ರಸ್ತೆ ನಿಯಮ ಪಾಲಿಸಿದರೆ ಪೊಲೀಸರಿಂದ ಭರ್ಜರಿ ಗಿಫ್ಟ್!
ರಸ್ತೆ ನಿಯಮ ಪಾಲನೆ ಹಾಗೂ ನಿಯಂತ್ರಣ ಪೊಲೀಸರಿಗೆ ಸವಾಲು. ನಿಯಮ ಉಲ್ಲಂಘನೆಯಿಂದ ಅಪಘಾತ, ಅನಾಹುತಗಳು ಸಂಭವಿಸುತ್ತಿವೆ. ಇದಕ್ಕಾಗಿ ಪೊಲೀಸರು ನಿಯಮ ಪಾಲನೆಗೆ ಹೊಸ ಆಫರ್ ನೀಡಿದ್ದಾರೆ. ರಸ್ತೆ ನಿಯಮ ಪಾಲನೆ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸರು ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ. ಪೊಲೀಸರ ನೂತನ ಯೋಜನೆ ಕುರಿತ ಮಾಹಿತಿ ಇಲ್ಲಿದೆ.
ಹೈದರಾಬಾದ್(ಜು.31): ರಸ್ತೆ ನಿಯಮ ಉಲ್ಲಂಘಿಸಿದರೆ ದಂಡ ತಪ್ಪಿದ್ದಲ್ಲ. ಇದೀಗ ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದೆ. 100 ರೂಪಾಯಿ ದಂಡ ಇನ್ಮುಂದೆ 1000 ರೂಪಾಯಿ ಆಗಲಿದೆ. ನಗರದೆಲ್ಲಡೆ ಸಿಸಿಟಿವಿ, ಹೆಚ್ಚುವರಿ ಪೊಲೀಸರು ನೇಮಿಸಿದರೂ ರಸ್ತೆ ನಿಯಮ ಉಲ್ಲಂಘನೆ ಗಣನೀಯ ಇಳಿಕೆಯಾಗಿಲ್ಲ. ಇದೀಗ ಪೊಲೀಸರು ಹೊಸ ಯೋಜನೆ ಜಾರಿ ತಂದಿದ್ದಾರೆ. ರಸ್ತೆ ನಿಯಮವನ್ನು ಪಾಲಿಸುವವರಿಗೆ ಪೊಲೀಸರು ಭರ್ಜರಿ ಗಿಫ್ಟ್ ನೀಡಿ ಅಭಿನಂದಿಸುತ್ತಿದ್ದಾರೆ.
ಇದನ್ನೂ ಓದಿ: 3 ಗಂಟೆಯಲ್ಲಿ 1,169 ಡ್ರಿಂಕ್ & ಡ್ರೈವ್ ಪ್ರಕರಣ; ಬೆಂಗಳೂರು ಪೊಲೀಸರ ದಾಖಲೆ!
ರಸ್ತೆ ನಿಯಮವನ್ನು ಚಾಚೂ ತಪ್ಪದೆ ಪಾಲಿಸಿ, ಯಾವುದೇ ನಿಯಮ ಉಲ್ಲಂಘಿಸದೇ ವಾಹನ ಚಲಾಯಿಸುವವರಿಗೆ ಹೈದರಾಬಾದ್ ಪೊಲೀಸರು ಉಡುಗೊರೆ ನೀಡಿದ್ದಾರೆ. ಕಳೆದ 10 ವರ್ಷಗಳಲ್ಲಿ ನಿಯಮ ಪಾಲಿಸಿದ ವಾಹನ ಸವಾರರನ್ನು ಗುರುತಿಸಿ ಹೈದರಾಬಾದ್ ಪೊಲೀಸರು ಅಭಿನಂದಿಸಿದ್ದಾರೆ. ಇಷ್ಟೇ ಅಲ್ಲ ಅವರಿಗೆ ಉಚಿತ ಮೂವಿ ಟಿಕೆಟ್ ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: ವಾಹನ ಮಾರಾಟ ಕುಸಿತ; 10 ಲಕ್ಷ ಉದ್ಯೋಗ ಕಡಿತ!
ಹೈದರಾಬಾದ್ ಸಿಟಿ ಪೊಲೀಸ್ ಕಮಿಶನರ್ ಅಂಜನಿ ಕುಮಾರ್ ಸ್ವತಃ ನಗರದ ರಸ್ತೆಗಳಿದಿದ್ದಾರೆ. ನಿಯಮ ಪಾಲಿಸುವರನ್ನು ರಸ್ತೆಗಳಲ್ಲೇ ಅಭಿನಂದಿಸಿ ಜಾಗೃತಿ ಮೂಡಿಸುತ್ತಿದ್ದಾರೆ. 45 ಮೋಟಾರ್ ಬೈಕ್ ಸವಾರರನ್ನು ಗುರುತಿಸಿ ಉಚಿತ ಮೂವಿ ಟಿಕೆಟ್ ನೀಡಿ ಅಭಿನಂದಿಸಿದ್ದಾರೆ. ಜೊತೆಗೆ ಕಚೇರಿ, ಮನೆ, ನೆರಮನೆ ಸೇರಿದಂತೆ ಎಲ್ಲರಲ್ಲೂ ರಸ್ತೆ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಲು ಮನವಿ ಮಾಡಿದ್ದಾರೆ.