ಸಂಸದೆಗೆ ಡ್ರಗ್ಸ್ ನೀಡಿ ರಾತ್ರಿಯಿಡಿ ಲೈಂಗಿಕ ದೌರ್ಜನ್ಯ, ಯೆಪ್ಪೂನ್ ಠಾಣೆಯಲ್ಲಿ ಪ್ರಕರಣ ದಾಖಲು!
ಪ್ರತಿ ದಿನ ಒಂದಲ್ಲಾ ಒಂದು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಘಟನೆಗಳು ವರದಿಯಾಗುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಸಂಸದೆ ಮೇಲೆ ಲೈಂಗಿಕ ದೌರ್ಜನ್ಯ ವಿಡಿಯೋ ಬಿರುಗಾಳಿ ಎಬ್ಬಿಸಿದೆ.
ಕ್ವೀನ್ಸ್‌ಲ್ಯಾಂಡ್(ಮೇ.05) ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಕುಣಿಕೆ ತೀವ್ರಗೊಳ್ಳುತ್ತಿದೆ. ಈ ಪ್ರಕರಣ ಸಂಬಂಧ ಸಂತ್ರಸ್ತೆ ಕಿಡ್ನಾಪ್ ದೂರಿನಲ್ಲಿ ಶಾಸಕ ಹೆಚ್‌ಡಿ ರೇವಣ್ಣ ಬಂಧನವಾಗಿದೆ. ಕರ್ನಾಟಕ ಹಾಗೂ ದೇಶಾದ್ಯಂತ ರೇವಣ್ಣ ವಿಡಿಯೋ ಪ್ರಕರಣ ಕೋಲಾಹಲ ಸೃಷ್ಟಿಸಿದೆ. ಇದೀಗ ಆಸ್ಟ್ರೇಲಿಯಾದ ಸಂಸದೆ ಬ್ರಿಟ್ಟಾನಿ ಲೌಗಾ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ವರದಿಯಾಗಿದೆ. ಈ ಕುರಿತ ವಿಡಿಯೋಗಳು ಹರಿದಾಡುತ್ತಿದೆ. ಈ ಕುರಿತು ಸ್ವತಃ ಸಂಸದೆ ಲೌಗಾ ಯೆಪ್ಪೊನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕ್ವೀನ್ಸ್‌ಲ್ಯಾಂಡ್ ನಗರದ ಲೇಬರ್ ಪಾರ್ಟಿ ಸಂಸದೆ ಬ್ರಿಟ್ಟಾನಿ ಲೌಗಾ ಸೇರಿದಂತೆ ಹಲವು ಮಹಿಳೆಯರು ನೌಟ್ ಔಟ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಮಾಧಕ ವಸ್ತುಗಳನ್ನು ಅರಿವಿಲ್ಲದಂತೆ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸಂಸದೆ ಬ್ರಿಟ್ಟಾನಿ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಹರಿದಾಡತೊಡಗಿದೆ. ಇದೇ ವೇಳೆ ಹಲವು ಮಹಿಳೆಯರ ಮೇಲೂ ಇದೇ ರೀತಿ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ವರದಿಯಾಗಿದೆ.
ಹೆಚ್‌ಡಿ ರೇವಣ್ಣಗೆ ಮತ್ತೊಂದು ಶಾಕ್, ಹೆಚ್ಚಿನ ವಿಚಾರಣೆಗೆ 4 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ!
ತಕ್ಷಣವೇ ಸಂಸದೆ ಬ್ರಿಟ್ಟಾನಿ ಯೆಪ್ಪೊನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ದೇಹದಲ್ಲಿ ಡಗ್ರ್ಸ್ ಪತ್ತೆಯಾಗಿದೆ. ತಾನು ಡ್ರಗ್ಸ್ ತೆಗೆದುಕೊಂಡಿಲ್ಲದಿದ್ದರೂ ತನ್ನ ದೇಹದಲ್ಲಿ ಸೇರಿಕೊಂಡಿದ್ದು ಹೇಗೆ? ನೈಟ್ ಔಟ್‌ನಲ್ಲಿ ಮಹಿಳೆಯರಿಗೆ ಅರಿವಿಲ್ಲದಂತೆ ಡ್ರಗ್ಸ್ ನೀಡಿ ಬಳಸಿಕೊಳ್ಳಲಾಗಿದೆ ಅನ್ನೋ ಆರೋಪವನ್ನು ಸಂಸದೆ ಮಾಡಿದ್ದಾರೆ. ಇದೇ ವೇಳೆ ನೈಟ್ ಪಾರ್ಟಿಯಲ್ಲಿ ಪಾಲ್ಗೊಂಡ ಹಲವು ಮಹಿಳೆಯರು ಇದೇ ಆರೋಪ ಮಾಡಿದ್ದಾರೆ. ಹೀಗಾಗಿ ಯೆಪ್ಪೊನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ ಕ್ವೀನ್ಸ್‌ಲ್ಯಾಂಡ್ ಪಟ್ಟಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಹಲವರು ಸಂಸದೆಗೆ ಬೆಂಬಲ ಸೂಚಿಸಿದ್ದಾರೆ. ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ. ನೌಟ್ ಔಟ್, ಪಾರ್ಟಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಈ ರೀತಿ ಮಹಿಳೆಯರಿಗೆ ಅರಿವಿಲ್ಲದಂತ ಡ್ರಗ್ಸ್ ನೀಡಿ ಬಳಸಿಕೊಳ್ಲಾಗುತ್ತಿದೆಯಾ ಅನ್ನೋ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹಲವು ನಾಯಕರು, ಸಂಸದರು ಬ್ರಿಟ್ಟಾನಿಗೆ ಬೆಂಬಲ ಸೂಚಿಸಿದ್ದಾರೆ. ಘಟನೆ ಕುರಿತು ವಿಸ್ತೃತ ತನಿಖೆ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಆಸ್ಟ್ರೇಲಿಯಾದಲ್ಲಿ ಡ್ರಗ್ಸ್ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿದೆ.
ರಾಜಕೀಯ ಷಡ್ಯಂತ್ರ ಮಾಡಿ ಕಿಡ್ನಾಪ್ ಕೇಸ್ ಹಾಕಿಸಿ ಅರೆಸ್ಟ್ ಮಾಡಿದ್ದಾರೆ; ಮಾಜಿ ಸಚಿವ ಹೆಚ್.ಡಿ. ರೇವಣ್ಣ