ಮತ ಪೆಟ್ಟಿಗೆಯಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ
Live: ದೇಶದ 2ನೇ ಹಂತದ ಮತದಾನ ಶಾಂತಿಯುತ, ಶೇ.62ರಷ್ಟು ಮತ ಚಲಾವಣೆ

ಜಗತ್ತಿನ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಭಾರತದ 17ನೇ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಿತು. ಗಣ್ಯರ ಭವಿಷ್ಯ ಮತಗಟ್ಟೆಯಲ್ಲಿ ಭದ್ರವಾಗಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಂದು ಮೇ 23ರವರೆಗೆ ಕಾಯಲೇಬೇಕು. ಎಂದಿನಂತೆ ನಗರ ಮತದಾರರು ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ತೋರಲಿಲ್ಲ. ದಕ್ಷಿಣ ಕನ್ನಡದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಒಟ್ಟಾರೆ ರಾಜ್ಯದಲ್ಲಿ ನಡೆದ ಮೊದಲ ಹಂತದಲ್ಲಿ ಸರಾಸರಿ ಶೇ.66ರಷ್ಟು ಮತದಾನವಾದಂತೆ ಆಗಿದೆ. ದೇಶದಲ್ಲಿ 95 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆದಿದ್ದು, ಶೇ.62ರಷ್ಟು ಮತ ಚಲಾವಣೆಯಾಗಿದೆ.
ಮತ ಪೆಟ್ಟಿಗೆಯಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ
ನಿನ್ನೆ ಬಾಗಲಕೋಟೆಯಲ್ಲಿ ಅಬ್ಬರಿಸಿದ ಮೋದಿ
ನಿನ್ನೆ ಬಾಗಲಕೋಟೆಯಲ್ಲಿ ಅಬ್ಬರಿಸಿದ ಮೋದಿ
ರಾಯಚೂರಿನಲ್ಲಿ ರಾಹುಲ್ ಅಬ್ಬರ
ರಾಯಚೂರಿನಲ್ಲಿ ರಾಹುಲ್ ಅಬ್ಬರ
ಭಾರತದಲ್ಲಿ 2ನೇ ಹಂತದ ಚುನಾವಣೆ ಶಾಂತಿಯುತ: ಶೇ.62ರಷ್ಟು ಮತದಾನ
ನಿಮ್ಮ ರಾಜ್ಯದಲ್ಲೆಷ್ಟಾಯಿತು ಮತದಾನ?

ಮತದಾನಕ್ಕೆ ಇನ್ನೊಂದು ಗಂಟೆ ಇದ್ದಾಗ ಶೇ.62 ಮತದಾನ
ನಿಮ್ಮ ಕ್ಷೇತ್ರದಲ್ಲಿ ಇಷು ಮತದಾನವಾಗಿದೆ....

ಕೈ ಇಲ್ಲದಿದ್ದರೇನು? ಮತ ಹಾಕಲು ಕಾಲಿಲ್ಲವೇ?
ಶತಾಯುಷಿ ಸಾಲುಮರದ ತಿಮ್ಮಕ್ಕರಿಂದ ಮತದಾನ
ಶತಾಯುಷಿ ಸಾಲುಮರದ ತಿಮ್ಮಕ್ಕ ತಮ್ಮ ಸಾಕು ಮಗನೊಂದಿಗೆ ಮತದಾನ ಮಾಡಿದರು..
ಮತದಾನಕ್ಕೆ ಇನ್ನು ಒಂದೂವರೆ ಗಂಟೆ ಬಾಕಿ, ಕ್ವಿಕ್...
ಬೆಂಗಳೂರಿನಲ್ಲಿ ವಾತಾವರಣ ತಂಪಾಗಿತ್ತು. ಮಳೆ ಬರುವ ಮುನ್ಸೂಚನೆ ಇದ್ದರೂ, ಇನ್ನೂ ವರುಣನ ಸುಳಿವಿಲ್ಲ. ಇನ್ನೂ ಒಂದೂವರೆ ಗಂಟೆ ಮತದಾನಕ್ಕೆ ಬಾಕಿ ಇದೆ. ದಯ ಮಾಡಿ ಮತಗಟ್ಟೆಗೆ ತೆರಳಿ, ನಿಮ್ಮ ಕರ್ತವ್ಯ ನಿರ್ವಹಿಸಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ.
ಪತಿ ಅಂತ್ಯಕ್ರಿಯೆ ಮಾಡಿ, ಮತ ಹಾಕಿದ ಮಹಿಳೆ
ಮತದಾನ ಮಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಪಂ. ಸದಸ್ಯೆ
ಕರ್ನಾಟಕದ ದಕ್ಷಿಣದಲ್ಲಿ ಬಿರುಸಿನ ಮತದಾನ, ಉತ್ತರದಲ್ಲಿ ಮೋದಿ ಅಬ್ಬರ
ಮಧ್ಯಾಹ್ನ 3ಕ್ಕೆ ಶೇ.50ರ ಗಡಿ ಸಮೀಪಿಸಿದ ಕರ್ನಾಟಕ ಮತದಾನ...

ಮಂಡ್ಯದಲ್ಲಿ ಲಘು ಲಾಠಿ ಪ್ರಹಾರ..
ಮಧ್ಯಾಹ್ನ 2ಕ್ಕೆ ಯಾವ ರಾಜ್ಯದಲ್ಲಿ ಎಷ್ಟಾಗಿದೆ ಮತದಾನ?
ದೇಶದ 95 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಎಷ್ಟಾಗಿದೆ ಮತದಾನ?

ಮಗನೊಂದಿಗೆ ವೋಟ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ...

ನಾನೂ ವೋಟ್ ಮಾಡಿದೆ: ಮಾಳವಿಕಾ ಅವಿನಾಶ್
ತಮ್ಮ ಹಕ್ಕು ಚಲಾಯಿಸಿದ ಮಾಳವಿಕಾ...

ವೋಟು ಹಾಕಿದ 105ರ ತಿಪಟೂರು ಅಜ್ಜಿ
ತಿಪಟೂರು ತಾಲೂಕು ಕಸಬಾ ಹೋಬಳಿಯ ಮತ್ತು ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 35 ಸಿದ್ದಾಪುರದಲ್ಲಿ, ಕರಿಕೆರೆ ಮಜುರೆ ಗ್ರಾಮದ ವಾಸಿಯಾದ ಬೈರಾಪುರದ 105 ವರ್ಷದ ಚಿಕ್ಕಮ್ಮ ಯುವಕರನ್ನು ಮೆಚ್ಚುವ ರೀತಿಯಲ್ಲಿ ಬಂದು ಮತದಾನ ಮಾಡಿದರು.

ಸಿರಿಗೆರೆ ಶ್ರೀಗಳಿಂದಲೂ ಮತ ಚಲಾವಣೆ
ಸಿರಿಗೆರೆಯ ಬೂತ್ ಸಂಖ್ಯೆ 71 ರಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮತದಾನ ಮಾಡಿದರು.

ಬತ್ತದ ಉತ್ಸಾಹ, ನಿಲ್ಲದ ಮತದಾನ..
ಉಡುಪಿಯಲ್ಲಿ ತಮ್ಮ ಮತ ಚಲಾಯಿಸಿದ ಉಡುಪಿಯ ಪೇಜಾವರ ಶ್ರೀಗಳು...






