- Home
- Sports
- Cricket
- ಮದುವೆಯ ಹಲ್ದೀ-ಸಂಗೀತಾ ಕಾರ್ಯಕ್ರಮ ಬಿಟ್ಟು ಲಖನೌ ಜೆರ್ಸಿ ಅನಾವರಣದಲ್ಲಿ ಪಾಲ್ಗೊಂಡ ಅರ್ಜುನ್ ತೆಂಡೂಲ್ಕರ್!
ಮದುವೆಯ ಹಲ್ದೀ-ಸಂಗೀತಾ ಕಾರ್ಯಕ್ರಮ ಬಿಟ್ಟು ಲಖನೌ ಜೆರ್ಸಿ ಅನಾವರಣದಲ್ಲಿ ಪಾಲ್ಗೊಂಡ ಅರ್ಜುನ್ ತೆಂಡೂಲ್ಕರ್!
ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೀಗಿರುವಾಗಲೇ ತಮ್ಮ ವೈಯುಕ್ತಿಕ ಜೀವನಕ್ಕಿಂತ ಮಿಗಿಲಾಗಿ ವೃತ್ತಿಜೀವನ ಮುಖ್ಯ ಎನ್ನುವ ಸಂದೇಶ ಸಾರಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

ಅರ್ಜುನ್-ಸಾನಿಯಾ ಚಾಂದೂಕ್ ಮದುವೆ
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಇದೀಗ ಬಹುಕಾಲದ ಗೆಳತಿ ಸಾನಿಯಾ ಚಾಂದೋಕ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಮದುವೆ ಮಾರ್ಚ್ 05ರಂದು ನಡೆಯಲಿದೆ.
ಸಚಿನ್ ಮನೆಯಲ್ಲಿ ಪ್ರೀ ವೆಡ್ಡಿಂಗ್ ಸಂಭ್ರಮ
ಹೀಗಿರುವಾಗಲೇ ಸಚಿನ್ ತೆಂಡೂಲ್ಕರ್ ನಿವಾಸವಾದ ಜಾಮ್‌ನಗರದಲ್ಲಿ ಪ್ರೀ ವೆಡ್ಡಿಂಗ್ ಸಂಭ್ರಮಾಚರಣೆ ಆರಂಭವಾಗಿದೆ. ಇದೆಲ್ಲದರ ನಡುವೆ ಅರ್ಜುನ್ ತೆಂಡೂಲ್ಕರ್ ತಮ್ಮ ಖಾಸಗಿ ಬದುಕಿಗಿಂತ ಕ್ರಿಕೆಟ್ ಬದುಕು ತುಂಬಾನೆ ಮುಖ್ಯ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ಮದುವೆ ಕಾರ್ಯಕ್ರಮದ ನಡುವೆಗೂ ಕ್ರಿಕೆಟ್ ಬದ್ದತೆ ಮೆರೆದ ಅರ್ಜುನ್
ಹೌದು, ಒಂದು ಕಡೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಹಲ್ದೀ ಹಾಗೂ ಸಂಗೀತ್ ಕಾರ್ಯಕ್ರಮ ಈಗಾಗಲೇ ಶುರುವಾಗಿದೆ. ಹೀಗಿರುವಾಗಲೇ ಅರ್ಜುನ್ ತೆಂಡೂಲ್ಕರ್, ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಆಯೋಜಿಸಿದ್ದ ನೂತನ ಜೆರ್ಸಿ ಪ್ರಮೋಷನಲ್ ಫೋಟೋಶೂಟ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲು ರೆಡಿಯಾದ ಲಖನೌ ಸೂಪರ್ ಜೈಂಟ್ಸ್
ಐಪಿಎಲ್‌ನ ಲಖನೌ ಸೂಪರ್ ಜೈಂಟ್ಸ್ ತಂಡ 2026ರ ಟೂರ್ನಿಗೂ ಮುನ್ನ ಹೊಸ ಲೋಗೋ ಬಿಡುಗಡೆ ಮಾಡಿದೆ. ಗರುಡ, ಕಿರೀಟ ಹಾಗೂ ಆನೆಯ ಚಿತ್ರಗಳಿರುವ ಲೋಗೋವನ್ನು ತಂಡ ಸಾಮಾಜಿಕ ತಾಣಗಳಲ್ಲಿ ತನ್ನ ಅಧಿಕೃತ ಖಾತೆಗಳ ಮೂಲಕ ಹಂಚಿಕೊಂಡಿದೆ.
ಲಖನೌ ಪರ ಕಣಕ್ಕಿಳಿಯಲು ರೆಡಿಯಾದ ಅರ್ಜುನ್ ತೆಂಡೂಲ್ಕರ್
ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಅರ್ಜುನ್ ತೆಂಡೂಲ್ಕರ್, 2026ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಮುಂಬೈ ಫ್ರಾಂಚೈಸಿಯು 30 ಲಕ್ಷ ರುಪಾಯಿಗೆ ಅರ್ಜುನ್ ತೆಂಡೂಲ್ಕರ್ ಅವರನ್ನು ಲಖನೌ ಫ್ರಾಂಚೈಸಿಗೆ ಟ್ರೇಡ್ ಮಾಡಿತ್ತು.
ನೆಟ್ಟಿಗರ ಮೆಚ್ಚುಗೆಎಗ ಪಾತ್ರವಾದ ಅರ್ಜುನ್ ತೆಂಡೂಲ್ಕರ್
ತಮ್ಮದೇ ಮದುವೆಯ ಸಂಭ್ರಮಾಚರಣೆಯಿದ್ದರೂ, ವೃತ್ತಿಪರ ವಿಚಾರದಲ್ಲಿ ಬದ್ದತೆ ಹೊಂದಿರುವ ಅರ್ಜುನ್ ತೆಂಡೂಲ್ಕರ್ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

