Asianet Suvarna News Asianet Suvarna News

ಬೆಂಗಳೂರು: ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸುತ್ತಿದ್ದ ಕಾಮುಕನ ಬಂಧನ

ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿ 1200 ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋಗಳನ್ನ ಚಿತ್ರೀಕರಿಸಿದ್ದ ಬಂಧಿತ ಆರೋಪಿ

Accused Arrested For Who Shooting Nude Videos of Female Students in Bengaluru grg
Author
First Published Nov 22, 2022, 8:36 AM IST

ಬೆಂಗಳೂರು(ನ.22): ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಶುಭಂ ಎಂ ಆಜಾದ್ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿ ಹೊಸಕೆರೆಹಳ್ಳಿ ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ ಅಂತ ತಿಳಿದು ಬಂದಿದೆ. ಬಿಬಿಎ ಎಲ್‌ಎಲ್‌ಬಿ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾನೆ ಬಂಧಿತ ಆರೋಪಿ. 

ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿ 1200 ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋಗಳನ್ನ ಚಿತ್ರೀಕರಿಸಿದ್ದಾನೆ. ಸ್ನೇಹಿತೆಯರು ಜೊತೆಯಲ್ಲಿದ್ದಾಗಲು ಅವರ ಅರೆನಗ್ನ ಪೋಟೋ ತೆಗೆದಿದ್ದಾನಂತೆ. ಇತ್ತೀಚೆಗೆ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಲು ಹೋದಾಗ ಯುವತಿಯರು ಚೀರಾಡಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದನು. 

Sexual harassment : 7 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 5ವರ್ಷ ಜೈಲು

ಸಿಸಿಟಿವಿ ಪರಿಶೀಲನೆ ವೇಳೆ ಶುಭಂ ಕೃತ್ಯ ಬೆಳಕಿಗೆ ಬಂದಿದೆ. ಈ ಹಿಂದೆಯೂ ಇದೇ ರೀತಿ ಮಾಡಿ ಶುಭಂ ಎಂ ಆಜಾದ್ ಅಪಾಲಜಿ ಬರೆದುಕೊಟ್ಟಿದ್ದನಂತೆ. ಮತ್ತೆ ತನ್ನ ಚಾಳಿ ಮುಂದುವರೆಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.  ಬಂಧಿತ ಮೊಬೈಲ್‌ನಲ್ಲಿ 1200 ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋಗಳು ಪತ್ತೆಯಾಗಿವೆ. ಆರೋಪಿ ಬಳಿ ಮತ್ತೊಂದು ಮೊಬೈಲ್ ಇದ್ದು ಅದರಲ್ಲಿ ಮತ್ತಷ್ಟು ವಿಡಿಯೋಗಳು ಪತ್ತೆಯಾಗುವ ಸಾಧ್ಯತೆ ಇದೆ.  ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆಯನ್ನ ನಡೆಸುತ್ತಿದ್ದಾರೆ. 
 

Follow Us:
Download App:
  • android
  • ios