Thalapathy Vijay TVK Election Result: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ 37 ಸ್ಥಾನಗಳನ್ನು ಗೆದ್ದರೆ, ಅವರು ಮುಖ್ಯಮಂತ್ರಿ ಆಗಲು ಸಾಧ್ಯವೇ? 2018ರಲ್ಲಿ ಕರ್ನಾಟಕದಲ್ಲಿ ನಡೆದ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸಿನಿಮಾಗಳಲ್ಲಿ ಕಮಾಲ್ ಮಾಡಿರುವ ನಟ ದಳಪತಿ ವಿಜಯ್ ( Thalapathy Vijay ) ಈ ಬಾರಿ ಸಿಎಂ ಆಗ್ತಾರಾ? 37 ಸೀಟ್ ಗೆದ್ದರೆ ಸಿಎಂ ಆಗೋ ಸಾಧ್ಯತೆ ಇದೆಯಾ ಎಂಬ ಪ್ರಶ್ನೆ ಎದ್ದಿದೆ.
37 ಸ್ಥಾನ ಗೆದ್ದರೆ ವಿಜಯ್ ಸಿಎಂ ಆಗಲು ಸಾಧ್ಯವೇ?
ನಟ ಮತ್ತು 'ತಮಿಳಗ ವೆಟ್ರಿ ಕಳಗಂ' (TVK) ಅಧ್ಯಕ್ಷ ವಿಜಯ್, 2026ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ವಿಜಯ್ ಅವರು ತಿರುಚ್ಚಿ ಪೂರ್ವ ಮತ್ತು ಪೆರಂಬೂರ್ ಕ್ಷೇತ್ರಗಳಲ್ಲಿ ವಿಸಿಲ್ ಚಿಹ್ನೆಯಡಿ ಸ್ಪರ್ಧಿಸುತ್ತಾರೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರ ಭದ್ರಕೋಟೆಯಾದ ಎಡಪ್ಪಾಡಿ ಕ್ಷೇತ್ರದಲ್ಲಿ, ಟಿವಿಿಕೆ ಅಭ್ಯರ್ಥಿ ಹಿಂದೆ ಸರಿದ ಕಾರಣ, ವಿಜಯ್ ಅಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.
ತಮಿಳುನಾಡು ಚುನಾವಣೆ ಫಲಿತಾಂಶ 2026
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಚುನಾವಣೆ ನಡೆದು, ಸುಮಾರು 85% ಮತದಾನವಾಗಿದೆ. ಚುನಾವಣೆ ಮುಗಿದ ಒಂದು ವಾರದ ನಂತರ, ಹಲವು ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳು ಬಿಡುಗಡೆಯಾಗಿ, ತೀವ್ರ ಚರ್ಚೆಗೆ ಕಾರಣವಾಗಿವೆ.
ಟಿವಿಕೆ ವಿಜಯ್ 2026 ಚುನಾವಣೆ
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಡಿಎಂಕೆ ಪಕ್ಷವೇ ಮತ್ತೆ ಸರ್ಕಾರ ರಚಿಸಲಿದೆ ಎಂದು ಹಲವು ಸಂಸ್ಥೆಗಳು ಹೇಳಿವೆ. ಆದರೂ, ವಿಜಯ್ ಅವರ ಟಿವಿಿಕೆ ಪಕ್ಷವೂ ಹಲವು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. Axis My India (India Today) ಸಮೀಕ್ಷೆಯು ಟಿವಿಿಕೆ 98 ರಿಂದ 120 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಹೇಳಿದೆ. ಇದೇ ವೇಳೆ, ಡಿಎಂಕೆ 125-145 ಮತ್ತು ಎಐಎಡಿಎಂಕೆ 60-70 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.
ವಿಜಯ್ vs ಎಂ.ಕೆ. ಸ್ಟಾಲಿನ್ 2026
ಇತರ ಸಂಸ್ಥೆಗಳು ಬಿಡುಗಡೆ ಮಾಡಿದ ಸಮೀಕ್ಷೆಗಳ ಪ್ರಕಾರ, Praja Poll (1-9), P-Marq (16-26), Kamakhya Analytics (67-81), ಮತ್ತು JVC (8-15) ಸ್ಥಾನಗಳನ್ನು ಟಿವಿಿಕೆಗೆ ನೀಡಿವೆ. ಒಂದು ವೇಳೆ ವಿಜಯ್ ಅವರ ಪಕ್ಷ 37 ಸ್ಥಾನಗಳನ್ನು ಗೆದ್ದರೆ, ಅವರು ಮುಖ್ಯಮಂತ್ರಿ ಆಗಲು ಸಾಧ್ಯವೇ?
ಟಿವಿಕೆ ಎಕ್ಸಿಟ್ ಪೋಲ್ 2026
ತಮಿಳುನಾಡು ವಿಧಾನಸಭೆಯ ನಿಯಮಗಳ ಪ್ರಕಾರ, ಮುಖ್ಯಮಂತ್ರಿಯಾಗಲು 37 ಸ್ಥಾನಗಳು ಸಾಕಾಗುವುದಿಲ್ಲ. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 234 ಸ್ಥಾನಗಳಿವೆ. ಸರ್ಕಾರ ರಚಿಸಲು ಒಂದು ಪಕ್ಷ ಅಥವಾ ಮೈತ್ರಿಕೂಟವು ಶೇ. 50ಕ್ಕಿಂತ ಹೆಚ್ಚು, ಅಂದರೆ ಕನಿಷ್ಠ 118 ಸ್ಥಾನಗಳನ್ನು ಗೆಲ್ಲಲೇಬೇಕು.
37 ಸ್ಥಾನ ಸಿಕ್ಕರೆ ಏನಾಗಬಹುದು?
ನಟ ದಳಪತಿ ವಿಜಯ್ ಅವರ ( Thalapathy Vijay ) 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ 37 ಸ್ಥಾನಗಳನ್ನು ಗೆದ್ದರೆ, ಅವರು ಮೈತ್ರಿ ಸರ್ಕಾರದ ಮೂಲಕವೇ ಸಿಎಂ ಆಗಬಹುದು. ಇತರ ಪಕ್ಷಗಳು ಟಿವಿಿಕೆ ಜೊತೆ ಕೈಜೋಡಿಸಿ, ಒಟ್ಟು ಸ್ಥಾನಗಳ ಸಂಖ್ಯೆ 118 ದಾಟಿದರೆ ಮಾತ್ರ ಇದು ಸಾಧ್ಯ. ಆದರೆ, ದೊಡ್ಡ ಪಕ್ಷಗಳು ವಿಜಯ್‌ಗೆ ಬೆಂಬಲ ನೀಡುತ್ತವೆಯೇ ಎಂಬುದು ರಾಜಕೀಯ ಸನ್ನಿವೇಶವನ್ನು ಅವಲಂಬಿಸಿದೆ. ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೆ, ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ.
2018ರ ಕರ್ನಾಟಕ ಚುನಾವಣಾ ಮಾದರಿ
ಇತ್ತೀಚಿನ ಸಮೀಕ್ಷೆಗಳು ಮತ್ತು ಎಕ್ಸಿಟ್ ಪೋಲ್‌ಗಳ ಪ್ರಕಾರ, 'ತಮಿಳಗ ವೆಟ್ರಿ ಕಳಗಂ' ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಊಹಿಸಲಾಗಿದೆ. ಹೊಸ ಪಕ್ಷಕ್ಕೆ 37 ಸ್ಥಾನಗಳು ದೊಡ್ಡ ಶಕ್ತಿಯಾದರೂ, ಸ್ವಂತವಾಗಿ ಸರ್ಕಾರ ರಚಿಸಲು ಅಥವಾ ನೇರವಾಗಿ ಮುಖ್ಯಮಂತ್ರಿಯಾಗಲು ಇದು ಸಾಕಾಗುವುದಿಲ್ಲ. ಇತರ ಪಕ್ಷಗಳ ಬೆಂಬಲವಿಲ್ಲದೆ 37 ಸ್ಥಾನಗಳನ್ನು ಇಟ್ಟುಕೊಂಡು ಸರ್ಕಾರ ರಚಿಸಲು ಸಾಧ್ಯವಿಲ್ಲ.
2018ರ ಕರ್ನಾಟಕ ವಿಧಾನಸಭಾ ಚುನಾವಣೆ
ಇದಕ್ಕೆ ಅತ್ಯುತ್ತಮ ಉದಾಹರಣೆ 2018ರ ಕರ್ನಾಟಕ ವಿಧಾನಸಭಾ ಚುನಾವಣೆ. ಒಟ್ಟು 224 ಸ್ಥಾನಗಳಿರುವ ಕರ್ನಾಟಕದಲ್ಲಿ, ಸರ್ಕಾರ ರಚಿಸಲು 113 ಸ್ಥಾನಗಳ ಅಗತ್ಯವಿತ್ತು. ಆಗ ಬಿಜೆಪಿ 104, ಕಾಂಗ್ರೆಸ್ 78 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಕಾಂಗ್ರೆಸ್ ಪಕ್ಷವು ಜೆಡಿಎಸ್‌ಗೆ ಬೆಂಬಲ ನೀಡಿ ಮೈತ್ರಿ ಮಾಡಿಕೊಂಡಿತು. ಆಗ 37 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟು, ಮೈತ್ರಿ ಸರ್ಕಾರ ರಚಿಸಿತು (78+37=115).
ವಿಜಯ್ vs ಎಂ.ಕೆ. ಸ್ಟಾಲಿನ್ 2026
ಇದೇ ರೀತಿ ತಮಿಳುನಾಡಿನಲ್ಲೂ ಎಐಎಡಿಎಂಕೆ ಮತ್ತು ಟಿವಿಿಕೆ ಮೈತ್ರಿ ಮಾಡಿಕೊಂಡು ವಿಜಯ್ ಸಿಎಂ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ಬಾರಿ ಎಐಎಡಿಎಂಕೆ 75 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಹೆಚ್ಚುವರಿಯಾಗಿ 10 ಸ್ಥಾನಗಳನ್ನು ಗೆದ್ದು 85 ಸ್ಥಾನಗಳನ್ನು ಪಡೆದರೆ, ಮತ್ತು ಟಿವಿಿಕೆ 35 ಸ್ಥಾನಗಳನ್ನು ಗೆದ್ದರೆ, ಎಐಎಡಿಎಂಕೆ-TVK ಮೈತ್ರಿಕೂಟಕ್ಕೆ 120 ಸ್ಥಾನಗಳು ಸಿಗುತ್ತವೆ. ಇದರ ಮೂಲಕ ವಿಜಯ್ ಮುಖ್ಯಮಂತ್ರಿಯಾಗುವ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ.


