ಬೆಂಗಳೂರು[ನ.16]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅನುಭವಿ ವೇಗಿ ಡೇಲ್ ಸ್ಟೇನ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಕಳೆದ ಆವೃತ್ತಿಯ ಮಧ್ಯದಲ್ಲಿ RCB ತಂಡ ಕೂಡಿಕೊಂಡು 2 ಪಂದ್ಯಗಳಲ್ಲಿ ಗೆಲುವಿನ ರೂವಾರಿ ಎನಿಸಿದ್ದ ಸ್ಟೇನ್ ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.

IPL 2020: ಹರಾಜಿಗೂ ಮುನ್ನ RCB ಮಾಡಿದ ಅತಿದೊಡ್ಡ ಎಡವಟ್ಟುಗಳಿವು..!

ಇದೀಗ ಡೇಲ್ ಸ್ಟೇನ್ ಅವರು ಮುಂಬರುವ 2020ರ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಮುಂಬರುವ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆಯಲಿದ್ದು, ಯಾವ ಫ್ರಾಂಚೈಸಿ ಅನುಭವಿ ವೇಗಿಯನ್ನು ಖರೀದಿಸಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಹೀಗಿರುವಾಗಲೇ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಸ್ಟೇನ್ ಅಷ್ಟೇ ಹೃದಯಸ್ಪರ್ಶಿಯಾದ ಉತ್ತರ ನೀಡಿದ್ದಾರೆ.

ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ, ’ಡೇಲ್, ಪ್ರಾಮಾಣಿಕವಾಗಿ ಹೇಳಿ 2020ರ ಐಪಿಎಲ್’ನಲ್ಲಿ ಯಾವ ತಂಡವನ್ನು ಪ್ರತಿನಿಧಿಸಲು ಇಷ್ಟಪಡುತ್ತೀರಾ’ ಎಂಬ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಡೇಲ್ ಸ್ಟೇನ್, ’ಯಾರಿಗೆ ನನ್ನ ಅಗತ್ಯವಿದೆಯೋ/ಖರೀದಿಸುತ್ತಾರೋ ಅವರ ಪರ ಆಡುತ್ತೇನೆ ಎಂದು ಉತ್ತರ ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಕ್ರವಾರ ಮಾರ್ಕಸ್ ಸ್ಟೋನಿಸ್, ಕಾಲಿನ್ ಡಿ ಗ್ರಾಂಡ್ ಹೋಮ್, ಟಿಮ್ ಸೌಥಿ ಸೇರಿದಂತೆ 12 ಆಟಗಾರರನ್ನು ಕೈಬಿಟ್ಟಿದ್ದು, ಇಬ್ಬರು ವಿದೇಶಿ ಆಟಗಾರರು ಸೇರಿದಂತೆ 13 ಆಟಗಾರರನ್ನು ಉಳಿಸಿಕೊಂಡಿದೆ. ತಂಡದಲ್ಲಿ ಸ್ಥಾನ ಉಳಿಸಿಕೊಂಡ ಎರಡು ವಿದೇಶಿ ಆಟಗಾರರೆಂದರೆ, ಎಬಿ ಡಿವಿಲಿಯರ್ಸ್, ಮೊಯಿನ್ ಅಲಿ.

ABD ಬಳಿಕ ಹೊಸ ತಂಡ ಸೇರಿದ RCB ವೇಗಿ ಡೇಲ್ ಸ್ಟೇನ್..!

ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್’ಗೆ ವಿದಾಯ ಹೇಳಿದ ಬಳಿಕ ದಕ್ಷಿಣ ಆಫ್ರಿಕಾ ಸೀಮಿತ ಓವರ್’ಗಳ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇನ್ನು ಹರಿಣಗಳ ಪಡೆ ಭಾರತ ಪ್ರವಾಸ ಕೈಗೊಂಡಿದ್ದಾಗಲೂ ಸ್ಟೇನ್’ಗೆ ತಂಡದಲ್ಲಿ ನೀಡಿರಲಿಲ್ಲ. ಡೇಲ್ ಸ್ಟೇನ್ ಬಿಗ್ ಬ್ಯಾಶ್ ಲೀಗ್’ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡಲು ಸಹಿ ಹಾಕಿದ್ದಾರೆ.