Asianet Suvarna News Asianet Suvarna News

IPL 2024 ಸುನಿಲ ತಂರಂಗಕ್ಕೆ ತಲ್ಲಣಿಸಿದ ಲಖನೌ, 236 ರನ್ ಟಾರ್ಗೆಟ್

ಸುನಿಲ್ ನರೈನ್ ಸ್ಫೋಟಕ ಬ್ಯಾಟಿಂಗ್ ಲಖನೌ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಅಬ್ಬರದ ಬ್ಯಾಟಿಂಗ್‌ನಿಂದ ಕೆಕೆಆರ್ 235 ರನ್ ಸಿಡಿಸಿದೆ. 
 

IPL 2024 Sunil narine 81 runs in just 39 helps KKR to set 236 run target to LSG ckm
Author
First Published May 5, 2024, 9:29 PM IST

ಲಖನೌ(ಮೇ.05) ಐಪಿಎಲ್ 2024ರ ಟೂರ್ನಿಯಲ್ಲಿ ಬೌಂಡರಿ ಸಿಕ್ಸರ್ ಅಬ್ಬರ ಹೊಸದೇನಲ್ಲ. ಆದರೆ ಕೆಲ ಪಂದ್ಯದಲ್ಲಿ ಬೌಂಡರಿ ಸಿಕ್ಸರ್‌ಗಳೇ ದಾಖಲೆ ಬರೆಯುತ್ತದೆ. ಇದೀಗ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕೆಕೆಆರ್ ಸ್ಫೋಟಕ ಬ್ಯಾಟಿಂಗ್‌ನಿಂದ ಬೃಹತ್ ಮೊತ್ತ ದಾಖಲಿಸಿದೆ. ಸುನಿಲ್ ನರೈನ್ 81 ರನ್ ,  ರಘುವಂಶಿ ಹಾಗೂ ಪಿಲಿಪ್ ಸಾಲ್ಟ್ ಸಿಡಿಸಿದ 32 ರನ್ ನೆರವಿನಿಂದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿದೆ.

ಮೊದಲು ಬ್ಯಾಟಿಂಗ್ ಇಳಿದ ಕೆಕೆಆರ್ ತಂಡಕ್ಕೆ ಸುನಿಲ್ ನರೈನ್ ಬ್ಯಾಟಿಂಗ್ ಅಬ್ಬರ ನೆರವಾಯಿತು. ಪಿಲಿಪ್ ಸಾಲ್ಟ್ ಹಾಗೂ ಸನಿಲ್ ನರೈನ್ ಸ್ಫೋಟಕ ಬ್ಯಾಟಿಂಗ್‌ನಿಂದ ಮೊದಲ ವಿಕೆಟ್‌ಗೆ ಈ ಜೋಡಿ 61 ರನ್ ಜೊತೆಯಾಟ ನೀಡಿತು. ಸಾಲ್ಟ್ 32 ರನ್ ಸಿಡಿಸಿ ಔಟಾದರು. ಆದರೆ ನರೈನ್ ಅಬ್ಬರ ಮುಂದುವರಿಯಿತು. ನರೈನ್ ಹಾಗೂ ಅಂಗ್ಕ್ರಿಶ್ ರಘುವಂಶಿ ಸ್ಫೋಟಕ ಬ್ಯಾಟಿಂಗ್‌ನಿಂದ ಕೆಕೆಆರ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.

ಸುನಿಲ್ ನರೈನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅಬ್ಬರಿಸಿದ ನರೈನ್ 39 ಎಸೆತದಲ್ಲಿ 81 ರನ್ ಸಿಡಿಸಿದರು. 6 ಬೌಂಡರಿ, 7 ಸಿಕ್ಸರ್ ಮೂಲಕ ಅಬ್ಬರಿಸಿದರು. ಇತ್ತ ರಘುವಂಶಿ 32 ರನ್ ಕಾಣಿಕೆ ನೀಡಿದರು. ಆ್ಯಂಡ್ರೆ ರಸೆಲ್ 12 ರನ್ ಸಿಡಿಸಿ ಔಟಾದರು.  ರಿಂಕು ಸಿಂಗ್ 16 ರನ್ ಸಿಡಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 23 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ರಮನದೀಪ್ ಕೇವಲ 6 ಎಸೆತದಲ್ಲಿ 25 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿತು. 

236 ರನ್ ಟಾರ್ಗೆಟ್ ಲಖನೌ ಸೂಪರ್ ಜೈಂಟ್ಸ್ ಚೇಸ್ ಮಾಡುತ್ತಾ? ಲಖನೌ ತಂಡದಲ್ಲಿ ಚೇಸ್ ಮಾಡಬಲ್ಲ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ಒತ್ತಡ ಪರಿಸ್ಥಿತಿ ನಿಭಾಯಿಸಿ ಬೃಹತ್ ಟಾರ್ಗೆಟ್ ಚೇಸ್ ಮಾಡುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.

ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ), ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡ, ನಿಕೋಲಸ್ ಪೂರನ್, ಆಶ್ಟನ್ ಟರ್ನರ್, ಆಯುಷ್ ಬದೋನಿ, ಕ್ರುನಾಲ್ ಪಾಂಡ್ಯ, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಮೊಹ್ಸಿನ್ ಖಾನ್, ಯಶ್ ಠಾಕೂರ್
 

Latest Videos
Follow Us:
Download App:
  • android
  • ios