Ind Vs Nz  

(Search results - 101)
 • Jasprit Bumrah

  World Cup13, Jul 2019, 2:03 PM IST

  ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ ಈ ಬ್ಯಾಟ್ಸ್‌ಮನ್..!

  ‘ನಾನು ಬೆಳಗ್ಗಿನ ಜಾವ 3ಕ್ಕೇ ಎದ್ದು ಕೂತಿದ್ದೆ. ಕ್ರೀಸ್‌ಗೆ ತೆರಳಿ ಹೇಗೆ ಬ್ಯಾಟ್‌ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಎದುರಾಳಿ ತಂಡದಲ್ಲಿ ಬುಮ್ರಾ ಇದ್ದಾರೆ. ವಿಶ್ವದ ಶ್ರೇಷ್ಠ ಬೌಲರ್‌ ಆತ. ಭುವನೇಶ್ವರ್‌ ಕುಮಾರ್‌ ಸಹ ಅತ್ಯುತ್ತಮ ಆಟಗಾರ. ಏನು ಮಾಡುವುದು ಎನ್ನುವ ಗೊಂದಲದಲ್ಲಿ ನಿದ್ದೆಯೇ ಬರಲಿಲ್ಲ’ ಎಂದು ಟೇಲರ್‌ ಹೇಳಿಕೊಂಡಿದ್ದಾರೆ. 

 • Sanjay Bangar

  World Cup12, Jul 2019, 8:28 PM IST

  ಸಿಗದ ಸಂ‘ಜಯ’: ‘ಬಂಗಾರ’ದ ಹೆಗಲಿಗೆ ಅಪಜಯ?

  ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಸೋಲಿಗೆ ಬ್ಯಾಟ್ಸಮನ್’ಗಳ ವೈಫಲ್ಯ ಕಾರಣವಾಗಿದ್ದು, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್’ಗೆ ಸಂಕಷ್ಟ ಎದುರಾಗಿದೆ.  ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್‌ಗೆ ಕೊಕ್ ನೀಡುವ ಸಾಧ್ಯತೆಗಳಿದ್ದು, ಬಂಗಾರ್ ತಮ್ಮ ಕರ್ತವ್ಯವನ್ನು ಮತ್ತಷ್ಟು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
   

 • team india discuss

  World Cup11, Jul 2019, 6:53 PM IST

  ಟೀಂ ಇಂಡಿಯಾ ಸೋತಿದ್ದೆಲ್ಲಿ..? ಇಲ್ಲಿವೆ ನೋಡಿ 5 ಕಾರಣಗಳು

  ಲೀಗ್ ಹಂತದಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಆಡಿದ ಉಳಿದೆಲ್ಲಾ ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಭಾರತ ಸೆಮಿಫೈನಲ್ ನಲ್ಲಿ ಆಘಾತಕಾರಿ ಸೋಲು ಕಂಡು ವಿಶ್ವಕಪ್ ಮಹಾಸಂಗ್ರಾಮದಿಂದ ಹೊರಬಿದ್ದಿದೆ. 

 • asif ghafoor india

  World Cup11, Jul 2019, 6:27 PM IST

  ಟೀಂ ಇಂಡಿಯಾ ಸೋಲನ್ನು ಸಂಭ್ರಮಿಸಿದ ಪಾಕ್..!

  ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ 11 ಅಂಕ ಗಳಿಸಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಭಾರತ ತಂಡವು ಲೀಗ್ ಹಂತದಲ್ಲಿ ಬೇಕಂದೇ ಸೋಲು ಕಂಡಿತ್ತು ಎಂದು ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ವೇಳೆ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದಿದ್ದರೆ, ಪಾಕಿಸ್ತಾನ ತಂಡವು ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುತ್ತಿತ್ತು. 

 • Video Icon

  World Cup11, Jul 2019, 5:04 PM IST

  ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ ಆ 45 ನಿಮಿಷ..?

  ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲೇ ಟೀಂ ಇಂಡಿಯಾ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸುವುದರೊಂದಿಗೆ ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ನುಚ್ಚುನೂರಾಯಿತು. ಕೊಹ್ಲಿ ಹೇಳಿದಂತೆಯೇ ಆ 45 ನಿಮಿಷ ಸರಿಯಾಗಿ ಆಡಿದ್ದರೆ ಭಾರತ ಫೈನಲ್ ಪ್ರವೇಶಿಸುತ್ತಿತ್ತು. ಅಷ್ಟಕ್ಕೂ ಏನಿದು ಸ್ಟೋರಿ, ನೀವೇ ನೋಡಿ

 • dhoni out

  World Cup11, Jul 2019, 12:02 PM IST

  ಧೋನಿ ಟೀಕಿಸುವ ಮುನ್ನ ಕೇನ್ ವಿಲಿಯಮ್ಸನ್ ಮಾತನ್ನೊಮ್ಮೆ ಕೇಳಿ...

  ಒಂದು ಹಂತದಲ್ಲಿ 92 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರವೀಂದ್ರ ಜಡೇಜಾ-ಮಹೇಂದ್ರ ಸಿಂಗ್ ಧೋನಿ 7ನೇ ವಿಕೆಟ್’ಗೆ 106 ರನ್ ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 208ಕ್ಕೆ ಕೊಂಡ್ಯೊಯ್ದರು. ಜಡೇಜಾ 59 ಎಸೆತಗಳಲ್ಲಿ 77 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಧೋನಿ 72 ಎಸೆತಗಳಲ್ಲಿ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

 • DHONI

  World Cup10, Jul 2019, 5:44 PM IST

  ICC ವಿಶ್ವಕಪ್: ಭಾರತ Vs ನ್ಯೂಜಿಲೆಂಡ್, ಮಳೆ Vs DRS

  ಸೆಮಿಫೈನಲ್ ಮೊದಲ ದಿನದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಮೀಸಲು ದಿನವಾದ ಇಂದು ಪಂದ್ಯ ನಡೆಯುತ್ತಿದ್ದು, ಭಾರತಕ್ಕೆ ಗೆಲ್ಲಲು 240 ರನ್ ಗಳ ಗುರಿ ನೀಡಿದೆ.  ಅಲ್ಪ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಕಿವೀಸ್ ವೇಗಿಗಳು ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

 • rohit kohli out

  World Cup10, Jul 2019, 4:40 PM IST

  ಆ ಕರಾಳ ದಿನ ನೆನಪಿಸಿದ ಟೀಂ ಇಂಡಿಯಾದ ಈ ಪ್ರದರ್ಶನ

  ನ್ಯೂಜಿಲೆಂಡ್ ನೀಡಿದ್ದ 240 ರನ್ ಗಳ ಗುರಿ ಬೆನ್ನತ್ತಿರುವ ಭಾರತಕ್ಕೆ ಕಿವೀಸ್ ವೇಗಿಗಳಾದ ಮ್ಯಾಟ್ ಹೆನ್ರಿ ಹಾಗೂ ಟ್ರೆಂಟ್ ಬೌಲ್ಟ್ ಆಘಾತ ನೀಡಿದ್ದಾರೆ. ಆರಂಭಿಕರಿಬ್ಬರು ತಲಾ ಒಂದು ರನ್ ಬಾರಿಸಿ ಮ್ಯಾಟ್ ಹೆನ್ರಿ ಬೌಲಿಂಗ್’ನಲ್ಲಿ ವಿಕೆಟ್ ಕೀಪರ್ ಟಾಪ್ ಲಾಥಮ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರೆ, ನಾಯಕ ವಿರಾಟ್ ಕೊಹ್ಲಿ ಕೂಡಾ ಒಂದು ರನ್ ಬಾರಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್’ನಲ್ಲಿ ಎಲ್ ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದಾರೆ. 

 • Rain

  World Cup10, Jul 2019, 12:17 PM IST

  ಮೀಸಲು ದಿನಕ್ಕೆ ಪಂದ್ಯ: ಭಾರತಕ್ಕೇನು ಲಾಭ..?

  ಇದೀಗ ಪಂದ ಮೀಸಲು ದಿನಕ್ಕೆ ಮುಂದೂಲ್ಪಟ್ಟಿರುವುದರಿಂದ ಭಾರತಕ್ಕೆ ಲಾಭವೇನು ಎನ್ನುವ ಕುತೂಹಲ ಜೋರಾಗಿದೆ. ಇದಕ್ಕೆ ಉತ್ತರವನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • Rain

  World Cup9, Jul 2019, 10:56 PM IST

  ಇಂಡೋ-ಕಿವೀಸ್ ಸೆಮಿಫೈನಲ್; ಮಳೆಯಿಂದ ಪಂದ್ಯ ಜು.10ಕ್ಕೆ ಮುಂದೂಡಿಕೆ!

  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದಾಗಿ ನಾಳೆಗೆ(ಜು.10) ಮುಂದೂಡಲಾಗಿದೆ. ರಿಸರ್ವ್ ಡೇನಲ್ಲಿ ಪಂದ್ಯ ನಡೆಯಲು ರೆಫ್ರಿ ನಿರ್ಧರಿಸಿದ್ದಾರೆ. ಜುಲೈ 10 ರಂದು ನಡೆಯಲಿರುವ ಇಂಡೋ-ಕಿವೀಸ್ ಪಂದ್ಯದ ಕುರಿತ ವಿವರ ಇಲ್ಲಿದೆ.

 • Kane Williamson

  World Cup9, Jul 2019, 7:10 PM IST

  ಕಿವೀಸ್ ಪರ ದಾಖಲೆ ಬರೆದು ವಿಕೆಟ್ ಒಪ್ಪಿಸಿದ ವಿಲಿಯಮ್ಸನ್

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭದಲ್ಲೇ ಮಾರ್ಟಿಗ್ ಗಪ್ಟಿಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆ ಬಳಿಕ ಎಚ್ಚರಿಕೆ ಆಟಕ್ಕೆ ನಾಯಕ ವಿಲಿಯಮ್ಸನ್ ಮುಂದಾದರು. ವೃತ್ತಿಜೀವನದ 39ನೇ ಅರ್ಧಶತಕ ಸಿಡಿಸಿದರು. 

 • বিশ্বকাপে রোহিত
  Video Icon

  World Cup9, Jul 2019, 5:58 PM IST

  ಕಿವೀಸ್ ಎದುರು ಬ್ರೇಕ್ ಆಗುತ್ತಾ ಮತ್ತಷ್ಟು ರೆಕಾರ್ಡ್ಸ್..?

  ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲಿಂದು ಭಾರತ-ನ್ಯೂಜಿಲೆಂಡ್ ತಂಡಗಳು ಕಾದಾಡುತ್ತಿದ್ದು, ಟೀಂ ಇಂಡಿಯಾ ಫೈನಲ್ ಪ್ರವೇಶಿಸಬೇಕಿದ್ದರೆ ರೋಹಿತ್ ಶರ್ಮಾ ಅಬ್ಬರಿಸಲೇಬೇಕಿದೆ. ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲಿ 5 ಶತಕ ಸಿಡಿಸಿ ವಿಶ್ವದಾಖಲೆ ಬರೆದಿರುವ ರೋಹಿತ್ ಈ ಪಂದ್ಯದಲ್ಲಿ ಅಬ್ಬರಿಸಿದರೆ ಮತ್ತಷ್ಟು ದಾಖಲೆಗಳು ಬ್ರೇಕ್ ಆಗಲಿವೆ. ಈ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ...
   

 • World Cup9, Jul 2019, 5:18 PM IST

  ’ಭಾರತ ಈಗಾಗಲೇ ವಿಶ್ವಕಪ್ ಫೈನಲ್ ಗೆ ಒಂದು ಹೆಜ್ಜೆ ಇಟ್ಟಾಗಿದೆ‘

  ಭಾರತ ತವರಿನಾಚೆಗೂ ಅದ್ಭುತ ಪ್ರದರ್ಶನ ತೋರುತ್ತಾ ಬಂದಿದೆ. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಕೂಡಾ ಟೀಂ ಇಂಡಿಯಾ ಅಮೋಘ ಪ್ರದರ್ಶನ ಮುಂದುವರೆಸಿದೆ. ನನ್ನ ಪ್ರಕಾರ ಈಗಾಗಲೇ ವಿಶ್ವಕಪ್ ಫೈನಲ್’ಗೆ ಭಾರತ ಒಂದು ಹೆಜ್ಜೆ ಇಟ್ಟಾಗಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.

 • 1st Semi Final

  World Cup9, Jul 2019, 2:41 PM IST

  ವಿಶ್ವಕಪ್ 2019 ಮೊದಲ ಸೆಮಿಫೈನಲ್: ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ

  ಉಭಯ ತಂಡಗಳ ಸೆಮೀಸ್ ಇತಿಹಾಸ ಗಮನಿಸುವುದಾದರೆ, ಈ ವಿಶ್ವಕಪ್ ಸೇರಿದಂತೆ ನ್ಯೂಜಿಲೆಂಡ್ 8 ಬಾರಿ ಸೆಮೀಸ್ ಪ್ರವೇಶಿಸಿದ್ದು, ಕೇವಲ ಒಮ್ಮೆ ಮಾತ್ರ ಫೈನಲ್’ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಇನ್ನು ಭಾರತ 6 ಬಾರಿ ಸೆಮೀಸ್ ಪ್ರವೇಶಿಸಿದ್ದು, ಅದರಲ್ಲಿ ಮೂರು ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. 
   

 • MS Dhoni, Virat Kohli

  World Cup9, Jul 2019, 11:57 AM IST

  ವಿಶ್ವಕಪ್ ಮೊದಲ ಸೆಮಿಫೈನಲ್: ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

  ಈಗಾಗಲೇ ಇಂಗ್ಲೆಂಡ್ ವಿರುದ್ಧ ಹೊರತು ಪಡಿಸಿ ಲೀಗ್ ಹಂತದಲ್ಲಿ ಉಳಿದೆಲ್ಲಾ ಪಂದ್ಯಗಳನ್ನು ಜಯಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದ ಟೀಂ ಇಂಡಿಯಾ, ಇದೀಗ ಕಿವೀಸ್ ವಿರುದ್ಧ ಗೆದ್ದು, ಫೈನಲ್ ಪಂದ್ಯಕ್ಕೆ ಟಿಕೆಟ್ ಗಿಟ್ಟಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.