಿ ಮಾಡುವ ಚಿರುಗೆ ಈಗ ಪತ್ನಿ ದೀಪಾಳ ಮೇಲೆ ಲವ್ ಶುರುವಾಗಿದೆ. ದೀಪಾ ಮತ್ತು ಚಿರು ಯಾವುದೇ ಕಾರಣಕ್ಕೂ ಒಂದಾಗಬಾರದು ಎಂದು ಅತ್ತಿಗೆ ಸೌಂದರ್ಯ, ಚಿರುನಿಗೆ ಮತ್ತೊಂದು ಮದ್ವೆ ಮಾಡಲು ನೋಡಿದ್ದಳು. ಇದೇ ವೇಳೆ ಚಿರು ಮಾತ್ರ ದೀಪಾಳ ಲವ್ನಲ್ಲಿ ಬಿದ್ದಿದ್ದಾನೆ. ಆದ್ರೆ ದೀಪಾಳ ಆಣೆಯಿಂದ ಮದುವೆಯಾಗಲು ರೆಡಿಯಾಗಿದ್ದ. ಆದರೆ ಅದು ತಪ್ಪಿಹೋಗಿದೆ.

