ಮಂಡ್ಯ(ಏ. 18)  ಪತಿ ಅಂತ್ಯಕ್ರಿಯೆ ಬಳಿಕ ಮಹಿಳೆ ಮತದಾನ ಮಾಡಿದ್ದು  ವೋಟಿಂಗ್ ಮಹತ್ವ ಸಾರಿ ಹೇಳಿದ್ದಾರೆ

ಕೆ.ಆರ್.ಎಸ್ ನಿವಾಸಿ ಮಧು ಜೈನ್ ಅವರ ಪತಿ ಸತೀಶ್ ಬುಧವಾರ ಹೃದಯಾಘಾತದಿಂದ  ನಿಧನರಾಗಿದ್ದರು. ಇಂದು(ಗುರುವಾರ)  ಅಂತ್ಯಕ್ರಿಯೆ ನೆರವೇರಿಸಿ ಬಳಿಕ ಮತದಾನ ಮಧು ಜೈನ್ ಕೆ.ಆರ್.ಎಸ್ ನ ಮತಗಟ್ಟೆ ಸಂಖ್ಯೆ 212 ಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.

ಮತದಾನ ಮಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಂಡ್ಯದ ಮಹಿಳೆ

ದಕ್ಷಿಣ ಕರ್ನಾಟಕದ 14  ಕ್ಷೇತ್ರಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿ ಮೊದಲ ಹಂತದ ಮತದಾನ ನಡೆಯುತ್ತಿದೆ.  ಇನ್ನುಳಿದ 14 ಕ್ಷೇತ್ರಗಳಿಗೆ ಏ. 23  ರಂದು ಮತದಾನ ನಡೆಯಲಿದೆ.