ಉದಮ್​ಪುರ್(ಏ.18): 2019 ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಬೆಳಿಗ್ಗೆ 11 ಗಂಟೆ ವರೆಗೆ ಒಟ್ಟಾರೆ ದೇಶದಲ್ಲಿ ಶೇ.10 ರಷ್ಟು ಮತದಾನವಾಗಿದ್ದು, ಸಾಯಂಕಾಲ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಜಮ್ಮು ಕಾಶ್ಮೀರದ ಉದಮ್​ಪುರ್ ದಲ್ಲಿ ನವ ವಿವಾಹಿತ ದಂಪತಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು. 

ಮದುವೆ ಬಳಿಕ ನೇರವಾಗಿ ಮತಗಟ್ಟೆಗೆ ಬಂದ ನವದಂಪತಿ, ಮತದಾನ ಮಾಡಿ ಗಮನ ಸೆಳೆದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.