ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ ಆಸ್ಪತ್ರೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಆನೇಕಲ್ (ಜು.19): ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ ಆಸ್ಪತ್ರೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಗಣಿ ನಿವಾಸಿ ಮುನಿಯಲ್ಲಪ್ಪ(46) ಮೃತ ವ್ಯಕ್ತಿ. ಅಸ್ತಮಾ, ಹೊಟ್ಟೆನೋವು, ಫಿವರ್‌ನಿಂದ ಬಳಲುತ್ತಿದ್ದ. ಕೆಲದಿನಗಳಿಂದ ವಾಸಿಯಾಗದ ಹಿನ್ನೆಲೆ ಜು.16 ರಂದು ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದ. ಇದಾದ ಬಳಿಕ ಇಂದು ಮತ್ತೆ ಆಸ್ಪತ್ರೆಗೆ ಬಂದಿದ್ದ ಮುನಿಯಲ್ಲಪ್ಪ. ಚಿಕಿತ್ಸೆ ಪಡೆಯದೆ ನೇರ ಆಸ್ಪತ್ರೆಯ ಎರಡನೇ ಮಹಡಿ ಏರಿದ್ದಾನೆ. ಬಳಿಕ ಅಲ್ಲಿಂದ ಕೆಳಕ್ಕೆ ಜಿಗಿದಿದ್ದಾನೆ. ಆಸ್ಪತ್ರೆಯ ಬಿಲ್ಡಿಂಗ್‌ನ ಸಜ್ಜದ ಮೇಲೆ ಬಿದ್ದಿದ್ದ ಮೃತದೇಹ. ವ್ಯಕ್ತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬುದು ತಿಳಿದುಬಂದಿಲ್ಲ. ಅನಾರೋಗ್ಯದಿಂದ ಆತ್ಮಹತ್ಯೆಗೆ ಶರಣಾಗಿರುಬಹುದೆ ಎಂದು ಶಂಕಿಸಲಾಗಿದೆ. 

ನೆಲಮಂಗಲ: ಹೆಂಡತಿಯ ಮೇಕಪ್‌ಗೆ ಬೇಸತ್ತು ಪತಿ ಆತ್ಮಹತ್ಯೆ

ಸದ್ಯ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನನ್ಉ ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.