ಕಲಾವಿದನಾಗಿ ಜನತೆಗೆ ಪರಿಚಯಗೊಂಡೆ. ಜನ ಎಲ್ಲೇ ಹೋದರೂ ಗುರುತಿಸುವುದು ಈ ಬಣ್ಣದ ನಂಟು ಮತ್ತು ಅದರ ಬದುಕಿನಿಂದಲೇ. ಈಗ ನನಗೆ 75 ವರ್ಷ ಆಗಿದೆ. ಜತೆಗೆ ನಾನು ಬಣ್ಣದ ಬದುಕಿಗೆ ಬಂದು 50 ವರ್ಷಗಳಾಗುತ್ತಿವೆ. 

ಸರ್ವೆ ಇಲಾಖೆಯ ಉದ್ಯೋಗಿ, ರಂಗಭೂಮಿ ಕಲಾವಿದ, ಚಿತ್ರರಂಗದಲ್ಲಿ ನಾಯಕ, ನಿರ್ಮಾಪಕ, ಪೋಷಕ ಕಲಾವಿದ ಹಾಗೂ ಕಿರುತೆರೆಯ ನಟ ಶ್ರೀನಿವಾಸಮೂರ್ತಿ ಅವರಿಗೆ 75. ಅವರು ಚಿತ್ರರಂಗಕ್ಕೆ ಬಂದು 50. ಈ ಎರಡೂ ಎರಡು ನಾಟಕಗಳು ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ರಮೇಶ್‌ ಭಟ್‌ ಮತ್ತು ಶ್ರೀನಿವಾಸಮೂರ್ತಿ ನಾಟಕಗಳ ಪಾತ್ರಧಾರಿಗಳು. ತರಕಾರಿ ಚೆನ್ನಿ ಮತ್ತು ಸದಾರಮೆ ಕಳ್ಳ ನಾಟಕಗಳಲ್ಲಿ ರಮೇಶ್‌ ಭಟ್‌ ಮತ್ತು ಶ್ರೀನಿವಾಸಮೂರ್ತಿ ನಟಿಸುತ್ತಿದ್ದಾರೆ. ಮೇ 15 ಮತ್ತು 16ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ.

‘ಕಲಾವಿದನಾಗಿ ಜನತೆಗೆ ಪರಿಚಯಗೊಂಡೆ. ಜನ ಎಲ್ಲೇ ಹೋದರೂ ಗುರುತಿಸುವುದು ಈ ಬಣ್ಣದ ನಂಟು ಮತ್ತು ಅದರ ಬದುಕಿನಿಂದಲೇ. ಈಗ ನನಗೆ 75 ವರ್ಷ ಆಗಿದೆ. ಜತೆಗೆ ನಾನು ಬಣ್ಣದ ಬದುಕಿಗೆ ಬಂದು 50 ವರ್ಷಗಳಾಗುತ್ತಿವೆ. ಈ ನೆನಪಿನಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ನನ್ನ ಬದುಕಿಗೆ ನಾನು ಸಾರ್ಥಕತೆ ಕಂಡುಕೊಳ್ಳುತ್ತಿರುವೆ’ ಅಂದರು ಶ್ರೀ. 300 ಪ್ಲಸ್‌ ಚಿತ್ರಗಳಲ್ಲಿ ನಟಿಸಿರುವ ಶ್ರೀ ಹೇಳುತ್ತಾರೆ. ನಾನು ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೆ ಇಲಾಖೆಯಲ್ಲಿ ಉದ್ಯೋಗಿ ಆಗಿದ್ದೆ. ನಾಟಕದ ರುಚಿ ಹತ್ತಿಸಿಕೊಂಡೆ. 

ನರೇಶ್​, ಪವಿತ್ರಾ ಲೋಕೇಶ್​ 'ಮತ್ತೆ ಮದುವೆ'ಗೆ ಡೇಟ್​ ಫಿಕ್ಸ್​- ಕಿಸ್ಸಿಂಗ್​ ಟೀಸರ್​ ಬಿಡುಗಡೆ

ಒಮ್ಮೆ ಬಂಗಾರಪ್ಪ ನನ್ನ ನಾಟಕ ನೋಡಲು ಬಂದರು. ಇನ್ನು ಮೇಲೆ ಇಲಾಖೆಯಲ್ಲಿ ಇವರಿಗೆ ಏನೂ ಕೆಲಸ ಹೇಳಬೇಡಿ. ಕಲಾವಿದರಾಗಿ ಹೆಚ್ಚು ತೊಡಗಿಸಿಕೊಳ್ಳಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲಿಂದ ನಟನೆ ಹೆಚ್ಚಾಯಿತು. ಬೇರೆ ಭಾಷೆಗಳಿಂದಲೂ ಕರೆ ಬಂದಿತ್ತು. ‘300 ಕಾಲತ್ತಿಲ್‌’ ತಮಿಳು ಚಿತ್ರಕ್ಕೆ ಹೀರೋ ಆದೆ. ಬಿಡುಗಡೆ ಹೊತ್ತಲ್ಲಿ ನಿರ್ಮಾಪಕರು ಅರೆಸ್ಟ್‌ ಆದರು. ಮುಂದೆ ‘ಅಪ್ಪು’ ಚಿತ್ರದಲ್ಲಿ ನನ್ನ ಪಾತ್ರ ನೋಡಿದ ನಿರ್ದೇಶಕ ಪುರಿ ಜಗನ್ನಾಥ್‌ ಅವರು ತೆಲುಗಿಗೆ ನನ್ನ ಕರೆದರು. ನಾನು ಇಲ್ಲಿ ಬ್ಯುಸಿ ಆದೆ. ಅವರು ಕರೆದಾಗ ಹೋಗಲಿಲ್ಲ. 

ಪರಭಾಷೆಗಳಲ್ಲಿ ನಟಿಸುವ ಕನಸು ಹಾಗೆ ಉಳಿದು ಹೋಯಿತು. ‘ನೀನು ಯಾಕೆ ತಮಿಳು ಚಿತ್ರಗಳಲ್ಲಿ ಬಂದು ನಟಿಸಬಾರದು. ಬಾ ಇಲ್ಲಿಗೆ’ ಅಂತ ರಜನಿಕಾಂತ್‌ ಆಗಾಗ ಕರೆಯುತ್ತಿರುತ್ತಾರೆ ಅಷ್ಟೆ’. ನಂತರ ಶ್ರೀ ಕಷ್ಟ ಸುಖ ಹಂಚಿಕೊಂಡರು. ‘ಚಿತ್ರರಂಗಕ್ಕೆ ಬಂದ ಮೇಲೆ ಅಸ್ತಿ ಮಾಡಿದೆ. ಅದನ್ನು ಸಿನಿಮಾ ನಿರ್ಮಿಸಿ ಕಳೆದುಕೊಂಡೆ. ಹೊಸಬರು ಚಿತ್ರರಂಗಕ್ಕೆ ಬಂದಿದ್ದಾರೆ. ಹೊಸಬರು ನಮ್ಮಂಥವರನ್ನು ಕರೆಯಲ್ಲ. ಆಗೀಗ ಒಂದೊಂದು ಸಿನಿಮಾ ಬರುತ್ತದೆ. ಮಗ ನವೀನ್‌ ಕೃಷ್ಣ ಕೂಡ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಯಾವುದೇ ಸಾಲ ಇಲ್ಲದೆ ಬಾಡಿಗೆ ಮನೆಯಲ್ಲಿ ನಮ್ಮ ಕುಟುಂಬ ಖುಷಿಯಾಗಿದೆ’.

ಸಮಂತಾ- ಅನುಷ್ಕಾ ಫ್ಯಾನ್ಸ್​ಗೆ ಗುಡ್​ ನ್ಯೂಸ್​: ಇಬ್ಬರನ್ನೂ ಒಟ್ಟಿಗೇ ನೋಡುವ ಭಾಗ್ಯ

ಯಾರು ಕೇಳ್ತಾರೆ ನನ್ನ ಮಾತು?: ‘ತಂದೆ, ತಾತ, ದೊಡ್ಡಪ್ಪನ ರೋಲು ಮಾಡಿಕೊಂಡಿರುವವನು ನಾನು. ನನ್ನ ಮಾತು ಯಾರು ಕೇಳುತ್ತಾರೆ. ಕಲಾವಿದರ ಸಂಘ ಹೇಗಿರಬೇಕು, ಪೋಷಕರ ಕಲಾವಿದರ ಸಂಕಷ್ಟಗಳೇನು, ಕಲಾವಿದರ ಸಂಘಕ್ಕೆ ಚುನಾವಣೆ ಮಾಡಿ ಎಂಬಿತ್ಯಾದಿಗಳನ್ನು ನಾನು ಹೇಳಕ್ಕೆ ಆಗುತ್ತದೆಯೇ? ಅದನ್ನು ದೊಡ್ಡ ಹೀರೋಗಳು ಅನಿಸಿಕೊಂಡವರು ಹೇಳಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೇ ನೋಡಿ, ಗೆದ್ದವರ ಮೇಲೆ ಸೋತವರು ಕೇಸು ಹಾಕುತ್ತಾರೆ. ಗೆದ್ದರೂ ಏನು ಕೆಲಸ ಮಾಡಕ್ಕೆ ಆಗುತ್ತದೆ?