ಆಟದಲ್ಲಿ ಸೆಹ್ವಾಗ್, ನೋಟದಲ್ಲಿ ತೆಂಡುಲ್ಕರ್; ಶಫಾಲಿ ಆಟಕ್ಕೆ ಎದುರಾಳಿ ಪಂಚರ್!
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಫೈನಲ್ ಪ್ರವೇಶಿಸಿ ಇತಿಹಾಸ ರಚಿಸಿದ್ದಾರೆ. ಇದೀಗ ಚಾಂಪಿಯನ್ ಪಟ್ಟ ಅಲಂಕರಿಸಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಭಾರತ ಸಲೀಸಾಗಿ ಫೈನಲ್ ಎಂಟ್ರಿ ಹಿಂದೆ ಶಫಾಲಿ ವರ್ಮಾ ಪರಿಶ್ರಮವಿದೆ. ಬೀದಿ ಬೀದಿ, ಗಲ್ಲಿಯಲ್ಲಿ, ಹುಡುಗರ ತಂಡದಲ್ಲಿ ಆಡಿದ 16ರ ಹುಡುಗಿ ಶಫಾಲಿ ಕ್ರಿಕೆಟ್ ಬದುಕಿನ ಪಯಣದ ಚಿತ್ರಣ ಇಲ್ಲಿದೆ.
ರಮಾಕಾಂತ್ ಆರ್ಯನ್, ಸುವರ್ಣನ್ಯೂಸ್
ಶಫಾಲಿ....
ಇವಳ ಹೆಸರಿಗೆ ಬರುತ್ತೆ world cup
ನೋಡೋಕೆ ಸಚಿನ್ ತೆಂಡುಲ್ಕರ್ ಥರಾನೇ ಕಾಣಿಸುವ ಹುಡುಗಿ ಇವಳು. ಮೊನ್ನೆ ಮೊನ್ನೆ ಹದಿನಾರು ತುಂಬಿದೆ. ಆಡೋಕೆ ನಿಂತ್ರೆ ಅಪ್ಪಟ ಸೆಹ್ವಾಗ್ ಆಟ. ಇವಳಿಗೆ ನರ್ವಸ್ 90, ನರ್ವಸ್ 45 ನಂತಹ ಸಮಸ್ಯೆಗಳಿಲ್ಲ. ಒಮ್ಮೆ ಸಿಡಿಯೋಕೆ ನಿಂತ್ರೆ ಸರಣಿ ಸ್ಫೋಟ. world cup t20 ಯಲ್ಲಿ ಎಲ್ಲರನ್ನೂ ಚಚ್ಚಿ ಬಿಸಾಡುತ್ತಿದ್ದಾಳೆ.
ಸದ್ಯ ಶಫಾಲಿ ವರ್ಮ ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಟರ್. ನಂಬರ್ ಒನ್ ಆಗಿದ್ದು ಹೇಗೆ ಗೊತ್ತಾ? ಅಪ್ಪ ಮತ್ತು ಮಗಳ ಅನುಪಮ ಬಾಂಧವ್ಯದ, ಅಪ್ಪಟ ಕ್ರಿಕೆಟ್ ಹಸಿವಿನ ಕಥೆ ಇದು..
ಇದನ್ನೂ ಓದಿ: ಅಪ್ಪ ತರಕಾರಿ ವ್ಯಾಪಾರಿ, ಮಗಳು ಭಾರತ ಕ್ರಿಕೆಟ್ ತಂಡದ ವೀರ ನಾರಿ!
ಶಫಾಲಿ ಅಪ್ಪ ಸಂಜೀವ್ ವರ್ಮ. ಅಕ್ಕಸಾಲಿಗ ವೃತ್ತಿ. ಎರಡು ಹೆಣ್ಣು ಮತ್ತು ಒಂದು ಗಂಡು ಮಗ ಇವರಿಗೆ. ಕ್ಲಬ್ ಕ್ರಿಕೆಟ್ ನಲ್ಲಿ ಆಡಿದ ಅನುಭವ ಸಂಜೀವ್ಗಿತ್ತು. ಮಕ್ಕಳನ್ನ ಭಾರತ ತಂಡಕ್ಕೆ ಆಡುವಂತೆ ಮಾಡಬೇಕು ಅಂತ ಒಂದೊಂದು ಪೈಸೆ ಕೂಡಿ ಹಾಕಿ ಏಳೂವರೆ ಲಕ್ಷ ಎತ್ತಿಟ್ಟಿರುತ್ತಾರೆ. ಅದೆಲ್ಲಿದ್ದನೋ ಅವನು ಹಣ ಪಿಶಾಚಿ, ವಕ್ಕರಿಸಿಕೊಳ್ಳುತ್ತಾನೆ. ನನಗೆ ಪ್ರಧಾನಿನೇ ಕ್ಲೋಸ್, RAW ನಲ್ಲಿ ಕೆಲಸ ಮಾಡ್ತೀನಿ, ನಿಮಗೆ ಏರ್ಪೋರ್ಟ್ನಲ್ಲಿ ಖಾಯಂ ಕೆಲಸ ಕೊಡಿಸ್ತೀನಿ ಅಂತ ಹೇಳಿ, ಪೋಟೋಶಾಪ್ ಮಾಡಿದ್ದ ಫೋಟೋನು ತೋರಿಸಿಬಿಡ್ತಾನೆ. ನಂಬಿದ ಸಂಜೀವ್ ವರ್ಮ ಅಷ್ಟೂ ಹಣವನ್ನ ಅನಾಮತ್ತಾಗಿ ಎತ್ತಿಕೊಟ್ಟುಬಿಡುತ್ತಾರೆ. ಅಷ್ಟೇ ಆಸಾಮಿ ಮಾಯ...ಜೀವಮಾನದಲ್ಲೇ ಅವನು ಸಿಗಲಿಲ್ಲ.
ಇದನ್ನೂ ಓದಿ: ಟೆನಿಸ್ ಲೋಕದ ಸುಂದರಿ ಶರಪೋವಾ; ದಿಢೀರ್ ನಿವೃತ್ತಿ ಹಿಂದಿದೆ ಕಹಿ ಅಧ್ಯಾಯ!
ಆಗ ವರ್ಮ ಜೇಬಲ್ಲಿ ಉಳಿದಿದ್ದು 280 ರುಪಾಯಿಗಳು ಮತ್ತು ಒಂದು ಬೆಲೆಬಾಳುವ ಅಮೂಲ್ಯ ವಜ್ರ...ಆ ವಜ್ರದ ಹೆಸರು ಶಫಾಲಿ ವರ್ಮ..ಈಗ ಹೊಳೆಯುತ್ತಿದ್ದಾಳೆ.
ಎಲ್ಲವನ್ನೂ ಕಳೆದುಕೊಂಡರೂ ಏನೂ ಕಳೆದುಕೊಳ್ಳದಂತ ಕೆಚ್ಚು ಸಂಜೀವ್ ವರ್ಮನಿಗೆ. ಹರ್ಯಾಣದ ಮಣ್ಣದು. ಸೂರ್ಯನ ಮೊದಲ ಕಿರಣ ಬೀಳುವುದಕ್ಕೂ ಮುನ್ನವೇ ಶಫಾಲಿ ಮತ್ತು ಮಗ ಸಾಹಿಲ್ನನ್ನ ಕರೆದುಕೊಂಡು ಅಪ್ಪ ಹೋಗುತ್ತಿದ್ದುದ್ದು ಫ್ಲೈ ಓವರ್ ಕೆಳಗೆ.
ಇದನ್ನೂ ಓದಿ: ಸೌಂದರ್ಯದ ಖನಿ ಮಾರ್ಟಿನ್ ಹಿಂಗಿಸ್ ಇನ್ನೊಂದು ಮುಖ
ಅದು ರೋಹ್ಟಕ್. ಅಲ್ಲಿ ಅಂಗಡಿಗಳು ಇನ್ನೂ ತೆರೆದಿರುತ್ತಿರಲಿಲ್ಲ. ಅದಷ್ಟೇ ಜಾಗದಲ್ಲಿ ಬ್ಯಾಟ್ ಬಾಲ್ ಕೊಟ್ಟು ಆಡಿಸುತ್ತಿದ್ದರು. ಅದೊಂತರ ನೇರವಾದ ಜಾಗ. ಆದರೆ ನೆಲ ಸಮತಟ್ಟಿರುತ್ತಿರಲಿಲ್ಲ. ಆ ಜಾಗದಲ್ಲೇ ಪ್ರಾಕ್ಟೀಸ್. ನಂಬಿ ಅಲ್ಲಿ ಶಫಾಲಿ ಪ್ರಾಕ್ಟೀಸ್ ಮಾಡದ ಸ್ಕೂಲ್, ಪಾರ್ಕಿಂಗ್ ಏರಿಯಾ, ಪಾರ್ಕ್ಗಳೇ ಇಲ್ಲ.
ಕಿತ್ತೇ ಹೋದ ಗ್ರೌಂಡ್ಗೂ ಕರೆದುಕೊಂಡು ಹೋಗಿ ಶಫಾಲಿಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದರು. ಎಂಥ ಪಿಚ್ನಲ್ಲಾದರೂ ಚಚ್ಚಬೇಕು ಹುಡುಗಿ. ಆ ರೀತಿಯ ಟ್ರೈನಿಂಗ್ ಶಫಾಲಿಗೆ ಸಿಕ್ಕಿತ್ತು. ಈಗ ಹಾಗೆ ಚಚ್ಚುತ್ತಿದ್ದಾಳೆ.
ಇದನ್ನೂ ಓದಿ: ಲಿಯಾಂಡರ್ ಎನ್ನುವ ವಂಡರ್ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!
ಶಫಾಲಿ ನೇರ ಸಿಕ್ಸರ್ ಹೊಡೆಯೋದು ಜಾಸ್ತಿ. ಯಾಕೆ ಗೊತ್ತಾ? ಅವಳು ಪ್ರಾಕ್ಟೀಸ್ ಮಾಡಬೇಕಾದರೆ ನೇರವಾಗೇ ಹೊಡೆಯಬೇಕಿತ್ತು. ಅಕ್ಕ ಪಕ್ಕ ಹೊಡೆದರೆ ಅಂಗಡಿ, ಮನೆ, ಸ್ಕೂಲ್ ಕಿಟಕಿ ಗಾಜಿಗೆ ಬಾಲ್ ಬೀಳುತ್ತಿತ್ತಲ್ಲ ಅದಕ್ಕೆ. ಆ ತಲೆ ಮಾಸಿದವನು ಮೋಸ ಮಾಡಿ ಹೋಗಿದ್ದನಲ್ಲಾ? ಆ ಮೇಲೆ ಜೀವನ ನಿರ್ವಹಣೆಗೂ ಕಷ್ಟ ಆಗಿ ಬಿಟ್ಟಿತ್ತು. ಬಾಲ್ ಕೊಂಡುಕೊಳ್ಳಲೂ ಅಪ್ಪನ ಬಳಿ ದುಡ್ಡಿರಲಿಲ್ಲ. ಬಾಲ್ಗೆ ಏನು ಮಾಡುತ್ತಿದ್ದರು ಗೊತ್ತಾ?
ಇವರು ವಾಸ ಮಾಡುತ್ತಿದ್ದ ಪ್ರದೇಶದಲ್ಲಿ ಒಂದು ಇಂಗ್ಲಿಷ್ school ಇತ್ತು. ಅಲ್ಲಿ ಅನೇಕ ಮಕ್ಕಳು ಸಂಜೆ ಕ್ರಿಕೆಟ್ ಆಡುತ್ತಿದ್ದರು. ತೀರ ಅಕ್ಕಪಕ್ಕದ ಪೊದೆಗಳಲ್ಲಿ ಚೆಂಡು ಬಿದ್ದರೆ ಎತ್ತಿಕೊಳ್ಳುವ ಗೋಜಿಗೆ ಆ ಮಕ್ಕಳು ಹೋಗುತ್ತಿರಲಿಲ್ಲ. ಈ ಅಪ್ಪ ಮಗಳು ಬೆಳ್ಳಂಬೆಳಗ್ಗೆ ಹೋಗಿ ಆ ಪೊದೆಗಳಲ್ಲಿ ಚೆಂಡು ಹುಡುಕುತ್ತಿದ್ದರು. ಕೆಲವು ದಿನ ಬಾಲ್ ಸಿಗುತ್ತಿದ್ದವು. ಆ ದಿನದ ಫಸಲದು.
ಇದನ್ನೂ ಓದಿ:
ಅಭ್ಯಾಸ ಶುರು.
ಶಫಾಲಿಗೆ ಆಗಷ್ಟೇ 10 ವರ್ಷ. ಅವಳ ಸಹೋದರ ಶಾಲಾ ಕ್ರಿಕೆಟ್ ಟೀಂನಲ್ಲಿರುತ್ತಾನೆ. ಅವನು ಹುಷಾರು ತಪ್ಪಿರುತ್ತಾನೆ. ಶಫಾಲಿ, ನಾನಾಡ್ಲಾ ಅಂತ ಕೇಳ್ತಾಳೆ ಅಪ್ಪನ ಹತ್ತಿರ. ಆಡು ಅಂತಾರೆ. ಥೇಟು ಹುಡುಗನಂತೆ ಹೇರ್ ಕಟ್ ಮಾಡಿಸಿಕೊಂಡ ಶಫಾಲಿ ಯಾರಿಗೂ ಅನುಮಾನ ಬರದಂತೆ ಹುಡುಗರ ಟೀಂಗೆ ಆಡುತ್ತಾಳೆ. ಶಾಲಾ ಟೂರ್ನಿಯಲ್ಲಿ ಅವಳು ಮ್ಯಾನ್ ಆಫ್ ದ ಟೂರ್ನಿಮೆಂಟ್...ಅಂತ ದಿಟ್ಟೆ..
ಇದನ್ನೂ ಓದಿ:ದುಬಾರಿ ಕಾರಿಲ್ಲ, ಫೋನಿಲ್ಲ; ಕೋಟಿ ಆದಾಯದ ಮಾನೆ ಹೃದಯ ಶ್ರೀಮಂತಿಕೆಗೆ ಸರಿಸಾಟಿ ಯಾರೂ ಇಲ್ಲ!
ಅದು 2013. ಸಚಿನ್ ತೆಂಡುಲ್ಕರ್ ಕಟ್ಟಕಡೆಯ Domestic match. ಹರ್ಯಾಣದ ಲಾಹ್ಲಿ ಗ್ರೌಂಡ್. ಬಹುಶಃ ಭಾರತದಲ್ಲಿಯೇ ಅತ್ಯಂತ ಟಫ್ ಪಿಚ್. ಸಚಿನ್ ಆಟ ನೋಡೋಕೆ ಶಫಾಲಿ ಗ್ರೌಂಡ್ಗೆ ಹೋಗಿ ಸಚಿನ್...ಸಚಿನ್ ಅಂತ ಕಿರುಚಿದ್ದೇ ಕಿರುಚಿದ್ದು. ಸಚಿನ್, ಶಫಾಲಿ ಕೂಗಿದ್ದಕ್ಕೋ ಏನೋ ಮುಂಬೈ ತಂಡವನ್ನ ಅಜೇಯ 79 ರನ್ ಬಾರಿಸಿ ಗೆಲ್ಲಿಸಿರುತ್ತಾರೆ.
ಇದನ್ನೂ ಓದಿ: ಬಳಸಿದ ಪದಕ್ಕೆ ಕ್ಷಮೆ ಇಲ್ಲ, ಬಾಂಗ್ಲಾ ಪ್ರಶಸ್ತಿ ಗೆದ್ದರೂ ಬುದ್ಧಿ ಬಿಟ್ಟಿಲ್ಲ !
ಸಚಿನ್ ಜೊತೆ ಒಂದೇ ಒಂದು ಸೆಲ್ಫಿಗಾಗಿ ಅವಳಷ್ಟು ಇನ್ಯಾರೂ ಕಾದಿಲ್ಲವೇನೋ? ಇವತ್ತು ಅದೇ ಶಫಾಲಿ ವರ್ಮ ಅತ್ಯಂತ ಕಿರಿಯ ವಯಸ್ಸಿಗೆ ಭಾರತದ ಪರ ಅರ್ಧ ಶತಕ ಹೊಡೆದಿದ್ದ ಸಚಿನ್ ದಾಖಲೆಯನ್ನೇ ಪೀಸ್ ಪೀಸ್ ಮಾಡಿದ್ದಾಳೆ.
ಮೊನ್ನೆ ಆಸ್ಟ್ರೇಲಿಯಾದಲ್ಲಿ ಅದೇ ಸಚಿನ್ ಸಿಕ್ಕಾಗ ಸೆಲ್ಫಿ ಕೇಳಿದ್ದಾಳೆ. ಸ್ವಲ್ಪ ಬೆಳಕಿಗೆ ಹೋಗೋಣ, ಪೋಟೋ ಚೆನ್ನಾಗಿ ಬರುತ್ತೆ ಎಂದ ಸಚಿನ್ ಸೆಲ್ಫಿ ಕೊಟ್ಟಿದ್ದಾರೆ. ಅದು ಶಫಾಲಿಯ ಜೀವಮಾನದ ಕನಸು ನನಸಾದ ಕ್ಷಣ.
ಅಪ್ಪ ಕ್ರಿಕೆಟ್ನ ಬೇಸಿಕ್ಸ್ ಹೇಳಿಕೊಟ್ಟ ಮೇಲೆ ಶಫಾಲಿ ನೇರ ಬಂದಿದ್ದು ಎಲ್ಲಿಗೆ ಗೊತ್ತಾ?. ರೋಹ್ಟಕ್ನ ರಾಮ್ ನಾರಾಯಣ್ ಕ್ರಿಕೆಟ್ ಕ್ಲಬ್ಗೆ. ಆಡಿದ್ದೆಲ್ಲಾ ಹುಡುಗರು ಮಾಡಿದ ಬೌಲಿಂಗ್ಗೆ. ಕೆಲವೊಮ್ಮೆ ರಣಜಿ ಬೌಲರ್ಗಳಿಗೂ ಆಡಿದ್ದಾಳೆ. ಅದಕ್ಕೆ ಅವಳಿಗೆ ಹೆಣ್ಣು ಮಕ್ಕಳ ಬೌಲಿಂಗ್ ಎಂದರೆ ಲೀಲಾಜಾಲ.
ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್ ವಿರುದ್ಧ ಹೊಡೆದಿದ್ದು ಸೆಂಚುರಿ..!
ಹೀಗೆ ಆಡುತ್ತಿದ್ದ ಶಫಾಲಿ ಹರ್ಯಾಣ ಅಂಡರ್ 16 ತಂಡಕ್ಕೂ ಆಡುತ್ತಾಳೆ. ರಾಜ್ಯದ ಪರವಾಗಿ 6 ಅರ್ಧಶತಕ ಬಾರಿಸಿದ ಹುಡುಗಿ ಟೀಂ ಇಂಡಿಯಾಗೆ ಆಯ್ಕೆಯಾಗುತ್ತಾಳೆ.
ಈಗ ಅದೇ ರಾಮ್ ನಾರಾಯಣ್ ಕ್ಲಬ್ನಲ್ಲಿ ಅವಳ ಫೋಟೋಗಳ ಗ್ಯಾಲರಿಯೇ ಇದೆ. ಶಫಾಲಿ ಕೋಚ್ ಅಶ್ವನಿ ಕುಮಾರ್, ಸದ್ಯ ಆಸ್ಟ್ರೇಲಿಯಾದಲ್ಲಿರುವ ಶಫಾಲಿಯ ಹೈ ರೆಸಲ್ಯೂಷನ್ ಫೋಟೋಗಳು ಬೇಕು ಎಂದು ಆರ್ಡರ್ ಮಾಡಿದ್ದಾರಂತೆ. ಕಲಿತ ಕ್ರಿಕೆಟ್ ಕ್ಲಬ್ನ ಹೆಮ್ಮೆ ಅವಳು. ಬೆಳೆಯಬೇಕಿರುವುದೇ ಹಾಗೆ!
ಇದನ್ನೂ ಓದಿ: ಲೈಫ್‌ನಲ್ಲಿ ನೀನು ಏನೂ ಆಗೊಲ್ಲ ಎನಿಸಿಕೊಂಡವರು ಶಾರ್ದೂಲ್ ಕಥೆಯನ್ನೊಮ್ಮೆ ಓದಿ
ವಿಶ್ವಕಪ್ನಲ್ಲಿ ಶಫಾಲಿ ಅಷ್ಟು ಚೆನ್ನಾಗಿ ಆಡೋದಕ್ಕೆ ಒಂದು ಬಲವಾದ ಕಾರಣ ಇದೆ. ಅದು ಅವರಪ್ಪ ಕೊಟ್ಟಿರುವ ಟಿಪ್ಸ್. ಒಂದು ತಂಡದ ಅತ್ಯದ್ಭುತ ಬೌಲರ್ಗೆ ಮನಬಂದಂತೆ ದಂಡಿಸಿಬಿಡು. ಉಳಿದದ್ದು ಇತಿಹಾಸವೇ ಎಂದಿದ್ದರಂತೆ. ಅಪ್ಪನ ಮಾತನ್ನ ಚಾಚೂ ತಪ್ಪದೆ ಪಾಲಿಸುವವಳು ಶಫಾಲಿ.
ಇದನ್ನೂ ಓದಿ 'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ!
ಅಪ್ಪ , ಶಫಾಲಿಗೆ 75 ಅಂತ ಒಂದು ಕೋಡ್ ವರ್ಡ್ ಹೇಳಿಕೊಟ್ಟಿದ್ದರು. ಆಸ್ಟ್ರೇಲಿಯಾದ ದಿ ಬೆಸ್ಟ್ ಬೌಲರ್ Meghan Schutt ಎಸೆದ ಬಾಲ್ಗೆ ನುಗ್ಗಿ ಸಿಕ್ಸರ್ ಬಾರಿಸಿದ್ದಳು. ಸಿಕ್ಸರ್ನ ದೂರ 75 ಮೀಟರ್. ಕಮೆಂಟೇಟರ್ಸ್ ತಬ್ಬಿಬ್ಬಾಗಿದ್ದರು.. ಲೇಡಿ ವೀರೇಂದ್ರ ಸೆಹ್ವಾಗ್ ಅವಳು! Meghan Schutt ಐಸಿಸಿ ಆಲ್ಸ್ಟಾರ್ ಟಿ 20 ಟೀಮ್ಗೆ ಆಯ್ಕೆ ಆಗಿರುವ ಬೌಲರ್. ಅಂತ ವಿಶ್ವದ ನಂಬರ್ 1 ಬೌಲರ್ಗೆ 16ರ ಶಫಾಲಿ ಆ ಪರಿ ಚಚ್ಚಿದ್ದು ಈಗ ಇತಿಹಾಸ.
ಇದನ್ನೂ ಓದಿ ಕಡಲೂರಿಗೆ ಮುತ್ತಾದ ರಾಹುಲ್, ಯಶಸ್ಸಿನ ಹಿಂದಿವೆ ನೂರಾರು ಸವಾಲ್.
ಆಸ್ಟ್ರೇಲಿಯಾದ ಹೊಸ ಚೆಂಡಿನ ಮತ್ತೊಬ್ಬ ಜೊತೆಗಾತಿ ಎಲಿಸಾ ಪೆರ್ರಿ. ತ್ರಿಕೋನ ಸರಣಿಯಲ್ಲಿ ಇದೇ ಎಲಿಸಾಗೆ ಶಫಾಲಿ ಬೌಲ್ಡ್ ಆಗಿದ್ದಳು. ಅಪ್ಪ , ಚೆಂಡಿಗೆ ಬಾಡಿಯನ್ನ ಕ್ಲೋಸ್ ಆಗಿಟ್ಟು ಆಡು ಎಂಬ ಸಲಹೆ ಕೊಟ್ಟಿದ್ದರು. ಅದೇ ಎಲಿಸಾಗೆ ಒಂದೇ ಓವರ್ನಲ್ಲಿ 4 ಬೌಂಡರಿ ಚಚ್ಚಿದ್ದಳು. ನಂಬಿ ಶಫಾಲಿ, ತಂಡದ ಅರ್ಧ ಬ್ಯಾಟರ್ ಗಳ ಆಟ ಆಡುತ್ತಿದ್ದಾಳೆ. ಸದ್ಯ ಭಾರತ ಫೈನಲ್ಗೇರಿದೆ. ಇದೇ ಭಾನುವಾರ ಮತ್ತದೇ ಆಸ್ಟ್ರೇಲಿಯಾ ವಿರುದ್ಧ ಭಾರತದ ಹುಡುಗಿಯರು world cup ಟ್ರೋಫಿಗಾಗಿ ಆಡುತ್ತಿದ್ದಾರೆ. ಶಫಾಲಿ ಮತ್ತೆ ಅಬ್ಬರಿಸಲಿ. t 20 world cup ನಮ್ಮದಾಗಲಿ.