Asianet Suvarna News Asianet Suvarna News

IND vs NZ ನ್ಯೂಜಿಲೆಂಡ್ ವಿರುದ್ಧ ಗಿಲ್ ದ್ವಿಶತಕ, ತೆಂಡೂಲ್ಕರ್ ಸೇರಿ ಹಲವರ ದಾಖಲೆ ಪುಡಿ ಪುಡಿ!

ಶುಭಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. ಕಿವೀಸ್ ವಿರುದ್ದದ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಗಿಲ್ ದಾಖಲೆ ವಿವರ ಇಲ್ಲಿದೆ. 

IND vs NZ Shubman Gill hit double century against New zealand at Hyderabad breaks sachin tendulkar record Ckm
Author
First Published Jan 18, 2023, 5:28 PM IST

ಹೈದರಾಬಾದ್(ಜ.18): ನ್ಯೂಜಿಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಶುಭಮನ್ ಗಿಲ್ ದಾಖಲೆ ಬರೆದಿದ್ದಾರೆ. ದಿಟ್ಟ ಹೋರಾಟದ ಮೂಲಕ ದ್ವಿಶತಕ ಸಿಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ದ ಶುಭಮನ್ ಗಿಲ್ ಏಕಾಂಗಿ ಹೋರಾಟ ನಡೆಸಿದ್ದಾರೆ. ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವೈಫಲ್ಯದ ನಡುವೆ ಗಿಲ್ ದಿಟ್ಟ ಹೋರಾಟ ನೀಡಿ ಡಬಲ್ ಸೆಂಚುರಿ ಸಿಡಿಸಿದ್ದಾರೆ. ಶುಭಮನ್ ಗಿಲ್ 149 ಎಸೆತದಲ್ಲಿ 208 ರನ್ ಸಿಡಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಅತೀ ಕಿರಿಯ ಆಟಾಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಅತೀ ಕಿರಿಯ ಬ್ಯಾಟ್ಸ್‌ಮನ್
ಶುಭಮನ್ ಗಿಲ್, ದ್ವಿಶತಕ vs ನ್ಯೂಜಿಲೆಂಡ್( 23 ವರ್ಷ, 132 ದಿನ)
ಇಶಾನ್ ಕಿಶನ್ vs ಬಾಂಗ್ಲಾದೇಶ(24 ವರ್ಷ, 145 ದಿನ)
ರೋಹಿತ್ ಶರ್ಮಾ vs ಆಸ್ಟ್ರೇಲಿಯಾ( 26 ವರ್ಷ, 186 ದಿನ)

IND VS NZ ಶುಭಮನ್ ಗಿಲ್ ಡಬಲ್ ಸೆಂಚುರಿ, ನ್ಯೂಜಿಲೆಂಡ್‌ಗೆ 350 ರನ್ ಗುರಿ!

ಶುಬಮನ್ ಗಿಲ್ 149 ಎಸೆತದಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್ ಮೂಲಕ 208 ರನ್ ಚಚ್ಚಿದರು. ನ್ಯೂಜಿಲೆಂಡ್ ವಿರುದ್ದ ಗರಿಷ್ಠ ವೈಯುಕ್ತಿಕ ರನ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ದಾಖಲೆಯನ್ನು ಗಿಲ್ ಬರೆದಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತು. 1999ರಲ್ಲಿ ಸಚಿನ್ ತೆಂಡೂಲ್ಕರ್ ನ್ಯೂಜಿಲೆಂಡ್ ವಿರುದ್ಧ ಅಜೇಯ 186 ರನ್ ಸಿಡಿಸಿದ್ದರು. ಇದೀಗ ಗಿಲ್ 208 ರನ್ ಸಿಡಿಸಿದ್ದಾರೆ. 

ನ್ಯೂಜಿಲೆಂಜ್ ವಿರುದ್ಧ ವೈಯುಕ್ತಿಕ ಗರಿಷ್ಠ ಸ್ಕೋರ್
ಶುಭಮನ್ ಗಿಲ್, 208ರನ್, 2023
ಸಚಿನ್ ತೆಂಡುಲ್ಕರ್, ಅಜೇಯ 186 ರನ್, 1999
ಮಾಥ್ಯೂ ಹೇಡನ್, ಅಜೇಯ 181 ರನ್, 2007
ಡೇವ್ ಚಲನ್, ಅಜೇಯ 169 ರನ್, 1994

ಶುಭಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 1,000 ರನ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಹೆಸರಿನಲ್ಲಿದ್ದ ದಾಖಲೆ ಪುಡಿ ಮಾಡಿದ್ದಾರೆ. 

'ಚೇತರಿಸುತ್ತಿದ್ದೇನೆ, ಎಲ್ಲಾ ಸವಾಲುಗಳಿಗೆ ಸಿದ್ಧ': ಅಪಘಾತದ ಬಳಿಕ ರಿಷಭ್ ಪಂತ್ ಮೊದಲ ಮಾತು..!

ಏಕದಿನದಲ್ಲಿ ದ್ವಿಶತಕ ಸಿಡಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೈಯುಕ್ತಿಕ ಗರಿಷ್ಠ ರನ್ ಸಿಡಿಸಿದ 9ನೇ ಕ್ರಿಕೆಟಿಗ ಅನ್ನೋ ಹಿರಿಮೆಗೂ ಗಿಲ್ ಪಾತ್ರರಾಗಿದ್ದರೆ. ಏಕದಿನದಲ್ಲಿ ವೈಯುಕ್ತಿಕ ಗರಿಷ್ಠ ರನ್ ಸ್ಕೋರ್ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ ಶರ್ಮಾ 2014ರಲ್ಲಿ ಶ್ರೀಲಂಕಾ ವಿರುದ್ಧ 265 ರನ್ ಸಿಡಿಸಿದ್ದರು. 

ವಿಶೇಷ ಅಂದರೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಶುಭಮನ್ ಗಿಲ್,  ದ್ವಿಶತಕ ಸಿಡಿಸುವ ಮೂಲಕ ಶುಭಮನ್ ಗಿಲ್ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಶುಭಮನ್ ಗಿಲ್ ಹೋರಾಟದಿಂದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತು. ಈ ಮೂಲಕ 
 

Follow Us:
Download App:
  • android
  • ios