ಐಪಿಎಲ್ ಹರಾಜಿನಲ್ಲಿ ಬೆಂಗಳೂರು ತೆಕ್ಕೆಗೆ ಬಂದ ಪಾಂಡ್ಯ ಬ್ರದರ್‌!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಅವರನ್ನು ಖರೀದಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

IPL 2025 Auction RCB buy Krunal Pandya kvn

ಜೆಡ್ಡಾ: 2025ನೇ ಸಾಲಿನ ಐಪಿಎಲ್ ಮೆಗಾ ಹರಾಜಿನ ಎರಡನೇ ದಿನಕ್ಕೆ ಚಾಲನೆ ಸಿಕ್ಕಿದೆ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಅನುಭವಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಕೃನಾಲ್ ಪಾಂಡ್ಯ ಅವರನ್ನು 5.75 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ

ಹೌದು, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದ ಕೃನಾಲ್ ಪಾಂಡ್ಯ ಅವರನ್ನು ಲಖನೌ ಫ್ರಾಂಚೈಸಿಯು ಆರ್‌ಟಿಎಂ ಬಳಸಲಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಬೆಂಗಳೂರು ತಂಡ ಕೂಡಿಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡದ ಟಾಪ್ 7 ಆಟಗಾರರ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಎಡಗೈ ಬ್ಯಾಟರ್ ಖರೀದಿಸುವಲ್ಲಿ ಯಶಸ್ವಿಯಾಗಿದೆ

ಡೆಲ್ಲಿ ತಂತ್ರಗಾರಿಕೆಗೆ ಬೆಲೆ ತೆತ್ತ ಲಖನೌ ಫ್ರಾಂಚೈಸಿ; ಪಂತ್ ಖರೀದಿಸಲು ಹೋಗಿ 7 ಕೋಟಿ ಲಾಸ್!

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಡಗೈ ವೇಗಿ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಐಪಿಎಲ್ ಮೆಗಾ ಹರಾಜಿನಲ್ಲಿ ಜೋಶ್ ಹೇಜಲ್‌ವುಡ್ ಅವರನ್ನು 12.50 ಕೋಟಿ ರುಪಾಯಿ, ರಸಿಖ್‌ ದಾರ್‌ ಅವರಿಗೆ 6 ಕೋಟಿ ರುಪಾಯಿ, ಸುಯಾಶ್ ಶರ್ಮಾ 2.60 ಕೋಟಿ, ವಿಕೆಟ್ ಕೀಪರ್ ಬ್ಯಾಟರ್‌ಗಳಾದ ಫಿಲ್ ಸಾಲ್ಟ್ 11.50 ಕೋಟಿ ಹಾಗೂ ಜಿತೇಶ್ ಶರ್ಮಾ ಅವರಿಗೆ 11 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದೀಗ ಕೃನಾಲ್ ಪಾಂಡ್ಯ ಆರ್‌ಸಿಬಿ ತಂಡ ಸೇರ್ಪಡೆಯಾಗಿರುವುದು ತಂಡದ ಬಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. 

Latest Videos
Follow Us:
Download App:
  • android
  • ios