IPL 2020: ಹರಾಜಿಗೂ ಮುನ್ನ RCB ಮಾಡಿದ ಅತಿದೊಡ್ಡ ಎಡವಟ್ಟುಗಳಿವು..!
ಬೆಂಗಳೂರು: ಕೆಟ್ಟರೂ ಬುದ್ದಿ ಕಲಿಯೊಲ್ಲ ಎನ್ನುವ ಗಾದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸರಿಯಾಗಿಯೇ ಅನ್ವಯಿಸುತ್ತದೆ. ಕಳೆದ 12 ಆವೃತ್ತಿಗಳಿಂದ ಮಾಡುತ್ತಾ ಬಂದಿರುವ ತಪ್ಪನ್ನೇ RCB ಮತ್ತೊಮ್ಮೆ ಮಾಡಿದೆ.ಹೌದು, ತಂಡದ ಕಾಂಬಿನೇಷನ್ ವಿಚಾರದಲ್ಲಿ ಪದೇ ಪದೇ ಎಡವುತ್ತಲೇ ಬಂದಿರುವ RCB, ಇದೀಗ ಪ್ರಮುಖ ಟಿ20 ಸ್ಪೆಷಲಿಸ್ಟ್’ಗಳನ್ನೇ ಕೈಬಿಟ್ಟಿದೆ. ಇನ್ನು ಏನೂ ಪ್ರಯೋಜನವಿಲ್ಲದ ಪವನ್ ನೇಗಿ ಅವರಂತಹ ಆಟಗಾರನನ್ನು ತಂಡದಲ್ಲೇ ಉಳಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಿದ ಅತಿದೊಡ್ಡ ಎಡವಟ್ಟುಗಳ ಬಗ್ಗೆ ಸುವರ್ಣ ನ್ಯೂಸ್.ಕಾಂ ಬೆಳಕು ಚೆಲ್ಲುತ್ತಿದೆ
110

1. ಡೇಲ್ ಸ್ಟೇನ್- ಮಾರಕ ವೇಗಿಗಿಲ್ಲ ಸ್ಥಾನ
1. ಡೇಲ್ ಸ್ಟೇನ್- ಮಾರಕ ವೇಗಿಗಿಲ್ಲ ಸ್ಥಾನ
210
2019ನೇ ಆವೃತ್ತಿಯ ಐಪಿಎಲ್’ನಲ್ಲಿ ಸೋತು ಸುಣ್ಣವಾಗಿದ್ದ RCB ತಂಡಕ್ಕೆ ಗೆಲುವಿನ ಸಿಂಚನ ನೀಡಿದ್ದ ವೇಗಿ ಡೇಲ್ ಸ್ಟೇನ್ ಕೈಬಿಟ್ಟು ತಪ್ಪು ಮಾಡಿದೆ. ಕಳೆದ ಆವೃತ್ತಿಯಲ್ಲಿ 2 ಪಂದ್ಯಗಳನ್ನಾಡಿ 4 ವಿಕೆಟ್ ಪಡೆದಿದ್ದ ಸ್ಟೇನ್, ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು.

310
2. ಪವನ್ ನೇಗಿ- ನೀರಸ ಪ್ರದರ್ಶನ ಆದರೂ ಸ್ಥಾನ..!

410
ಪವನ್ ನೇಗಿ ಕಳೆದೆರಡು ವರ್ಷಗಳಿಂದ RCB ತಂಡದಲ್ಲಿ ಸ್ಥಾನ ಪಡೆದಿದ್ದರೂ, ಸಾಧನೆ ಮಾತ್ರ ಅಕ್ಷರಶಃ ಶೂನ್ಯ. ಆದರೂ ನೇಗಿಯನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. 2019ನೇ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿ 12 ರನ್ ಬಾರಿಸಿದ್ದರೆ, ಬೌಲಿಂಗ್’ನಲ್ಲಿ ಕಬಳಿಸಿದ್ದು ಕೇವಲ 3 ವಿಕೆಟ್’ಗಳು ಮಾತ್ರ..! ನೀವೇ ಹೇಳಿ ಈತ RCB ತಂಡಕ್ಕೆ ಅಗತ್ಯವಿತ್ತಾ..?

510
3. ಮಾರ್ಕಸ್ ಸ್ಟೋನಿಸ್: ಉಪಯುಕ್ತ ಆಲ್ರೌಂಡರ್‌ಗಿಲ್ಲ ಸ್ಥಾನ

610
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದವರಲ್ಲಿ ಕೊಹ್ಲಿ, ಎಬಿಡಿ ಬಿಟ್ಟರೆ ಅದು ಮಾರ್ಕಸ್ ಸ್ಟೋನಿಸ್. ಸ್ಟೋನಿಸ್ 10 ಪಂದ್ಯಗಳನ್ನಾಡಿ 52.75ರ ಸರಾಸರಿಯಲ್ಲಿ 211 ರನ್ ಬಾರಿಸಿದ್ದರು. ಬೌಲಿಂಗ್’ನಲ್ಲಿ 2 ವಿಕೆಟ್ ಪಡೆದಿದ್ದರು. ಆದರೆ ಇಂತಹ ಉಪಯುಕ್ತ ಆಟಗಾರನಿಗೆ ಗೇಟ್ ಪಾಸ್ ಸಿಕ್ಕಿದ್ದೇಕೆ ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

710
4. ಮೊಹಮ್ಮದ್ ಸಿರಾಜ್: ದುಬಾರಿ ಆಟಗಾರನಿಗೆ ಮಣೆ

810
ವೇಗಿ ಮೊಹಮ್ಮದ್ ಸಿರಾಜ್ 2019ನೇ ಆವೃತ್ತಿಯಲ್ಲಿ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರೂ, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿ 9.2ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದ ಸಿರಾಜ್ ಪಡೆದದ್ದು ಕೇವಲ 7 ವಿಕೆಟ್ ಮಾತ್ರ. ಹೀಗಿದ್ದರೂ ಸಿರಾಜ್ ಕೈಬಿಡದೇ ದೊಡ್ಡ ಎಡವಟ್ಟು ಮಾಡಿದೆ RCB

910
5. ಕನ್ನಡಿಗರಿಗಿಲ್ಲ ಚಾನ್ಸ್..!
5. ಕನ್ನಡಿಗರಿಗಿಲ್ಲ ಚಾನ್ಸ್..!
1010
ಕನ್ನಡದ ಆಟಗಾರರನ್ನು ಖರೀದಿಸಲು ಬೇರೆ ಫ್ರಾಂಚೈಸಿಗಳು ನಾ ಮುಂದೆ, ತಾ ಮುಂದೆ ಎಂದು ಹಾತೊರೆಯುತ್ತವೆ. ಆದರೆ RCBಗೆ ಮಾತ್ರ ಕನ್ನಡದ ಆಟಗಾರರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬಂತೆ ಕಾಣುತ್ತಿದೆ. ರಾಹುಲ್, ಅಗರ್‌ವಾಲ್, ಮನೀಶ್, ಗೋಪಾಲ್, ಗೌತಮ್, ಸುಚಿನ್ ಅವರು ಬೇರೆ-ಬೇರೆ ತಂಡದಲ್ಲಿ ಮಿಂಚುತ್ತಿದ್ದಾರೆ. ಇನ್ನು ಕಾಟಾಚಾರಕ್ಕೆ ಎಂಬಂತೆ 2018ನೇ ಆವೃತ್ತಿಯಲ್ಲಿ ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿಯನ್ನು ಖರೀದಿಸಿತ್ತು, 2019ರಲ್ಲಿ ದೇವದತ್ ಪಡಿಕ್ಕಲ್’ರನ್ನು ಖರೀದಿಸಿತ್ತಾದರೂ, ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿಯ ಹರಾಜಿನಲ್ಲಾದರೂ ಕನ್ನಡಿಗರನ್ನು RCB ಖರೀದಿಸುತ್ತಾ ಕಾದು ನೋಡಬೇಕಿದೆ.

Latest Videos