ಚಿತ್ರದುರ್ಗ(ಜು.02): ಪ್ರತಿಷ್ಠಿತ ದಕ್ಷಿಣ ಡೇರ್ ಮೋಟಾರ್‌ಸ್ಪೋರ್ಟ್ ರ‍್ಯಾಲಿಗೆ ತೆರೆ ಬಿದ್ದಿದೆ. ಬೆಂಗಳೂರಿನಲ್ಲಿ ಆರಂಭಗೊಂಡ ರ‍್ಯಾಲಿ, ಉತ್ತರ ಕರ್ನಾಟಕ ಸುಂದರ ತಾಣಗಳ ಮೂಲಕ ಚಿತ್ರದುರ್ಗದಲ್ಲಿ ಅಂತ್ಯಗೊಂಡಿತು. ರೋಚಕ ಹಾಗೂ ಸಾಹಸಮಯದ ರ‍್ಯಾಲಿಯಲ್ಲಿ ಕಳೆದ ವರ್ಷ ಚಾಂಪಿಯನ್ ಆಗಿದ್ದ, ಭಾರತದ  ಖ್ಯಾತ ಚಾಲಕ ಗೌರವ್ ಗಿಲ್ ಈ ಬಾರಿಯೂ ಚಾಂಪಿಯನ್ ಪಟ್ಟ ಅಂಲಕರಿಸಿದ್ದಾರೆ. 

ಇದನ್ನೂ ಓದಿ: ಸುಜುಕಿ ಡರ್ಟ್ OFF-Road ಬೈಕ್ ಬಿಡುಗಡೆ - ಕವಾಸಕಿಗೆ ಪೈಪೋಟಿ!

2000 ಕಿ.ಮೀ ದೂರದ ಈ ರ್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿತ್ತು. ಚಾಲಕನ ವೇಗ, ಕೌಶಲ್ಯ ಹಾಗೂ ಧರ್ಯವನ್ನು ಪರೀಕ್ಷೆಗೆ ಒಳಪಡಿಸುವ ಈ ರ್ಯಾಲಿಯಲ್ಲಿ ಮಹೀಂದ್ರ ರೇಸಿಂಗ್ ತಂಡದ ಗೌರವ್ ಗಿಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 

ಕಾರು, ಬೈಕ್ ಸೇರಿದಂತೆ 3 ವಿಭಾಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಒರ್ವ ಮಹಿಳಾ ಸ್ಪರ್ಧಿ ಸೇರಿದಂತೆ 100 ಕ್ಕೂ ಹೆಚ್ಚು ಮೋಟಾರ್‌ಸ್ಪೋರ್ಟ್ ಉತ್ಸಾಹಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ದ ಹಾರ್ಜಿ ಮೋಟಾರ್ಸ್ ಸಂಸ್ತೆಯ ಸಂಜಯ್ ಹಾಗೂ ವಿಶ್ವಾಸ ಕೂಡ  ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಭಾರತೀಯ ಮಹಿಳಾ ರೇಸ್ ಲೋಕಕ್ಕೆ ಅಧಿಪತಿ ಈ ಕನ್ನಡತಿ

ಜೈದಾಸ್ ಮೆನನ್ ನೇತೃತ್ವದ ಮೋಟಾರ್‌ಸ್ಪೋರ್ಟ್.ಇಂಕ್ ದಕ್ಷಿಣ ಡೇರ್ ರ್ಯಾಲಿ ಆಯೋಜಿಸುತ್ತಿದೆ.  ರ್ಯಾಲಿಯಲ್ಲಿ ಸ್ಪರ್ಧಿಗಳಿಗೆ ಸೂಕ್ತ ಸುರಕ್ಷತಾ ಕ್ರಮ ಹಾಗೂ ಭದ್ರತೆ ಒದಗಿಸಲಾಗಿತ್ತು.