15 ಬಾರಿ ಚಾಕುವಿನಿಂದ ಇರಿದು ಗಂಡನ ಕೊಲೆ: ಪತ್ನಿ, ಮಗನ ಬಂಧನ

ಪತ್ನಿಯೇ ಪತಿಯನ್ನು ಅಡುಗೆಗೆ ಬಳಸುತ್ತಿದ್ದ ಚಾಕುವಿನಿಂದ 15 ಬಾರಿ ಇರಿದು ಕೊಂದ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ.

Man stabbed 15 times by wife and son in punjabs Ludhiana akb

ಲೂಧಿಯಾನ: ಪತ್ನಿಯೇ ಪತಿಯನ್ನು ಅಡುಗೆಗೆ ಬಳಸುತ್ತಿದ್ದ ಚಾಕುವಿನಿಂದ 15 ಬಾರಿ ಇರಿದು ಕೊಂದ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಪತ್ನಿ ಹಾಗೂ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ತನ್ನ ಪತಿ ಮದ್ಯ ವ್ಯಸನಿಯಾಗಿದ್ದು, ಕುಡಿದ ಅಮಲಿನಲ್ಲಿ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ಪತ್ನಿ ಪೊಲೀಸರಿಗೆ ಹೇಳಿದ್ದಾಳೆ. 

ಕುಲ್ವಿಂದರ್ ಕೊಲೆಯಾದ ವ್ಯಕ್ತಿಯಾಗಿದ್ದು, ಅವರ ಪತ್ನಿ ಸತ್ನಮ್ ಕೌರ್ ಹಾಗೂ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಅಡುಗೆ ಮನೆಯಲ್ಲಿ ಬಳಸುವ ಚಾಕುವಿನಿಂದ ಇರಿದು ಪತ್ನಿ ಸತ್ನಮ್ ಕೌರ್ ಪತಿ ಕುಲ್ವಿಂದರ್‌ನನ್ನು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಾಯಿ ಮಗ ಜೋಡಿ ಆರಂಭದಲ್ಲಿ ಕುಲ್ವಿಂದರ್ ಸಾವನ್ನು ಅಪಘಾತ ಎಂದು ಮುಚ್ಚಿ ಹಾಕಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ವೇಳೆ ದೇಹದ ಅಲ್ಲಲ್ಲಿ ಚಾಕುವಿನಿಂದ ಇರಿದ ಗಾಯದ ಗುರುತುಗಳಿರುವುದು ಕಂಡು ಬಂತು. 

ಕೆಲಸದವನಿಗೆ ಹೃದಯ ಕೊಟ್ಟ ಉದ್ಯಮಿಯ ಪತ್ನಿ, ಆಳಿಗಾಗಿ ಗಂಡನ ಕೊಲೆ!

ಚಾಕು ಇರಿತದ ಪರಿಣಾಮ ಲೂಧಿಯಾನದ (Ludhiana) ಮಕ್ಕರ್ ಕಾಲೋನಿಯ (Makkar Colony) ನಿವಾಸಿಯಾಗಿದ್ದ 49 ವರ್ಷದ ಕುಲ್ವಿಂದರ್ ಸಿಂಗ್ (Kulwinder Singh)  ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಲ್ವಿಂದರ್ ಅವರ ಪತ್ನಿ ಮತ್ತು ಮಗ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದಾಗ್ಯೂ, ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಕುಲ್ವಿಂದರ್ ಅವರ ಪತ್ನಿ ಸತ್ನಮ್ ಕೌರ್, ತನ್ನ ಪತಿ ಮದ್ಯವ್ಯಸನಿಯಾಗಿದ್ದು, ಕುಡಿತದಿಂದ ಕುಸಿದು ಬಿದ್ದ ನಂತರ ಸ್ವತಃ ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.

ಆದರೆ ಶವಪರೀಕ್ಷೆಯೂಮೃತನು ತನ್ನ ದೇಹದ ಮೇಲೆ ಕನಿಷ್ಠ ಹದಿನೈದು ಇರಿತದ ಗಾಯಗಳನ್ನು ಹೊಂದಿದ್ದಾನೆ ಎಂದು ಬಹಿರಂಗಪಡಿಸಿತು. ಹಾಗಾಗಿ ನಾವು ಸತ್ನಮ್ ಮತ್ತು ಆಕೆಯ ಮಗ 20 ವರ್ಷ ಪ್ರಾಯದ ಕರಣ್ (Karan ) ಅವರನ್ನು ವಿಚಾರಣೆ ಮಾಡಿದ್ದೇವೆ. ನಂತರ ಅವರು ಮದ್ಯ ಖರೀದಿಸಲು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಕ್ಕಾಗಿ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡರು ಎಂದು ಸಹನೆವಾಲ್ ಪೊಲೀಸ್ ಠಾಣೆಯ (Sahnewal police station) ಎಸ್‌ಎಚ್‌ಒ ಇನ್‌ಸ್ಪೆಕ್ಟರ್ ಪವನ್ ಕುಮಾರ್ (Pawan Kumar) ಹೇಳಿದ್ದಾರೆ. 

ಚೀಟಿ ಹಣ ಹಾಕಿದ್ದಕ್ಕೆ ಹೆಂಡತಿಗೆ ನಿತ್ಯ ಬೈಗುಳ: ಬೇಸತ್ತು ಗಂಡನ ಕೊಲೆಗೆ ಸುಪಾರಿ ಕೊಟ್ಟ ಕಿಲಾಡಿ ಹೆಂಡತಿ
 

ಆರಂಭದಲ್ಲಿ ಪೊಲೀಸರು ಸಿಆರ್‌ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಪತ್ನಿಯ ಹೇಳಿಕೆಯ ಆಧಾರದ ಮೇಲೆ ಸ್ವಾಭಾವಿಕ ಸಾವು ಎಂದು ಭಾವಿಸಿ ವಿಚಾರಣೆಯನ್ನು ದಾಖಲಿಸಿದ್ದರು. ಆದರೆ ಮೃತನ ಸಹೋದರ ದಯಾಲ್ ಸಿಂಗ್ (Dyal Singh) ಹೇಳಿಕೆಯ ಮೇರೆಗೆ ಪತ್ನಿ ಮತ್ತು ಮಗನ ವಿರುದ್ಧ ಕೊಲೆಗೆ ಸಂಬಂಧಿಸಿದ ಎಫ್ಐಆರ್ ದಾಖಲಿಸಲಾಗಿದೆ.

ಭಾನುವಾರ, ಕುಲ್ವಿಂದರ್ ತನ್ನ ಹೆಂಡತಿಯಿಂದ ಮದ್ಯ ಖರೀದಿಸಲು ಹಣ ಕೇಳಿದಾಗ, ಮಹಿಳೆ ನಿರಾಕರಿಸಿದ್ದಳು. ಇದರ ಬೆನ್ನಲ್ಲೇ ಕುಲ್ವಿಂದರ್ ಆಕೆಯನ್ನು ಥಳಿಸಲು ಆರಂಭಿಸಿದ. ಪತಿಯ ವರ್ತನೆಯಿಂದ ಸಿಟ್ಟಿಗೆದ್ದ ಮಹಿಳೆ ತನ್ನ ಮಗನ ಜೊತೆ ಸೇರಿ ಅಡುಗೆ ಚಾಕುವಿನಿಂದ ಗಂಡನಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾಳೆ.


ಸ್ನೇಹಿತರ ಬಳಿ ಚೀಟಿ ಹಾಕಿ ಲಕ್ಷಾಂತರ ರೂಪಾಯಿ  ಹಣ ಕಳೆದುಕೊಂಡಿದ್ದ ಹೆಂಡತಿಯ ಸಾಲವನ್ನ ತೀರಿಸಿದ ಗಂಡ ಅದಕ್ಕೆ ನಿತ್ಯವೂ ಬೈತ್ತಿದ್ದ ಎಂದು  ಹೆಂಡತಿ ಗಂಡನ ಕೊಲೆಗೆ  ಸುಪಾರಿ ಕೊಟ್ಟಿದ್ದ ಘಟನೆ  ಕೆಲ ದಿನಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ನಡೆದಿತ್ತು.

Latest Videos
Follow Us:
Download App:
  • android
  • ios