ಬೆಂಗಳೂರು(ಜು.29): ರಸ್ತೆ ನಿಯಮ ಉಲ್ಲಂಘನೆ ಹಾಗೂ ನಿಯಂತ್ರಣ ಅತೀ ದೊಡ್ಡ ಸವಾಲು. ನಿಯಮ ಉಲ್ಲಂಘನೆ ನಿಯಂತ್ರಿಸಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದೆ. ಇಷ್ಟಾದರೂ ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ರಾಂಗ್ ಸೈಡ್ ಸೇರಿದಂತೆ ಪ್ರತಿ ನಿಮಿಷ ಪ್ರಕರಣಗಳು ದಾಖಲಾಗುತ್ತಿವೆ. ಇದೀಗ ಬೆಂಗಳೂರು ಪೊಲೀಸರು ಕೇವಲ 3 ಗಂಟೆಯಲ್ಲಿ 1,169 ಡ್ರಂಕ್ & ಡ್ರೈವ್ ಪ್ರಕರಣ ಬುಕ್ ಮಾಡಿ ದಾಖಲೆ ಬರೆದಿದ್ದಾರೆ. ಈ ಅಂಕಿ ಅಂಶ ಆತಂಕ ತರುವಂತಿದೆ.

ಇದನ್ನೂ ಓದಿ: ವಾಹನಕ್ಕೆ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ ಡಿ.1ರಿಂದ ಡಬಲ್‌ ಟೋಲ್‌ ಬರೆ!

ಕುಡಿದು ವಾಹನ ಚಾಲನೆ ಅತ್ಯಂತ ಅಪಾಯಕಾರಿ. ಹೀಗಾಗಿಯೇ ಇತರ ಎಲ್ಲಾ ರಸ್ತೆ ನಿಯಮ ಉಲ್ಲಂಘನೆಗಿಂತ, ಡ್ರಿಂಕ್ & ಡ್ರೈವ್ ನಿಯಮ ಉಲ್ಲಂಘನೆಗೆ ಗರಿಷ್ಠ ಮೊತ್ತ ದಂಡ ಪಾವತಿಸಬೇಕು.  ಶನಿವಾರ(ಜು,27) ರಾತ್ರಿ 11 ಗಂಟೆಯಿಂದ, ರವಿವಾರ ಮುಂಜಾನೆ 2 ಗಂಟೆ ವರೆಗೆ(ಒಟ್ಟು 3 ಗಂಟೆ) ಬೆಂಗಳೂರು ಪೊಲೀಸರು ಚುರುಕಿನ ಕಾರ್ಯಚರಣೆ ನಡೆಸಿದ್ದಾರೆ. ಈ ವೇಳೆ 1,169 ಡ್ರಿಂಕ್ & ಡ್ರೈವ್ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ !ಬೀಳುತ್ತೆ ಭಾರೀ ದಂಡ

ಟ್ರಾಫಿಕ್ ಅಡೀಶನಲ್ ಕಮಿಶನರ್ ಆಫ್ ಪೊಲೀಸ್ ಪಿ ಹರಿಶೇಖರನ್ ನೇತೃತ್ವದ ತಂಡ ಈ ಕಾರ್ಯಚರಣೆ ನಡೆಸಿತ್ತು. ಪ್ರತಿ ವಾರಾಂತ್ಯದಲ್ಲಿ ಸರಿ ಸುಮಾರು 80-100 ಚೆಕ್‌ಪಾಯಿಂಟ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಾರೆ. ಆದರೆ ಜುಲೈ 27ರ ಶನಿವಾರ 196 ಚೆಕ್‌ಪಾಯಿಂಟ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದರು. ಬೆಂಗಳೂರು ಪಶ್ಚಿಮ ವಿಭಾಗದಲ್ಲಿ 519 ಪ್ರಕರಣ ದಾಖಲಾಗೋ ಮೂಲಕ ಗರಿಷ್ಠ ಕೇಸ್ ಪೊಲೀಸರ ರೆಕಾರ್ಡ್ ಬುಕ್ ಸೇರಿದೆ. ಇನ್ನು ಪೂರ್ವ ವಿಭಾಗ 400 ಪ್ರಕರಣಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮೀನು ಊಟಕ್ಕೆ ಕಾರು ನಿಲ್ಲಿಸಿದ ಮೇಯರ್‌ಗೆ 10 ಸಾವಿರ ರೂ. ದಂಡ!

ತಪಾಸಣೆಗಾಗಿ 4 ಇನ್ಸ್‌ಪೆಕ್ಟರ್, 7 ACP ಹಾಗೂ DCP ಸೇರಿದಂತೆ 3,000 ಟ್ರಾಪಿಕ್ ಪೊಲೀಸರನ್ನು ನೇಮಿಸಲಾಗಿತ್ತು. 2017ರಲ್ಲಿ 73,741 ಡ್ರಿಂಕ್ & ಡ್ರೈವ್  ಪ್ರಕರಣಗಳು ದಾಖಲಾಗಿದೆ. ಇದು ಈ ವರೆಗಿನ ಗರಿಷ್ಠ. 2017ರ ಡಿಸೆಂಬರ್ ತಿಂಗಳಲ್ಲೇ 10,000 ಡ್ರಿಂಕ್ & ಡ್ರೈವ್ ಮಾಡಿದವರನ್ನು ಅರೆಸ್ಟ್ ಮಾಡಲಾಗಿದೆ. 2018ರಲ್ಲಿ 53,092 ಡ್ರಿಂಕ್ & ಡ್ರೈವ್ ಪ್ರಕರಣ ದಾಖಲಾಗಿದೆ. 2019ರಲ್ಲಿ ಜನವರಿಯಿಂದ ಮೇ ತಿಂಗಳ ವರೆಗೆ 20,671ಡ್ರಿಂಕ್ & ಡ್ರೈವ್  ಪ್ರಕರಣಗಳು ದಾಖಲಾಗಿದೆ. ಸದ್ಯ ಡ್ರಿಂಕ್ & ಡ್ರೈವ್ ಪ್ರಕರಣದಲ್ಲಿ ಮೊದಲ ಸಲ 2,000 ರೂಪಾಯಿ ಎರಡನೇ ಸಲ 3,000 ರೂಪಾಯಿ ಅಥವಾ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತೆ.