Woman Desires:  ಹಾಸಿಗೆಯ ತೃಪ್ತಿಗಾಗಿ ಪತ್ನಿಯೊಬ್ಬಳು ಗಂಡನನ್ನು ಕೊ*ಲೆ ಮಾಡಿದ್ದಾಳೆ. ಸೋದರಮಾವನ ಮೇಲಿನ ಆಸೆ ಮತ್ತು ದೈಹಿಕ ಸಂಬಂಧದಲ್ಲಿ ತೃಪ್ತಿ ಇಲ್ಲದಿರುವುದು ಕೊಲೆಗೆ ಕಾರಣ ಎನ್ನಲಾಗಿದೆ. 

ನವದೆಹಲಿ: ಇತ್ತೀಚೆಗೆ ಪುರುಷರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಇದೀಗ ದೆಹಲಿಯಲ್ಲೊಂದು ಇಂತಹವುದೇ ಒಂದು ಪ್ರಕರಣ ವರದಿಯಾಗಿದೆ. 25 ವರ್ಷದ ಫರ್ಜಾನಾ ಸೋದರಮಾವನ ಮೇಲಿನ ಆಸೆಗಾಗಿ ಗಂಡ ಶಾಹಿದ್ ಉರ್ಫ್ ಇರ್ಫಾನ್‌ನನ್ನು ಮುಗಿಸಿದ್ದಾಳೆ. ಗಂಡ ಹಾಸಿಗೆಯಲ್ಲಿ ತನಗೆ ತೃಪ್ತಿ ಕೊಡುತ್ತಿರಲಿಲ್ಲ. ಗಂಡ ಹಾಸಿಗೆಯಲ್ಲಿ ಅತಿಯಾದ ನಿರಾಸಕ್ತಿ ಹೊಂದಿದ್ದನು ಎಂದು ಫರ್ಜಾನಾ ಕೊ*ಲೆಗೆ ಕಾರಣವನ್ನು ನೀಡಿದ್ದಾಳೆ.

ದೆಹಲಿಯ ನಿಹಾಲ್ ಬಿಹಾರ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೈಹಿಕ ಸಂಬಂಧದಲ್ಲಿ ತೃಪ್ತಿ ಕಾಣದಕ್ಕೆ ಗಂಡನ ಕೊಂದು ಸೋದರಮಾವನೊಂದಿಗೆ ಜೀವನ ನಡೆಸಲು ಫರ್ಜಾನಾ ಪ್ಲಾನ್ ಮಾಡಿಕೊಂಡಿದ್ದಳು. ಇದೀಗ ಕತ್ತಲೆ ಕೋಣೆ ಸೇರಿ ಫರ್ಜಾನಾ ಕಣ್ಣೀರು ಹಾಕುತ್ತಿದ್ದಾಳೆ.

ಕಾಮದಾಸೆ ಬಿಸಿಯಾದ ಅಪ್ಪುಗೆ ಬಯಸಿತ್ತು!

ಮೃತ ಶಾಹಿದ್ ವೆಲ್ಡಿಂಗ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ದಿನವಿಡೀ ಭಾರವಾದ ಕೆಲಸ ಮಾಡಿ ದಣಿದು ಬರುತ್ತಿದ್ದ ಶಾಹಿದ್ ನಿದ್ದೆಗತೆ ಜಾರುತ್ತಿದ್ದನು. ಆದ್ರೆ ಇದು ಫರ್ಜಾನಾಗೆ ಇಷ್ಟವಾಗುತ್ತಿರಲಿಲ್ಲ. ಇದು ಗಂಡನ ಮೇಲಿನ ದ್ವೇಷಕ್ಕೆ ಕಾರಣವಾಗಿತ್ತು. ಈ ನಡುವೆ ಫರ್ಜಾನಾಗೆ ಸೋದರಮಾವನ ಮೇಲೆ ಪ್ರೇಮಾಂಕುರವಾಗಿತ್ತು. ಫರ್ಜಾನಾಳ ಕಾಮದಾಸೆ ಬಿಸಿಯಾದ ಅಪ್ಪುಗೆ ಬಯಸಿದಾಗಲೇ ತನ್ನ ದಾರಿಗೆ ಅಡ್ಡವಾಗಿದ್ದ ಗಂಡನನ್ನು ಮುಗಿಸಲು ಪ್ಲಾನ್ ಮಾಡಿದ್ದಳು. ಗಂಡನ ಪ್ರಾಣ ತೆಗೆಯಲು ಫರ್ಜಾನಾ ಮಾಡಿದ ಪ್ಲಾನ್ ಕೇಳಿದ್ರೆ ನೀವು ಆಶ್ಚರ್ಯಚಕಿತರಾಗುತ್ತೀರಿ.

ಆತ್ಮಹ*ತ್ಯೆ ಎಂದು ಬಿಂಬಿಸಲು ಫರ್ಜಾನಾ ಪ್ರಯತ್ನ

ಪತಿ ಶಾಹಿದ್ ಆಹಾರದಲ್ಲಿ ನಶೆ ಪದಾರ್ಥ ಸೇರಿಸಿದ್ದಾಳೆ. ಈ ಆಹಾರ ಸೇವಿಸಿದ ಶಾಹಿದ್ ಗಾಢವಾದ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಚಾಕು ತೆಗೆದುಕೊಂಡು ಗಂಡನ ಹೊಟ್ಟೆಗೆ ಬಲವಾಗಿ ಇರಿದಿದ್ದಾಳೆ. ನಂತರ ಇದನ್ನು ಆತ್ಮಹ*ತ್ಯೆ ಎಂದು ಬಿಂಬಿಸಲು ಫರ್ಜಾನಾ ಪ್ರಯತ್ನಿಸಿದ್ದಳು. ಆದ್ರೆ ಅದು ವಿಫಲವಾಗಿದೆ. ಹಣಕಾಸಿನ ವಿಚಾರಕ್ಕೆ ನೊಂದು ಗಂಡ ಚಾಕು ಇರಿದುಕೊಂಡಿದ್ದಾನೆ ಎಂದು ಫರ್ಜಾನಾ ಹಸಿ ಸುಳ್ಳು ಹೇಳಿದ್ದಳು. ಪೋಷಕರು ಕೂಡಲೇ ಶಾಹಿದ್‌ನನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಕೊ*ಲೆಗೂ ಮುನ್ನ ಯುಟ್ಯೂಬ್ ನೋಡಿದ್ದಳು ಹಂತಕಿ!

ಗಂಡನ ಪ್ರಾಣ ಹೇಗೆ ತೆಗೆಯಬೇಕೆಂದು ಹಂತಕಿ ಫರ್ಜಾನಾ ಯುಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದಳು. ವಿಡಿಯೋ ನೋಡಿ ಹೇಗೆ ಪ್ಲಾನ್ ಮಾಡಬೇಕೆಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದಳು. ನಂತರ ಯುಟ್ಯೂಬ್‌ ಮೂಲಕವೇ ಸರ್ಚ್ ಹಿಸ್ಟರಿ ಹೇಗೆ ಡಿಲೀಟ್ ಮಾಡಬೇಕೆಂದು ಕಲಿತುಕೊಂಡಿದ್ದಳು. ಈ ಎಲ್ಲಾ ವಿಷಯವನ್ನು ಪೊಲೀಸರ ಮುಂದೆಯೇ ಫರ್ಜಾನಾ ಹೇಳಿದ್ದಾಳೆ. ತನ್ನ ತಪ್ಪನ್ನು ಸಹ ಫರ್ಜಾನಾ ಒಪ್ಪಿಕೊಂಡಿದ್ದು, ಗಂಡ ಹಾಸಿಗೆಯಲ್ಲಿ ಆಕೆಯ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.

ಎಲ್ಲರಿಂದ ವಿಷಯ ಮುಚ್ಚಿಟ್ಟು ಗರ್ಭಪಾತ

ಇದೀಗ ಪೊಲೀಸರು ಫರ್ಜಾನಾಳ ಸೋದರಮಾವನ ಮೇಲೆಯೂ ಕಣ್ಣಿಟ್ಟಿದ್ದಾರೆ. ಆತನ ಸಹ ಫರ್ಜಾನಾಳೊಂದಿಗೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದನಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಫರ್ಜಾನಾ ಗರ್ಭಿಣಿಯಾಗಿದ್ದ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟು ಗರ್ಭಪಾತ ಮಾಡಿಸಿಕೊಂಡಿದ್ದ ವಿಷಯವೂ ಸಹ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಗಂಡನಿಂದ ದೂರವಾಗಲು ಗರ್ಭಪಾತ ಮಾಡಿಸಿಕೊಂಡಿದ್ದಾ ಅಥವಾ ಬೇರೆಯವರೊಂದಿಗೆ ಫರ್ಜಾನಾ ಅನೈತಿಕ ಸಂಬಂಧ ಹೊಂದಿದ್ದಳಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. 

ಪೊಲೀಸರು ಫರ್ಜಾನಾ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು ಕಾಲ್ ಡೀಟೈಲ್ಸ್ ಪರಿಶೀಲಿಸುತ್ತಿದ್ದಾರೆ. ಶಾಹಿದ್ ಮತ್ತು ಫರ್ಜಾನಾ ಕುಟುಂಬಸ್ಥರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ. ಫರ್ಜಾನಾ ಯಾರೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಿದ್ದಳು ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ಇತ್ತ ಶಾಹಿದ್‌ನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.