ಗೂಂಡಾಗಿರಿ ಸಂಸ್ಕೃತಿಯ ಕಾಂಗ್ರೆಸ್‌ಗೆ ಮತ ನೀಡಬೇಡಿ: ಮಾಜಿ ಸಚಿವ ಎಸ್‌ಕೆ ಬೆಳ್ಳುಬ್ಬಿ ಮನವಿ
ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ, ಗೂಂಡಾಗಿರಿ ಮಾಡುವಂತಹ ಸಚಿವ ಶಿವಾನಂದ ಕುಟುಂಬಸ್ಥರಿಗೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಬೇಡಿ ಬದಲಾಗಿ ಸೌಮ್ಯ ಸ್ವಭಾವದ ಬಿಜೆಪಿಯ ಗದ್ದಿಗೌಡರಿಗೆ ಮತ ನೀಡಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮನವಿ ಮಾಡಿದರು.
ಬಾಗಲಕೋಟೆ (ಮೇ.5): ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ, ಗೂಂಡಾಗಿರಿ ಮಾಡುವಂತಹ ಸಚಿವ ಶಿವಾನಂದ ಕುಟುಂಬಸ್ಥರಿಗೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಬೇಡಿ ಬದಲಾಗಿ ಸೌಮ್ಯ ಸ್ವಭಾವದ ಬಿಜೆಪಿಯ ಗದ್ದಿಗೌಡರಿಗೆ ಮತ ನೀಡಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮನವಿ ಮಾಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಬಾಗಲಕೋಟೆಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ, ಪರಿಹಾರ ವಿಚಾರವಾಗಿ ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಶಿವಾನಂದ ಪಾಟೀಲ್(Shivananda patil) ರಿಗೆ ಈಗ ರೈತರ ಮತ ಕೇಳುವ ಹಕ್ಕಿಲ್ಲ. ಸದ್ಯ ಶಿವಾನಂದ ಪಾಟೀಲ್ ಅವರ ಪುತ್ರಿ ಬಾಗಲಕೋಟೆ ಲೋಕಸಭೆ(Bagalkote Lok sabha constituency) ಗೆ ಸ್ಫರ್ಧೆ ಮಾಡಿದ್ದು, ಅಪ್ಪ ಮಗಳು ಒಂದೇ ಆಗಿದ್ದಾರೆ ಇವರಿಂದ ಕ್ಷೇತ್ರದ ಅಭಿವೃದ್ಧಿ, ರೈತರ ಹಿತರಕ್ಷಣೆ ನಿರೀಕ್ಷಿಸಬಾರದು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ರಾಯಚೂರಲ್ಲಿ ಬಿಜೆಪಿ ವಿರುದ್ಧ ಬಿವಿ ಶ್ರೀನಿವಾಸ ವಾಗ್ದಾಳಿ
ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡೋದ್ರಿಂದ ಅವ್ಯವ್ಯಹಾರ, ಭ್ರಷ್ಟಾಚಾರ, ಗೂಂಡಾಗಿರಿ ಪ್ರೋತ್ಸಾಹ ನೀಡಿದಂತೆ ಆಗುತ್ತೆ. ರೈತರಿಗೆ, ಕ್ಷೇತ್ರದ ಅಭಿವೃದ್ಧಿಗೆ ಇವರಿಂದು ಕೊಡುಗೆ ಶೂನ್ಯ. ಯಾರೂ ಸಹ ಕಾಂಗ್ರೆಸ್ ಗೆ ಮತ ನೀಡದೇ ಕಳೆದ 4 ಬಾರಿ ಗೆಲುವು ಸಾಧಿಸಿರೋ ಬಿಜೆಪಿಯ ಪಿಸಿ ಗದ್ದಿಗೌಡರು(Bagalkote bjp candidate PC Gaddigowdar)ರಗೆ ಮತ ನೀಡಿ ಗೆಲ್ಲಿಸಿ, ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.