ITLನ ಹೊಸ ಸೊಲಿಸ್‌ ಯನ್ಮಾರ್‌ ಟ್ರ್ಯಾಕ್ಟರ್‌ ಬಿಡುಗಡೆ

ಭಾರತ ಕೃಷಿ ಪ್ರಧಾನ ದೇಶ. ಹೀಗಾಗಿ ಕೃಷಿ ಸಲಕರಣಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಟ್ರಾಕ್ಟರ್‌ಗಳಿಗೆ ಬಾರಿ ಬೇಡಿಕೆ ಇದೆ. ಇದೀಗ ವಿದೇಶದಲ್ಲಿ ಹೆಚ್ಚು ಜನಪ್ರಿಯವಾಗಿರೋ ಟ್ರ್ಯಾಕ್ಟರ್ ಭಾರತಕ್ಕೆ ಕಾಲಿಟ್ಟಿದೆ. 

ITL launches 2 new tractor brands in India

ನವದೆಹಲಿ(ಜು. 31): ವಿದೇಶದಲ್ಲಿ ಹೆಚ್ಚು ಯಶಸ್ಸು ಸಾಧಿಸಿರುವ  ಟ್ರ್ಯಾಕ್ಟರ್‌ಗಳು ಇದೀಗ ಭಾರತಕ್ಕೆ ಕಾಲಿಟ್ಟಿದೆ. ವಿದೇಶದಂತೆ ಭಾರತದಲ್ಲೂ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಇಂಟರ್‌ನ್ಯಾಷನಲ್‌ ಟ್ರಾಕ್ಟ​ರ್ಸ್ ಲಿಮಿಟೆಡ್‌(ಐಟಿಎಲ್‌) ಸಜ್ಜಾಗಿದೆ. ಇದೀಗ ಐಟಿಪಿಎಲ್‌ ಜಪಾನ್‌ನ ಯನ್ಮಾರ್‌ ಅಗ್ರಿಬ್ಯುಸಿನೆಸ್‌ ಕೊ. ಲಿಮಿಟೆಡ್‌ ಸಹಯೋಗದಲ್ಲಿ ಹೊಸ ಸೊಲಿಸ್‌ ಯನ್ಮಾರ್‌ ಟ್ರ್ಯಾಕ್ಟರ್‌ ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ಸ್ವರಾಜ್ ಟ್ರಾಕ್ಟರ್-ಫೋರ್ಡ್ ಎಂಡೇವರ್ ನಡುವೆ ಸ್ಪರ್ಧೆ-ಅಚ್ಚರಿ ಫಲಿತಾಂಶ!

ಸೊಲಿಸ್‌ ಯನ್ಮಾರ್‌ ಟ್ರ್ಯಾಕ್ಟರ್‌ ಅತ್ಯಾಧುನಿಕ ಫೀಚರ್‌ಗಳ ತಂತ್ರಜ್ಞಾನ ಬಳಸಿ ಕೃಷಿಕರಿಗೆ ನೆರವಾಗಲಿದೆ. ದೇಶದ ಎಲ್ಲಾ ಪ್ರದೇಶಕ್ಕೂ ಹೊಂದುವ ಮೇಡ್‌ ಇನ್‌ ಇಂಡಿಯಾ ಟ್ರ್ಯಾಕ್ಟರ್‌ ಎಂದು ಕಂಪನಿ ಅಭಿಪ್ರಾಯಿಸಿದೆ. ವಿದೇಶದಲ್ಲಿ ಯಶಸ್ಸು ಕಂಡ ನಂತರ ಯನ್ಮಾರ್‌ ಟ್ರ್ಯಾಕ್ಟರ್‌ ಪಂಜಾಬಿನ ಹೋಷಿಯಾರ್‌ ಪುರದ ಮೂಲಕ ದೇಶದ ಮಾರುಕಟ್ಟೆಗೆ ಪ್ರವೇಶಿಸಿದೆ.

Latest Videos
Follow Us:
Download App:
  • android
  • ios