ಮೊದಲ ದಿನ ನೋಪಾರ್ಕಿಂಗ್ಗೆ ಭರ್ಜರಿ ದಂಡ ವಸೂಲಿ!| ಹೊಸ ನಿಯಮದಂತೆ ಕನಿಷ್ಠ 5000 ರು., ಗರಿಷ್ಠ 23000 ರು.ದಂಡ
ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, 5 ನಿಮಿಷದ ಕೆಲಸ ಇದಕ್ಕಾಗಿ 100 ರೂ, 200 ರೂಪಾಯಿ ಪಾರ್ಕಿಂಗ್ಗೆ ಕೊಡುವ ಬದಲು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದರೆ ಸಾಕು ಅನ್ನೋ ಲೆಕ್ಕಾಚಾರ ನಿಮ್ಮದಾಗಿದ್ದರೆ ತಕ್ಷಣ ಬದಲಾಯಿಸಿ. ಇನ್ಮುಂದೆ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದರೆ ಕೊನೆಗೆ ವಾಹನ ಮಾರಾಟ ಮಾಡಿ ದಂಡ ಕಟ್ಟಬೇಕಾಗಬಹುದು.
ನೋ ಪಾರ್ಕಿಂಗ್, ವಾಹನ ಪಾರ್ಕ್ ಮಾಡಿದ್ರೆ ಭರ್ಜರಿ 23000 ರು. ದಂಡ| ನಿರ್ದಿಷ್ಟ ಸ್ಥಳದ ಹೊರಗೆ ವಾಹನ ನಿಲ್ಲಿಸಿದರೆ ಭಾರೀ ದಂಡ
ನಿರ್ಮಲಾ ಸೀತಾರಾಮಾನ್ ಮಂಡಿಸಿದ ಬಜೆಟ್ನಿಂದ ಸಾಂಪ್ರಾದಾಯಿಕ ವ್ಯಾಪಾರ ವಹಿವಾಟು ಮಾಡುವವರಿಗೆ ಹಿನ್ನಡೆಯಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ, ಕೇಂದ್ರ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್ ಬಜೆಟ್ ಮಂಡಿಸುತ್ತಿದ್ದಂತೆ, ಆಟೋಮೊಬೈಲ್ ಕಂಪನಿಗಳ ಕಿವಿ ನೆಟ್ಟಗಾಗಿತ್ತು. ಕಾರಣ ಕಳೆಗುಂದಿರುವ ಭಾರತೀಯ ಆಟೋಮೊಬೈಲ್ ಕ್ಷೇತ್ರವನ್ನು ಮೇಲಕ್ಕೆತ್ತಲು ಹಲವು ಅನುದಾನ ನೀಡೋ ನಿರೀಕ್ಷೆಗಳಿತ್ತು. ಆದರೆ ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ ಘೋಷಿಸಿರುವ ಕೇಂದ್ರ ಸರ್ಕಾರ, ಇಂಧನ ವಾಹನಗಳತ್ತ ಕಣ್ಣೆತ್ತಿ ನೋಡಿಲ್ಲ. ಆಟೋಮೊಬೈಲ್ ಕ್ಷೇತ್ರಕ್ಕೆ ಪ್ರಸಕ್ತ ಬಜೆಟ್ ನೀಡಿದ ಕೊಡುಗೆಗಳೇನು? ಇಲ್ಲಿದೆ ಸಂಪೂರ್ಣ ವಿವರ.
ಸಿಗ್ನಲ್ ಜಂಪ್ ಮಾಡುವವರ ವಿರುದ್ಧ ಪೊಲೀಸರು ಹೊಸ ತಂತ್ರ ಅಳವಡಿಸಿದ್ದಾರೆ. ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್ ಗೆರೆ ದಾಟುವುದನ್ನು ನಿಲ್ಲಿಸಲು ಪೊಲೀಸರು ನೂತನ ಸಿಗ್ನಲ್ ಲೈಟ್ ಅಳವಡಿಸಿದ್ದಾರೆ. ಇದರಿಂದ ರಸ್ತೆ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.
ವಿಮಾನದಲ್ಲಿ ದೂರ ಪ್ರಯಾಣ ಮಾಡುವವರಿಗೆ ಇನ್ಮುಂದೆ ಯಾವುದೇ ಚಿಂತೆ ಇಲ್ಲ. ಪ್ರಯಾಣ ಆರಾಮದಾಯಕ ಮಾಡಲು ಹೊಸ ಕಿಟ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ನೂತನ ಕಿಟ್ ಯಾವುದು? ಈ ಕಿಟ್ ದೂರ ಪ್ರಯಾಣಿಕರಿಗೆ ಮಾಡೋ ಅನುಕೂಲವೇನು? ಇಲ್ಲಿದೆ ವಿವರ.
ಫ್ಲಿಪ್ಕಾರ್ಟ್ ದೇಶದಾದ್ಯಂತ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ಮಾಡಲು ವಾಹನಗಳನ್ನು ಬಳಸುತ್ತಿದೆ. ಇದೀಗ ಇಂಧನ ಚಾಲಿತ ವಾಹನಗಳ ಬದಲಾಗಿ, ಎಲೆಕ್ಟ್ರಿಕ್ ವಾಹನ ಬಳಸಲು ಫ್ಲಿಪ್ ಕಾರ್ಟ್ ದಿಟ್ಟ ಹೆಜ್ಜೆ ಇಟ್ಟಿದೆ. ಫ್ಲಿಪ್ಕಾರ್ಟ್ ಕಾರ್ಯಕ್ಕೆ ಮೆಚ್ಚಗೆ ವ್ಯಕ್ತವಾಗಿದೆ.
ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಾಡಿ ಹೊಸ ನಿಯಮ ಜಾರಿಯಾಗಿದೆ. ಹಾಗಾದ್ರೆ ಹೊಸ ನಿಯಮದ ಪ್ರಕಾರ ಯಾವ ತಪ್ಪಿಗೆ ಎಷ್ಟು ದಂಡ..? ಈ ಕೆಳಗಿನಂತಿದೆ ಪಟ್ಟಿ.
ಭಾರತದಲ್ಲಿ ಕಾರು, ಬೈಕ್, ಸ್ಕೂಟರ್ ಸೇರಿದಂತೆ ಖಾಸಗಿ ವಾಹನದ ಮೇಲೆ ಪೊಲೀಸ್, ಪ್ರೆಸ್, ವಕೀಲರು ಸೇರಿದಂತೆ ಹಲವು ಸ್ಟಿಕ್ಕರ್ ಅಂಟಿಸಿ ತಿರುಗಾಡುವುದು ಸಾಮಾನ್ಯ. ಹೈಕೋರ್ಟ್ ಆದೇಶದ ಪ್ರಕಾರ ಖಾಸಗಿ ವಾಹನಗಳಲ್ಲಿ ಈ ರೀತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್ ಆಗಲಿದೆ.