* ಗಂಡನ ವಿಚಿತ್ರ ವರ್ತನೆಯಿಂದ ಬೇಸತ್ತ ಪತ್ನಿ * ಸೆಕ್ಸ್ ಬೇಕು ಎಂದಾಗಲೆಲ್ಲ ಮಾರಣಾಂತಿಕವಾಗಿ ಥಳಿಸುತ್ತಿದ್ದ * ಮನೆ ಬಿಟ್ಟು ಪೊಲೀಸರಿಗೆ ದೂರು ನೀಡಿದ ಮಹಿಳೆ * ಅಹಮದಾಬಾದ್ ನಿಂದ ವಿಚಿತ್ರ ಪ್ರಕರಣ ವರದಿ

ಅಹಮದಾಬಾದ್(ಸೆ. 16)  ಇದೊಂದು ವಿಚಿತ್ರ ಪ್ರಕರಣ. ಸೆಕ್ಸ್ ಬೇಕೆಂದು ಕೇಳಿದ ಪತ್ನಿಯ ಮೇಲೆ ಈ ಪತಿರಾಯ ಮಾರಕ  ಹಲ್ಲೆ ಮಾಡಿದ್ದಾನೆ. ತಾನು ಲೈಂಗಿಕ ಸುಖದಿಂದ ವಂಚಿನಾಗಿದ್ದೇನೆ. ಪತಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ಪೊಲೀಸರ ಮೊರೆ ಹೋಗಿದ್ದಾಳೆ.

 ಗುಜರಾತ್ ನ ಅಹಮದಾಬಾದ್ ನಿಂದ ಪ್ರಕರಣ ವರದಿಯಾಗಿದೆ. ಈ ವರ್ಷದ ಆಗಸ್ಟ್‌ ನಿಂದ ಪತಿ ನನ್ನೊಂದಿಗೆ ಸೇರುತ್ತಿಲ್ಲ. ಸೆಕ್ಸ್ ಬೇಕು ಎಂದಾಗ ಎಲ್ಲ ಹಲ್ಲೆ ಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ವರ್ಷದ ಫೆಬ್ರವರಿ 27 ರಂದು ವಿವಾಹವಾಗಿತ್ತು. ಅಲ್ಲಿಂದಲೇ ವರದಕ್ಷಿಣೆ ಕಿರುಕುಳವೂ ಆರಂಭವಾಗಿತ್ತು. ಪತಿ ಮತ್ತು ಆತನ ಕುಟುಂಬದವರು ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದರುನ ಎಂದು ಪತ್ನಿ ಹೇಳಿದ್ದಾಳೆ.

ಮೂವತ್ತರ ನಂತರದ ಸೆಕ್ಸ್ ಲೈಫ್ ನಲ್ಲಿ ಏನೆಲ್ಲ ಬದಲಾವಣೆ

ಮದುವೆಯಾದ ನಂತರ ಹತ್ತು ದಿನಗಳ ಕಾಲ ಪತಿ-ಪತ್ನಿ ಸೇರಿದ್ದಾರೆ. ಗಂಡ ಇದ್ದಕ್ಕಿದ್ದಂತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದ್ದಾನೆ.  ಬೆಡ್ ರೂಂ ನಲ್ಲಿದ್ದಾಗ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾನೆ. ಸೆಕ್ಸ್ ಬೇಕೆಂದು  ಕೇಳಿದರೆ ಥಳಿಸುತ್ತಿದ್ದ ಎಂದು ಮಹಿಳೆ  ದೂರಿನಲ್ಲಿ ಹೇಳಿದ್ದಾರೆ.

ನನ್ನ ಮೇಲೆ ಗಂಡನಿಗೆ ತಿರಸ್ಕಾರ ಹುಟ್ಟಿದ್ದು ಗಂಡ ಮತ್ತೊಂದು ಸಂಬಂಧ ಶುರು ಮಾಡಿಕೊಂಡಿದ್ದ ಎಂದಿರುವ ಮಹಿಳೆ ಆಗಸ್ಟ್  1 ರಂದು ಮನೆ ಬಿಟ್ಟಿದ್ದಾರೆ.  ನಂತರ ಕೆಲ ದಿನಗಳ ನಂತರ ವಾಪಸ್ ಹೋದರೂ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಇರಲಿಲ್ಲ. ಕೊನೆಗೆ ಆಗಸ್ಟ್ 8 ರಂದು ಮನೆ ಬಿಟ್ಟು ಪೊಲೀಸರಿಗೆ ದೂರು ನೀಡಿದ್ದಾಳೆ.