Asianet Suvarna News Asianet Suvarna News

ಅವಧಿ ಮೀರಿದ ಐಸ್‌ಕ್ರೀಂ ತಿಂದು 40ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು!

ಅವಧಿ ಮೀರಿದ ಐಸ್‌ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ತೀವ್ರ ಆಸ್ವಸ್ಥರಾದ ಘಟನೆ ಚನ್ನಪಟ್ಟಣದ ಟಿಪ್ಪುನಗರ ಮಿಲನ್ ಶಾದಿ ಮಹಲ್‌ನಲ್ಲಿ ನಡೆದಿದೆ. ಚನ್ನಪಟ್ಟಣದ ಮಿಲನ್ ಶಾದಿ ಮಹಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭ ಭಾಗಿಯಾಗಿದ್ದ 80ಕ್ಕೂ ಅಧಿಕ ಜನರು ಐಸ್‌ಕ್ರೀಂ ಸೇವನೆ ಮಾಡಿದ್ದರು.

More than 40 people admitted hospital after consuming expired ice cream in channapattan at ramanagar rav
Author
First Published May 5, 2024, 11:39 PM IST

ಚನ್ನಪಟ್ಟಣ (ಮೇ.5): ಅವಧಿ ಮೀರಿದ ಐಸ್‌ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ತೀವ್ರ ಆಸ್ವಸ್ಥರಾದ ಘಟನೆ ಚನ್ನಪಟ್ಟಣದ ಟಿಪ್ಪುನಗರ ಮಿಲನ್ ಶಾದಿ ಮಹಲ್‌ನಲ್ಲಿ ನಡೆದಿದೆ.

ಚನ್ನಪಟ್ಟಣದ ಮಿಲನ್ ಶಾದಿ ಮಹಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭ. ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸುಮಾರು 80ಕ್ಕೂ ಹೆಚ್ಚು ಮಂದಿ ಐಸ್‌ಕ್ರೀಂ ಸೇವಿಸಿದ್ದರು. ಅವರ ಪೈಕಿ ಸುಮಾರು 40 ಜನರಿಗೆ ಐಸ್‌ಕ್ರೀಂ ತಿಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ತೀವ್ರ ಅಸ್ವಸ್ಥರಾಗಿದ್ದಾರೆ. ಬಳಿಕ ಅಸ್ವಸ್ಥರನ್ನು ಕೂಡಲೇ ಚನ್ನಪಟ್ಟಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚನ್ನಪಟ್ಟಣ ಟೌನ್ ಪೊಲೀಸರು. ಘಟನೆ ನಡೆದ ಸ್ಥಳ, ಐಸ್‌ಕ್ರೀಂ ಪರಿಶೀಲನೆ ನಡೆಸಿದ್ದಾರೆ.

ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರ ದುರಂತ ಸಾವು

Latest Videos
Follow Us:
Download App:
  • android
  • ios