Asianet Suvarna News Asianet Suvarna News

ABD ಬಳಿಕ ಹೊಸ ತಂಡ ಸೇರಿದ RCB ವೇಗಿ ಡೇಲ್ ಸ್ಟೇನ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮತ್ತೋರ್ವ ವೇಗಿ ಡೇಲ್ ಸ್ಟೇನ್ ಇದೀಗ ಮತ್ತೊಂದು ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕಳೆದ ಆವೃತ್ತಿಯಲ್ಲಿ RCB ತಂಡದ ಗೆಲುವಿನಲ್ಲಿ ಸ್ಟೇನ್ ಪ್ರಮುಖ ಪಾತ್ರ ವಹಿಸಿದ್ದರು. 

South Africa pacer Dale Steyn signs with Melbourne Stars for six BBL games
Author
Bengaluru, First Published Oct 8, 2019, 5:55 PM IST

ಬೆಂಗಳೂರು[ಅ.08]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಬ್ರಿಸ್ಬೇನ್ ಹೀಟ್ ಸೇರಿ ಒಂದು ವಾರ ಕಳೆಯುವುದರೊಳಗಾಗಿ RCBಯ ಮತ್ತೋರ್ವ ಸ್ಟಾರ್ ವೇಗಿ ಡೇಲ್ ಸ್ಟೇನ್ ಮೆಲ್ಬೋರ್ನ್ ಸ್ಟಾರ್ಸ್ ತಂಡ ಕೂಡಿಕೊಂಡಿದ್ದಾರೆ.

ಟಿ20 ಲೀಗ್; ಹೊಸ ತಂಡ ಸೇರಿಕೊಂಡ ಎಬಿ ಡಿವಿಲಿಯರ್ಸ್!

12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಡೇಲ್ ಸ್ಟೇನ್ 2 ಪಂದ್ಯಗಳನ್ನು ಆಡಿದ್ದರು. ಸತತ ಸೋಲಿನಿಂದ ಕಂಗೆಟ್ಟಿದ್ದ ವಿರಾಟ್ ಪಡೆಗೆ ಸ್ಟೇನ್ ಗೆಲುವಿನ ಸಿಹಿ ಉಣಬಡಿಸಿದ್ದರು. ಆಡಿದ 2 ಪಂದ್ಯಗಳಲ್ಲೂ RCB ಗೆಲುವಿನಲ್ಲಿ ಸ್ಟೇನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರ ಬಿದ್ದಿದ್ದರು. ಆ ಬಳಿಕ ಇದೇ ಗಾಯದ ಸಮಸ್ಯೆಯಿಂದಾಗಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದರು. 

ಕೊಹ್ಲಿಗೆ ತಾಕತ್ತಿದ್ರೆ IPL ಕಪ್ ಗೆಲ್ಲಲಿ: ಗಂಭೀರ್ ಖಡಕ್ ಸವಾಲು..!

ಈಗಾಗಲೇ ದಕ್ಷಿಣ ಆಫ್ರಿಕಾದ ಸಹಪಾಠಿಗಳಾದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಮೋರಿಸ್ ಬಳಿಕ ಇದೀಗ ಸ್ಟೇನ್ ಕೂಡಾ ಬಿಗ್ ಬ್ಯಾಶ್ ಲೀಗ್’ನಲ್ಲಿ ಮಿಂಚು ಹರಿಸಲು ರೆಡಿಯಾಗಿದ್ದಾರೆ. ಕ್ರಿಸ್ ಮೋರಿಸ್ ಸಿಡ್ನಿ ಥಂಡರ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಮುಂಬರುವ ಆವೃತ್ತಿಯಲ್ಲಿ ಸ್ಟೇನ್, ಮೆಲ್ಬೋರ್ನ್ ಸ್ಟಾರ್ಸ್ ಪರ ಆಡಲಿರುವ ಎರಡನೇ ವಿದೇಶಿ ಆಟಗಾರ ಎನಿಸಲಿದ್ದಾರೆ. ಈಗಾಗಲೇ ನೇಪಾಳದ ಸಂದೀಪ್ ಲ್ಯಾಮಿಚ್ಚಾನೆ ಮೆಲ್ಬೋರ್ನ್ ಸ್ಟಾರ್ಸ್ ಜತೆ ಒಪ್ಪಂದಕ್ಕೆ ಸಹಿಹಾಕಿದ್ದಾರೆ.

RCB ಬ್ರ್ಯಾಂಡ್ ಮೌಲ್ಯ ಕುಸಿತ..! ಆದರೆ ಕೊಹ್ಲಿ ನಾಯಕತ್ವಕ್ಕಿಲ್ಲ ಕುತ್ತು..!

ದಕ್ಷಿಣ ಆಫ್ರಿಕಾ ಪರ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿರುವ ಡೇಲ್ ಸ್ಟೇನ್, ಗಾಯದ ಸಮಸ್ಯೆಯಿಂದಾಗಿ ಇದೇ ವರ್ಷದ ಆಗಸ್ಟ್’ನಲ್ಲಿ ರೆಡ್ ಬಾಲ್ ಕ್ರಿಕೆಟ್’ಗೆ ವಿದಾಯ ಹೇಳಿದ್ದರು. ನಿವೃತ್ತಿಯ ಬೆನ್ನಲ್ಲೇ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಮುಂದುವರೆಯುವುದಾಗಿಯೂ ತಿಳಿಸಿದ್ದರು. ಆದರೆ ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಸ್ಟೇನ್’ಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಮೊದಲ 6 ಪಂದ್ಯಗಳನ್ನಾಡಲು ಡೇಲ್ ಸ್ಟೇನ್’ಗೆ ಅನುಮತಿ ನೀಡಿದೆ.

Follow Us:
Download App:
  • android
  • ios