ಮಂಡ್ಯ : ಲೋಕಸಭಾ ಮಹಾ ಸಮರ ರಾಜ್ಯದಲ್ಲಿ ಆರಂಭವಾಗಿದ್ದು, ಹಲವರು ತಮ್ಮ ಕರ್ತವ್ಯ ಮರೆಯದೇ ಮತದಾನ ಮಾಡಿದ್ದಾರೆ. 

ಅಂತೆಯೇ ಮಂಡ್ಯದಲ್ಲಿ ತುಂಬು ಗರ್ಭಿಣಿಯೋರ್ವರು ಮತ ಚಲಾಯಿಸಿದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಪಂಚಾಯಿತಿ ಸದಸ್ಯೆ ಮಂಗಳ ನವೀನ್ ಕುಮಾರ್  ಚಿಕ್ಕಮರಳಿ ಗ್ರಾಮದ ಮತಗಟ್ಟೆಯಲ್ಲಿ ಮುಂಜಾನೆ ಮತ ಚಲಾಯಿಸಿದ್ದರು. 

ಮುಂಜಾನೆ 7.30ಕ್ಕೆ ತಮ್ಮ ಪತಿ ಜೊತೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದರು. ಬಳಿಕ ಹೆರಿಗೆ ನೋವು ಶುರುವಾಗಿದ್ದು, ಅವರನ್ನು ಪಾಂಡವಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. 

ತುಂಬು ಗರ್ಭಿಣಿಯಾಗಿದ್ದರೂ ತಮ್ಮ ಕರ್ತವ್ಯ ಮರೆಯದೇ ನೋವಿನಲ್ಲೂ ತೆರಳಿ ಮತ ಚಲಾಯಿಸಿ ಬಂದಿದ್ದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.