ಪುಣೆಯಲ್ಲಿ ಸಿಯಾ ಗೋಯಲ್ ಎಂಬ ಯುವತಿ, ತನ್ನ ಹುಟ್ಟುಹಬ್ಬದಂದೇ ಪ್ರಿಯಕರನ ಜೊತೆ ಸೇರಿ ಭಾವಿ ಪತಿ ಕೇತನ್​ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಈ ಘಟನೆಯು 2003ರಲ್ಲಿ ಬೆಂಗಳೂರಿನಲ್ಲಿ ನಡೆದ, ವಕೀಲೆ ಶುಭಾ ತನ್ನ ಭಾವಿ ಪತಿಯನ್ನು ಕೊಲೆ ಮಾಡಿದ್ದ ಹೈ-ಪ್ರೊಫೈಲ್ ಪ್ರಕರಣವನ್ನು ನೆನಪಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ಖತರ್ನಾಕ್​ ಆಗುತ್ತಿದ್ದಾರೆ. ಹನಿಮೂನ್​ಗೆ ಕರೆದುಕೊಂಡು ಹೋಗಿ ಕೊಲೆ ಮಾಡುವುದು, ಪ್ರಿಯಕರನ ಜೊತೆ ಸೇರಿ ಭಾವಿ ಪತಿಯನ್ನೇ ಮುಗಿಸುವುದು, ಗಂಡನನ್ನು ಸಾಯಿಸುವುದು... ಹೀಗೆ ಪ್ರತಿನಿತ್ಯವೂ ಹೆಂಗಸರಿಂದ ಆಗುತ್ತಿರುವ ಕೊಲೆಯ ಬಗ್ಗೆ ವರದಿಗಳು ಹೆಚ್ಚುತ್ತಲೇ ಇವೆ. ಮದುವೆ ಬೇಡ ಎನ್ನದೇ ಹೀಗೆ ಕೊಲೆ ಮಾಡುತ್ತಿರುವುದು ಏಕೆ ಎನ್ನುವ ಪ್ರಶ್ನೆ ಮಾತ್ರ ಎಲ್ಲರನ್ನೂ ಕಾಡುತ್ತಿದೆ. ಕಳೆದ ಜೂನ್​ನಲ್ಲಿ ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿಯನ್ನು, ಆತನ ಪತ್ನಿ ಸೋನಮ್ ಹನಿಮೂನ್​ಗೆ ಕರೆದುಕೊಂಡು ಹೋಗಿ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿದ್ದಳು. ಅದರ ನೆನಪು ಮಾಸುವ ಮುನ್ನವೇ ಇದೀಗ ಭೀಕರ ಬರ್ಬರ ಹತ್ಯೆಯೊಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇತನ್​ ವಿಶಾಲ್​ ಅಗರ್​ವಾಲ್​ ಎನ್ನುವ ಯುವಕನ ಬರ್ಬರ ಕೊಲೆ ಪ್ರಕರಣವನ್ನು ಪೊಲೀಸರು ಕೊನೆಗೂ ಬೇಧಿಸಿದ್ದಾರೆ. ಇವರ ಮದುವೆ ಸಿಯಾ ಗೋಯಲ್ ಎಂಬಾಕೆಯ ಜೊತೆ ನಿಶ್ಚಯವಾಗಿತ್ತು. ಫೆಬ್ರವರಿಯಲ್ಲಿ ಇಬ್ಬರೂ ಎಂಗೇಜ್​ಮೆಂಟ್​ ಆಗಿದ್ದರು. ಅದು ಸಕತ್​ ಅದ್ಧೂರಿಯಾಗಿ ನಡೆದಿತ್ತು. ಖಾಸಗಿ ಜೆಟ್‌ಗಳು ಮತ್ತು ಅರಮನೆಗಳನ್ನು ಒಳಗೊಂಡ ಅದ್ಧೂರಿ ವಿವಾಹವನ್ನು ನವೆಂಬರ್‌ನಲ್ಲಿ ನಿಗದಿಪಡಿಸಲಾಗಿತ್ತು. ಸಿಯಾಳ ಹುಟ್ಟುಹಬ್ಬ ಇದ್ದುದರಿಂದ ಕೇತನ್​ ಸರ್​ಪ್ರೈಸ್ ಪಾರ್ಟಿ ಅರೇಂಜ್​ ಮಾಡಿದ್ದ. ಆಕೆಯನ್ನು ಸರ್​ಪ್ರೈಸ್ ಆಗಿ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಇಬ್ಬರೂ ಎಂಜಾಯ್​ ಟ್ರಿಪ್​ ಮಾಡುತ್ತಿದ್ದಾಗಲೇ ಕೇತನ್​ ಮೇಲಿನಿಂದ ಬಿದ್ದು ಸಾವನ್ನಪ್ಪಿಬಿಟ್ಟ.

ಇನ್​ಸ್ಟಾಗ್ರಾಮ್​ನಲ್ಲಿ ಗೋಳೋ ಎಂದಳು

ಭಾವಿ ಪತಿಯನ್ನು ಕಳೆದುಕೊಂಡ ಈ ಸುಂದರಿ ಒಂದೇ ಸಮನೆ ಇನ್​ಸ್ಟಾಗ್ರಾಮ್​ನಲ್ಲಿ ಗೋಳೋ ಎಂದಳು. "ನನ್ನ ಹುಟ್ಟುಹಬ್ಬದಂದು ನೀವು ನನ್ನನ್ನು ತೊರೆದಿದ್ದೀರಿ. ನಾವು ಮದುವೆಯಾಗಲು ತುಂಬಾ ಹತ್ತಿರದಲ್ಲಿದ್ದಾಗ ನೀವು ಹೊರಟುಹೋದಿರಿ. ನೀವು ನನಗೆ ಹೀಗೆ ಏಕೆ ಮಾಡಿದ್ದೀರಿ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನನಗೆ ಕನಸುಗಳಿದ್ದವು, ನನಗೆ ಎಂದಿಗೂ ಉತ್ತರ ಸಿಗದ ಪ್ರಶ್ನೆಗಳು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದಾಗ ನೀವು ನನ್ನನ್ನು ಏಕೆ ತೊರೆದಿದ್ದೀರಿ? ಶಾಂತಿಯಿಂದ ವಿಶ್ರಾಂತಿ ಪಡೆಯಿರಿ" ಎಂದು ಪೋಸ್ಟ್‌ನಲ್ಲಿ ಬರೆದಳು. ಅವಳಿಗೆ ಸಾಂತ್ವನ ಹೇಳಿದವರಿಗೆ ಲೆಕ್ಕವೇ ಇಲ್ಲ.

ಪೊಲೀಸರು ಈ ಸಾವಿನ ತನಿಖೆ ಕೈಗೊಂಡರು. ಆಗ ಸಿಯಾಳ ತನಿಖೆ ಮಾಡಿದಾಗ ಅವಳ ಗೋಳು ಕೂಡ ಪೊಲೀಸರಿಗೆ ನೋಡಲು ಆಗಲಿಲ್ಲ. ಆದರೆ ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸಿದಾಗ ಪೊಲೀಸರಿಗೇ ಶಾಕ್​ ಆಗೋಯ್ತು. ತನಿಖೆಯ ವೇಳೆ, ಸಿಯಾ ಕೇತನ್‌ನೊಂದಿಗಿನ ಮದುವೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಚೇತನ್ ಚೌಧರಿ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ತಿಳಿದು ಬಂತು. ಕೇತನ್‌ಳನ್ನು ಕೊಲ್ಲಲು ಈ ಜೋಡಿ ಸಂಚು ರೂಪಿಸಿತ್ತು ಎಂದು ಪೊಲೀಸರಿಗೆ ಈಗ ತಿಳಿದಿದೆ. ಕೇತನ್​ ಸಹೋದರಿ ಸಿಯಾಳ ಬಳಿ ವಿಚಾರಿಸುವ ಸಂದರ್ಭದಲ್ಲಿ ತಡಬಡಿಸಿದ್ದು ನೋಡಿ ಡೌಟ್​ ಬಂದು ಅದನ್ನು ಪೊಲೀಸರಿಗೆ ತಿಳಿಸಿದಾಗ, ವಿಷಯ ತನಿಖೆ ಮಾಡಿದಾಗ ಈಕೆಯ ಪ್ಲ್ಯಾನ್​ ಬೆಳಕಿಗೆ ಬಂದಿದೆ.

ಬೆಂಗಳೂರಿನ ಘಟನೆ

2003ರಲ್ಲಿ ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಹೈಕೋರ್ಟ್​ ಖ್ಯಾತ ವಕೀಲರ ಪುತ್ರಿ, ಖುದ್ದು ವಕೀಲೆಯಾಗಿದ್ದ ಶುಭಾ ತನ್ನ ಭಾವಿ ಪತಿಯನ್ನು ಕೊಲೆ ಮಾಡಿದ್ದ ಘಟನೆ. ಕಾನೂನು ಪದವಿ ಓದುತ್ತಿದ್ದ ಸಂದರ್ಭದಲ್ಲಿ ಜ್ಯೂನಿಯರ್‌‌‌ ಜೊತೆ ಲವ್​ ಮಾಡಿದ್ದ ಶುಭಾಳಿಗೆ ಟೆಕ್ಕಿ ಗಿರೀಶ್​ ಜೊತೆ ಎಂಗೇಜ್​ಮೆಂಟ್​ ಆಗಿತ್ತು. ಆಗಲೂ ಅವಳು ಮದುವೆ ಬೇಡ ಎನ್ನಲಿಲ್ಲ. ಬದಲಿಗೆ ಗಿರೀಶ್​ ಅವರನ್ನು ವಿಮಾನ ನೋಡುವ ನೆಪದಲ್ಲಿ ಕರೆದುಕೊಂಡು ಹೋಗಿ ಲವರ್​ ಜೊತೆಗೂಡಿ ಹತ್ಯೆ ಮಾಡಿದ್ದಳು. ಈ ಪ್ರಕರಣ ಹೈಕೋರ್ಟ್​ನಿಂದ ಸುಪ್ರೀಂಕೋರ್ಟ್​ಗೂ ಹೋಗಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಯೂ ಆಗಿದೆ. ಇಂಥ ಘಟನೆ ನಡೆದಾಗಲೆಲ್ಲಾ ಬೆಂಗಳೂರಿನ ಶುಭಾ ಘಟನೆ ನೆನಪಿಗೆ ಬರುವುದು ಇದೆ.