ಸಚಿನ್ ತೆಂಡೂಲ್ಕರ್ ದಿಗ್ಗಜನಾಗಿ ಮಾಡಿದ ಕಾಶ್ಮೀರ ವಿಲೋ ಕಂಪನಿ ಇದೀಗ ಸಂಕಷ್ಟದಲ್ಲಿದೆ. ಸಚಿನ್ ತೆಂಡೂಲ್ಕರ್‌ಗೆ ಮೊದಲ ಬ್ಯಾಟ್ ನೀಡಿದ ಕಂಪನಿ ಇದು. ಹಲವು ದಿಗ್ಗಜರು ಬಳಸುತ್ತಿರುವುದು ಇದೇ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ಮುಚ್ಚುವ ಭೀತಿಯಲ್ಲಿದೆ.
ನವದೆಹಲಿ (ಆ.21) ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಆಟಕ್ಕೆ ನೆರವಾಗಿದ್ದ ಕಾಶ್ಮೀರ ವಿಲೋ ಬ್ಯಾಟ್. ಸಹೋದರಿ, ಆಪ್ತರು ಸಚಿನ್‌ಗೆ ಕೊಡಿಸಿದ ಮೊದಲ ಬ್ಯಾಟ್ ಕಾಶ್ಮೀರಿ ವಿಲೋ ಬ್ಯಾಟ್. ಬಳಿಕ ಸಚಿನ್ ತೆಂಡೂಲ್ಕರ್ ಕಾಶ್ಮೀರ ವಿಲೋ ಬ್ಯಾಟ್ ಹಿಡಿದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್‌ನ ದಿಗ್ಗಜನಾಗಿ ಮಾಡಿದ ಈ ಕಾಶ್ಮೀರ ವಿಲೋ ಕಂಪನಿ ಇದೀಗ ಸಂಕಷ್ಟದಲ್ಲಿದೆ. ಮರ ಸೇರಿದಂತೆ ಕಚ್ಚಾ ವಸ್ತು ಕೊರತೆಯಿಂದ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ತೀವ್ರ ಆತಂಕ ಎದುರಿಸುತ್ತಿದೆ.
ಮರಗಳೇ ಇಲ್ಲದೆ ಸಮಸ್ಯೆ
ಕಾಶ್ಮೀರದಲ್ಲಿ ಹಲವು ಬ್ಯಾಟ್ ಕಂಪನಿಗಳು ತಲೆ ಎತ್ತಿದೆ. ಆದರೆ ಕಾಶ್ಮೀರ ವಿಲೋ ಕಂಪನಿ ಅತ್ಯಂತ ಹಳೇಯ ಕಂಪನಿ. ಆಸ್ಟ್ರೇಲಿಯಾ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಇಲ್ಲಿಂದ ಬ್ಯಾಟ್ ಪಡೆದುಕೊಂಡಿದ್ದಾರೆ. ಆದರೆ ಇದೀಗ ಹಲವು ಕಂಪನಿಗಳು ಬ್ಯಾಟ್ ಉತ್ಪಾದನೆಯಲ್ಲಿ ತೊಡಗಿದೆ. ಕಾಶ್ಮೀರದಲ್ಲಿ ಸಿಗುವ ಸಾಲಿಕ್ಸ್ ಆಲ್ಬಾ ಜಾತಿಯ ಮರಗಳನ್ನು ಬ್ಯಾಟ್ ತಯಾರಿಗೆ ಬಳಕೆ ಮಾಡಲಾಗುತ್ತಿದೆ. ಆದರೆ ಹಲವು ಕಂಪನಿಗಳು ಅತಿಯಾಗಿ ಈ ಮರಗಳನ್ನು ಬಳಸುತ್ತಿದ್ದಾರೆ. ಹಲವು ಕಂಪನಿಗಳು ಚಿಕ್ಕ ಮರಗಳನ್ನು ಕಡಿಯುತ್ತಿದ್ದಾರೆ. ಇತ್ತ ಗಿಡಗಳನ್ನು ನೆಡುವ ಪ್ರಕ್ರಿಯೆ ಮಾಡುತ್ತಿಲ್ಲ. ಹೀಗಾಗಿ ಮರಗಳ ಕೊರತೆ ಎದುರಾಗಿದೆ. ಶೇಕಡಾ 40 ರಿಂದ 50ರಷ್ಟು ಕಚ್ಚಾವಸ್ತುಗಳ ಕೊರತೆ ಎದುರಾಗಿದೆ. ಪರಿಣಾಮ ಕಾಶ್ಮೀರ ವಿಲೋ ಬ್ಯಾಟ್ ತೀವ್ರ ಸಮಸ್ಯೆ ಎದುರಿಸುತ್ತಿದೆ.
ಇಂಗ್ಲೀಷ್ ವಿಲೋಗೆ ಪೈಪೋಟಿ ನೀಡಿದ್ದ ಕಾಶ್ಮೀರ ವಿಲೋ
ಕ್ರಿಕೆಟ್‌ನಲ್ಲಿ ಇಂಗ್ಲೀಷ್ ವಿಲೋ ಬ್ಯಾಟ್ ಅತ್ಯಂತ ಜನಪ್ರಿಯ. ಆದರೆ ಇದು ದುಬಾರಿಯಾಗಿತ್ತು. ಹೀಗಾಗಿ ಇಂಗ್ಲೀಷ್ ವಿಲೋಗೆ ಪ್ರತಿಯಾಗಿ ಕಡಿಮೆ ಬೆಲೆಯಲ್ಲಿ ಹಾಗೂ ಅತ್ಯುತ್ತಮ ಗುಣಮಟ್ಟದಲ್ಲಿ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ಆರಂಭಗೊಂಡಿತ್ತು. ಹಲವು ದೇಶಗಳ ಕ್ರಿಕೆಟಿಗರು ಕಾಶ್ಮೀರ ವಿಲೋ ಬ್ಯಾಟ್ ಬಳಸುತ್ತಿದ್ದಾರೆ.
ಅಕ್ರಮವಾಗಿ ಮರಗಳ ಸಾಗಾಟ
ಫ್ಲೈವುಡ್ ಸೇರಿದಂತೆ ಇತರ ಬಳಕೆಗೆ ಈ ಮರಗಳನ್ನು ಬಳಸಲಾಗುತ್ತಿದೆ. ಇದರಿಂದ ಮರಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಪರಿಣಾಮ ಕಾಶ್ಮೀರ ವಿಲೋ ಸೇರಿದಂತೆ ಬ್ಯಾಟ್ ಕಂಪನಿಗಳಿಗೆ ಸಮಸ್ಯೆ ಎದುರಾಗಿದೆ. ಸಚಿನ್ ತೆಂಡೂಲ್ಕರ್ ಹಲವು ಬಾರಿ ಕಾಶ್ಮೀರ ವಿಲೋ ಬ್ಯಾಟ್ ಕುರಿತು ಹೇಳಿದ್ದಾರೆ. ತನ್ನ ಆರಂಭಿಕ ದಿನಗಳಲ್ಲಿ ಸಹೋದರಿ ಕೊಡಿಸಿದ ಕಾಶ್ಮೀರ ವಿಲೋ ಬ್ಯಾಟ್ ಮೂಲಕ ಕ್ರಿಕೆಟ್ ಆರಂಭಿಸಿದ ಘಟನೆಯನ್ನು ವಿವರಿಸಿದ್ದಾರೆ.
2024ರಲ್ಲಿ ಸಚಿನ್ ತೆಂಡೂಲ್ಕರ್ ಕಾಶ್ಮೀರ ವಿಲೋ ಕಂಪನಿಗೆ ಭೇಟಿ ನೀಡಿದ್ದರು. ಕಾಶ್ಮೀರ ಪ್ರವಾಸದಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟ್ ಕಂಪನಿಗೆ ಭೇಟಿ ನೀಡಿದ್ದರು. ತನ್ನ ಮೊದಲ ಬ್ಯಾಟ್ ಹಾಗೂ ಕಂಪನಿಯ ಕುರಿತು ಸಚಿನ್ ತೆಂಡೂಲ್ಕರ್ ವಿವರಣೆ ನೀಡಿದ್ದರು.


