ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಈ ವೇಳೆ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಇದೇ ಸಂದರ್ಭ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಪಿಚ್‌ ಕಡೆ ಬಂದ ಅಭಿಮಾನಿಯೋರ್ವ ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದಾನೆ.

ಬೆಂಗಳೂರು(ಮಾ.26): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ನಡುವಿನ ಸೋಮವಾರದ ಪಂದ್ಯದ ವೇಳೆ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿ ವಿರಾಟ್‌ ಕೊಹ್ಲಿಯ ಕಾಲಿಗೆ ಬಿದ್ದ ಪ್ರಸಂಗ ಜರುಗಿತು.

ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಈ ವೇಳೆ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಇದೇ ಸಂದರ್ಭ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಪಿಚ್‌ ಕಡೆ ಬಂದ ಅಭಿಮಾನಿಯೋರ್ವ ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದಾನೆ.

ಕೂಡಲೇ ಭದ್ರತಾ ಸಿಬ್ಬಂದಿ ಆಗಮಿಸಿ ಆತನನ್ನು ಮೈದಾನದಿಂದ ಹೊರಹಾಕಿದ್ದಾರೆ. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

Scroll to load tweet…
Scroll to load tweet…

ಕಿಂಗ್‌ ಕೊಹ್ಲಿ ಅಬ್ಬರಕ್ಕೆ ಕಿಂಗ್ಸ್‌ ಸೈಲೆಂಟ್‌!

ಕ್ಯಾಚ್‌ ಬಿಟ್ಟರೆ ಮ್ಯಾಚ್‌ ಸೋತಂತೆ ಎಂಬ ಮಾತು ಪಂಜಾಬ್‌ ಕಿಂಗ್ಸ್‌ಗೆ ಈಗ ಮತ್ತೊಮ್ಮೆ ಅರಿವಾಗಿರಬಹುದು. ಸೊನ್ನೆಗೆ ಔಟಾಗುವರಿಂದ ಪಾರಾದ ವಿರಾಟ್‌ ಕೊಹ್ಲಿ, ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಗೆ ಈ ಬಾರಿ ಐಪಿಎಲ್‌ನ ಮೊದಲ ಗೆಲುವು ತಂದುಕೊಟ್ಟಿದ್ದಾರೆ. ಶಿಸ್ತುಬದ್ಧ ಬೌಲಿಂಗ್‌ ದಾಳಿ, ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ಗೆ ಸೂಪರ್ ಫಿನಿಶ್‌ ನೆರವಿನಿಂದ ಆರ್‌ಸಿಬಿ 4 ವಿಕೆಟ್‌ ರೋಚಕ ಜಯಗಳಿಸಿದೆ.

IPL 2024 ಚೆನ್ನೈ ಸೂಪರ್ ಕಿಂಗ್ಸ್ - ಗುಜರಾತ್ ಟೈಟಾನ್ಸ್ ನಡುವೆ ಇಂದು ಬಿಗ್ ಫೈಟ್

ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಗಳಿಸಿದ್ದು 6 ವಿಕೆಟ್‌ಗೆ 176. ಈ ಮೊತ್ತ ಚಿನ್ನಸ್ವಾಮಿಯ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ದೊಡ್ಡದೇನೂ ಅಲ್ಲ. ಆದರೆ ಕೊಹ್ಲಿ ಅಬ್ಬರದ ನಡುವೆಯೂ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಆರ್‌ಸಿಬಿ 19.2 ಓವರ್‌ಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಟಿ20ಯಲ್ಲಿ 100ನೇ 50+ ಸ್ಕೋರ್‌: ಕೊಹ್ಲಿ ದಾಖಲೆ

ಪಂಜಾಬ್‌ ವಿರುದ್ಧ 77 ರನ್‌ ಸಿಡಿಸಿದ ಕೊಹ್ಲಿ ಟ20 ಕ್ರಿಕೆಟ್‌ನಲ್ಲಿ 100ನೇ 50+ ಸ್ಕೋರ್‌ ಮೈಲುಗಲ್ಲು ಸಾಧಿಸಿದರು. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬ್ಯಾಟರ್‌. ಕೊಹ್ಲಿ 377 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು. ವೆಸ್ಟ್ಇಂಡೀಸ್‌ನ ಕ್ರಿಸ್‌ ಗೇಲ್‌ 110, ಡೇವಿಡ್‌ ವಾರ್ನರ್ 109 ಬಾರಿ ಟಿ20 ಕ್ರಿಕೆಟ್‌ನಲ್ಲಿ 50+ ರನ್ ಗಳಿಸಿದ್ದಾರೆ. 81 ಬಾರಿ ಈ ಸಾಧನೆ ಮಾಡಿರುವ ರೋಹಿತ್‌ ಶರ್ಮಾ ಭಾರತೀಯರ ಪೈಕಿ 2ನೇ ಸ್ಥಾನದಲ್ಲಿದ್ದಾರೆ.

ವಿರಾಟ ರೂಪ, ಕಾರ್ತಿಕ್ ಸಿಕ್ಸರ್ ಆಟಕ್ಕೆ ಪಂಜಾಬ್ ಧೂಳೀಪಟ, ಆರ್‌ಸಿಬಿ 4 ವಿಕೆಟ್ ಗೆಲುವು!

ಚಿನ್ನಸ್ವಾಮಿಯಲ್ಲಿ 25 ಫಿಫ್ಟಿ!

ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನಲ್ಲಿ 25ನೇ ಅರ್ಧಶತಕ ಬಾರಿಸಿದರು. ಇದು ಕ್ರೀಡಾಂಗಣವೊಂದರಲ್ಲಿ ಆಟಗಾರ ಬಾರಿಸಿದ ಗರಿಷ್ಠ ಫಿಫ್ಟಿ. ವಾರ್ನರ್‌ ಹೈದರಾಬಾದ್‌ನಲ್ಲಿ 18, ಎಬಿ ಡಿವಿಲಿಯರ್ಸ್‌ ಚಿನ್ನಸ್ವಾಮಿಯಲ್ಲಿ 16, ರೋಹಿತ್‌ ಶರ್ಮಾ ಮುಂಬೈನ ವಾಂಖೇಡೆಯಲ್ಲಿ 15 ಬಾರಿ ಈ ಸಾಧನೆ ಮಾಡಿದ್ದಾರೆ.

51 ಫಿಫ್ಟಿ: ಧವನ್‌ರನ್ನು ಹಿಂದಿಕ್ಕಿದ ವಿರಾಟ್‌

ಕೊಹ್ಲಿ ಐಪಿಎಲ್‌ನಲ್ಲಿ 51ನೇ ಅರ್ಧಶತಕ ಬಾರಿಸಿದರು. ಈ ಮೂಲಕ 50 ಫಿಫ್ಟಿ ಸಿಡಿಸಿರುವ ಶಿಖರ್‌ ಧವನ್‌ರನ್ನು ಹಿಂದಿಕ್ಕಿ, ಅತಿ ಹೆಚ್ಚು ಅರ್ಧಶತಕ ಬಾರಿಸಿದ ಭಾರತೀಯರಲ್ಲಿ ಅಗ್ರಸ್ಥಾನಕ್ಕೇರಿದರು. 61 ಅರ್ಧಶತಕ ಬಾರಿಸಿರುವ ಡೇವಿಡ್‌ ವಾರ್ನರ್‌ ಅಗ್ರಸ್ಥಾನದಲ್ಲಿದ್ದಾರೆ.