ರಮಾಕಾಂತ್ ಆರ್ಯನ್, ಸುವರ್ಣನ್ಯೂಸ್

ಅಪ್ಪ ತರಕಾರಿ ಮಾರ್ತಾರೆ, 
ಮಗಳು world cup ನಲ್ಲಿ ಬೆಚ್ಚಿಬೀಳಿಸುತ್ತಿದ್ದಾಳೆ...ಹೆಸರು ರಾಧಾ.

ಅಂತ ಗಟ್ಟಿಗಿತ್ತಿಯ ಹೆಸರು ರಾಧಾ ಪ್ರಕಾಶ್​ ಯಾದವ್​. ಅವಳದ್ದು ಬರಿಯ ಬೌಲಿಂಗ್​ ಅಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ  T20 world cupನಲ್ಲಿ ಎಲ್ಲ ತಂಡಗಳನ್ನೂ ಕಂಗೆಡಿಸುತ್ತಿದ್ದಾಳೆ.  ಶನಿವಾರದ ಲಂಕಾ ವಿರುದ್ಧದ ಮ್ಯಾಚ್​ನಲ್ಲಿ ಹೇಗೆ ಆಡಿದಳು ಗೊತ್ತಾ?

ಇದನ್ನೂ ಓದಿ: ಟೆನಿಸ್ ಲೋಕದ ಸುಂದರಿ ಶರಪೋವಾ; ದಿಢೀರ್ ನಿವೃತ್ತಿ ಹಿಂದಿದೆ ಕಹಿ ಅಧ್ಯಾಯ!

4 over, 23 run,  4 ವಿಕೆಟ್​...ಏನಾಗಿರಬೇಡಾ ಲಂಕಾ ಕಥೆ..7 ವಿಕೆಟ್​ಗಳಿಂದ ಲಂಕಾವನ್ನ ಸೋಲಿಸಿದ ದಿಟ್ಟ ಹುಡುಗಿಯರ ಪಡೆ ಅಜೇಯವಾಗಿ ಸೆಮಿಫೈನಲ್​ಗೆ ಹೆಜ್ಜೆ ಇಟ್ಟಿದೆ. ರಾಧಾ ಮ್ಯಾಜಿಕ್​ ಎಂದರೆ ಹಾಗೆ. ಅವಳು ಕ್ರಿಕೆಟ್​ಗೆ ಕಾಲಿಟ್ಟಿದ್ದೇ interesting story. mumbai ನಲ್ಲಿ ಆಡಿದ ಹುಡುಗಿ ಅವಳು.. ಅವರಪ್ಪ ಚಿಕ್ಕ ತರಕಾರಿ ಮತ್ತು ಚಿಲ್ಲರೆ ಅಂಗಡಿ ಇಟ್ಟುಕೊಂಡಿರುತ್ತಾರೆ. ಮುನ್ಸಿಪಾಲಿಟಿಯವರ ಕಾಟ ಬೇರೆ. ಯಾವಾಗ ಬೇಕಾದರೂ ಅಂಗಡಿಯನ್ನ ಕಿತ್ತೆಸೆಯುತ್ತಾರೆ ಅಂತ. ರಾಧಾ ಅಪ್ಪನಿಗೆ ಒಟ್ಟು ನಾಲ್ಕು ಮಕ್ಕಳು. 225 ಚದರ ಅಡಿಯ ಪುಟ್ಟ ಗೂಡಂತ ಮನೆ. ಭರ್ತಿ 9 ಜನ ಮನೆ ತುಂಬ. ಮನೆಯ ಎಲ್ಲರೂ ಒಟ್ಟಿಗೆ ಮಲಗಿದರೆ ಕಾಲು ಚಾಚಿಕೊಳ್ಳಲೂ ಆಗಲ್ಲ. ಮಗ್ಗಲು ಬದಲಿಸಲೂ ಆಗಲ್ಲ. ಕುಟುಂಬದ ತುತ್ತಿನ ಚೀಲವನ್ನ ತುಂಬಿಸುವುದೇ ದೊಡ್ಡ ಸವಾಲು.  ಅಂತದ್ದರಲ್ಲಿ ಕ್ರಿಕೆಟ್​ ಆಡುತ್ತೇನೆ ಎನ್ನುತ್ತಾಳೆ. ಕಂಡಿವಲಿ ಕಾಂಪೌಂಡ್​ನಲ್ಲಿ ಅತ್ಯದ್ಭುತವಾಗಿ ಟೆನಿಸ್​ ಬಾಲ್ ಕ್ರಿಕೆಟ್​ ಆಡುತ್ತಿರುತ್ತಾಳೆ.  ದೊಡ್ಡ ಕ್ರಿಕೆಟರ್​ ಆಗಬೇಕೆಂಬ ಕನಸು. ಆದರೆ ಕ್ರಿಕೆಟ್​ ಕಿಟ್​ಗೂ ಗತಿಯಿಲ್ಲದ ಬಡತನ . ಹುಡುಗಿ ಸಾಧಿಸುವ ಜಿದ್ದಿಗೆ ಬಿದ್ದಾಗಿತ್ತು. ಅಪ್ಪ ಖುದ್ದು ನಿಂತು ಮರದಲ್ಲಿ ಬ್ಯಾಟ್​ ಮಾಡಿಕೊಡುತ್ತಾರೆ ಪ್ರಕಾಶ್​ ಯಾದವ್​.

ಇದನ್ನೂ ಓದಿ: ಬಳಸಿದ ಪದಕ್ಕೆ ಕ್ಷಮೆ ಇಲ್ಲ, ಬಾಂಗ್ಲಾ ಪ್ರಶಸ್ತಿ ಗೆದ್ದರೂ ಬುದ್ಧಿ ಬಿಟ್ಟಿಲ್ಲ !.

ದೇವರಂತೆ ಸಿಕ್ಕವರು ಪ್ರಫುಲ್​ ನಾಯಕ್​!
ಹೀಗೆ ರಾಧಾ ಕ್ರಿಕೆಟ್​ ಆಡುತ್ತಿದ್ದಾಗ 2012ರಲ್ಲಿ ದೇವರ ಕಣ್ಣುಗಳು ರಾಧಾನ ನೋಡಿದ್ದವು.  ಕಂಡಿವಲಿಯಲ್ಲಿ ಆಡುತ್ತಿದ್ದಾಗ ಔಟ್​ ಆಗಿಯೂ ಬ್ಯಾಟ್​ ಕೊಡದ ಹುಡುಗನ ಕುತ್ತಿಗೆ ಪಟ್ಟಿ ಹಿಡಿದು ಕೆಡವಿಕೊಂಡಿದ್ದವಳು ರಾಧಾ. ಅರೆ ಎಂತ ಕೆಚ್ಚಿನ ಹುಡುಗಿ, ಎಂತ ಆಟ ಇದೆ ಇವಳಲ್ಲಿ ಎಂದವರೆ..ಸೀದಾ ಅವರಪ್ಪನ ಬಳಿ ಕರೆದುಕೊಂಡು ಹೋಗುವಂತೆ ಹೇಳಿದರು.

ಹುಡುಗಿಯಲ್ಲಿ ಹಸಿವಿದೆ. ನನ್ನ ಬಳಿ ಕಳಿಸಿಕೊಡಿ ಅವಳನ್ನ ದೊಡ್ಡ ಕ್ರಿಕೆಟರ್​ ಮಾಡುತ್ತೇನೆ ಎನ್ನುತ್ತಾರೆ ಪ್ರಫುಲ್​ ನಾಯಕ್​. ಈ ಪ್ರಫುಲ್​ ನಾಯಕ್​, ರಮಾಕಾಂತ್​ ಅಚ್ರೇಕರ್​ ಗರಡಿಯಲ್ಲಿ ಪಳಗಿದವರು. ನಿಮಗೆ ಗೊತ್ತಿರಲಿ ರಮಾಕಾಂತ್​ ಅಚ್ರೇಕರ್,​ ಸಚಿನ್​ ತೆಂಡುಲ್ಕರ್​ಗೆ ಕ್ರಿಕೆಟ್​ನ ABCD ಹೇಳಿಕೊಟ್ಟವರು.

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್‌ ವಿರುದ್ಧ ಹೊಡೆದಿದ್ದು ಸೆಂಚುರಿ..!

ರಾಧಾಳ ಅಪ್ಪ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳಲ್ಲ. ಕ್ರಿಕೆಟ್​ ಆಡಿಕೊಂಡು ಇವಳಿದ್ದರೆ ಇವಳ ಕೆಲಸದ ಕಥೆ ಏನು ಅಂತಾರೆ. ರೈಲ್ವೇನಲ್ಲಿ ಕೆಲಸ ಕೊಡಿಸುತ್ತೇನೆ, ಸಿಗದಿದ್ದರೆ ನಾನೇ ಇವಳನ್ನ ಜೀವನ ಪೂರ್ತಿ ನೋಡಿಕೊಳ್ಳುತ್ತೇನೆ ಎಂದು ಬಿಡುತ್ತಾರೆ.  ಮುಂದೆ ಆ ಮಾತು ನಿಜ ಮಾಡುತ್ತಾರೆ..ಅವರು ಅಪ್ಪನಲ್ಲದ ಅಪ್ಪ. ರಾಧಾಳ ಅಪ್ಪ ಒಪ್ಪಿಕೊಳ್ಳುತ್ತಾರೆ. 

ಸ್ಪಿನ್​ ಮಂತ್ರದಿಂದ ಲಂಕಾವನ್ನ ಮಕಾಡೆ ಕೆಡವಿದ ರಾಧಾ ಸ್ಪಿನ್ನರ್​ ಅಲ್ಲ. ತುಂಬ ದೂರದಿಂದ ಓಡಿ ಬಂದು ಬೌಲ್​ ಮಾಡುತ್ತಿದ್ದಳು. ಪ್ರಫುಲ್,​ ರನ್​ ಅಪ್​ ಕಡಿಮೆ ಮಾಡುವಂತೆ ಹೇಳಿದ್ದರು. ಬಲಗೈನಲ್ಲಿ ಬೌಲಿಂಗ್​ ಮಾಡುತ್ತಿದ್ದ ರಾಧಾಳನ್ನ ಎಡಗೈನಿಂದ ಸ್ಪಿನ್​ ಮಾಡುವಂತೆ ತಿದ್ದಿದ್ದರು. ಪ್ರಫುಲ್​ ರೂಪದಲ್ಲಿ ದೇವರು ಹೇಳಿಕೊಟ್ಟಿದ್ದ ಆಟ ಅದು. ಜೀವನಕ್ಕೆ ತಿರುವು ಕೊಟ್ಟ ಸ್ಪಿನ್​ .

ಇದನ್ನೂ ಓದಿ: ಲೈಫ್‌ನಲ್ಲಿ ನೀನು ಏನೂ ಆಗೊಲ್ಲ ಎನಿಸಿಕೊಂಡವರು ಶಾರ್ದೂಲ್ ಕಥೆಯನ್ನೊಮ್ಮೆ ಓದಿ.

2015ರಲ್ಲಿ ರಾಧಾ ಕೋಚ್​ ಪ್ರಫುಲ್​ ನಾಯಕ್​  ಕೆಲಸ ಮಾಡುತ್ತಿದ್ದ ಹೋಟೆಲ್​ centaur ನಿಂದ ರಿಟೈರ್​ ಆಗಿಬಿಡುತ್ತಾರೆ. ಮುಂಬೈ ಜೀವನವೇ ಸಾಕಾಗಿ, ಮಗಳೊಂದಿಗೆ ಬರೋಡಾಗೆ ಹೋಗಿ ಬಿಡುವ ನಿರ್ಧಾರ ಮಾಡಿಬಿಡುತ್ತಾರೆ. ರಾಧಾಗೆ ಬರಸಿಡಿಲು. ನನ್ನ ಕ್ರಿಕೆಟ್​ ಜೀವನ ಮುಗಿಯಿತು ಅಂತ.

ಅದೇ ಪ್ರಫುಲ್​ ನಾಯಕ್​, ರಾಧಾ ಅಪ್ಪನ ಹತ್ತಿರ ಬಂದು ಮತ್ತೆ ಕೇಳುತ್ತಾರೆ. ನಾನು ಇವಳನ್ನ ಬರೋಡಾಗೆ ಕರೆದುಕೊಂಡು ಹೋಗುತ್ತೇನೆ ಅಂತ. ಅವಳು ನಿಮ್ಮ ಹೊಟ್ಟೆಯಲ್ಲಿ ಹುಟ್ಟದ ಮಗಳಷ್ಟೇ, ಕರೆದುಕೊಂಡು ಹೋಗಿ ಎನ್ನುತ್ತಾರೆ ರಾಧಾಳ ಅಪ್ಪ..

ಇದನ್ನೂ ಓದಿ: 'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ!​​​​​​​

ವಿಷಯ ಅಷ್ಟು ಸಲೀಸಾಗಿರಲಿಲ್ಲ. ಮುಂಬೈಗೆ ಆಡುತ್ತಿದ್ದ ಹುಡುಗಿಯನ್ನ ಏಕಾಏಕಿ ಬೇರೆ ರಾಜ್ಯಕ್ಕೆ ಆಡಿಸುವುದೆಂದರೆ ಸುಲಭದ ಮಾತಲ್ಲ. ಬರೋಡ ಕ್ರಿಕೆಟ್​ ಬೋರ್ಡ್​ ಬಳಿ ಕೇಳಿದರೆ ಅವಳಿಗೆ ಬರೋಡದ ಅಡ್ರೆಸ್​ ಪ್ರೂಫ್​ ಬೇಕು ಎನ್ನುತ್ತಾರೆ. ಆಗ ಪ್ರಫುಲ್​ ರಾಧಾ ಅಪ್ಪನ ಬಳಿ ಅನುಮತಿ ಪಡೆದು ಕಾನೂನು ಪ್ರಕಾರ ರಾಧಾಳ ಪೋಷಕರೇ ಆಗಿ ಬಿಡುತ್ತಾರೆ. 

ರಾಧಾ, ಜೋರು ಮಳೆಯಲ್ಲಿ ಒದ್ದೆ ಪಿಚ್​ಗಳಲ್ಲಿ ರಬ್ಬರ್​ ಬಾಲ್​ನಲ್ಲಿ ಪ್ರಾಕ್ಟೀಸ್ ಮಾಡಿದವಳು. ದಿನ ಪೂರ್ತಿ ಆಡಿ ದಣಿದಿದ್ದರೂ ಇನ್ನೊಂದು ಸೆಷನ್​ ಪ್ರಾಕ್ಟೀಸ್​ ಮಾಡೋಣವಾ ಎಂದರೆ, ರಾಧಾ ಇಲ್ಲ ಎಂದವಳಲ್ಲ. ಇವತ್ತಿಗೂ ರಾಧಾಳಷ್ಟು ಚೆನ್ನಾಗಿ ಕ್ರೀಸ್​ ಬಳಸಿಕೊಂಡು ಬೌಲ್​ ಮಾಡುವ ಇನ್ನೊಬ್ಬ ಹುಡುಗಿ ಟೀಂ ಇಂಡಿಯಾದಲ್ಲಿಲ್ಲ. ಅದು ಕೋಚ್​ ಪ್ರಫುಲ್​ ನಾಯಕ್​ರ ಹಳೇ ಗರಡಿಯ ಕಲಿಕೆ.

ಕಡಲೂರಿಗೆ ಮುತ್ತಾದ ರಾಹುಲ್, ಯಶಸ್ಸಿನ ಹಿಂದಿವೆ ನೂರಾರು ಸವಾಲ್

ಮುಂಬೈಗೆ ಆಡುತ್ತಿದ್ದ ಹುಡುಗಿ, ಬರೋಡ ಅಂಡರ್​ 19 ತಂಡವನ್ನೇ ಮುನ್ನಡೆಸಿಬಿಡುತ್ತಾಳೆ. ಧೈರ್ಯಶಾಲಿಗಳಿಗೆ ಅದೃಷ್ಟ ಕೈಹಿಡಿಯುತ್ತೆ ಎನ್ನುತ್ತಾರಲ್ಲಾ ಹಾಗೆ ರಾಧಾ. 1983 ರ world cup ಹೀರೋ ಮೊಹಿಂದರ್​ ಅಮರ್​ನಾಥ್​ ಕೂಡ ರಾಧಾ ಆಟವನ್ನ ಮೆಚ್ಚಿಕೊಳ್ಳುತ್ತಾರೆ.
ರಾಧಾ ಸದ್ಯ BCCI ಸೆಂಟ್ರಲ್​ ಕಾಂಟ್ರಾಕ್ಟ್​ ಹೊಂದಿರುವ ಪ್ಲೇಯರ್​. ಅವಳ ಕುಟುಂಬದವರ ಜೀವನ ಕೂಡ ಚೆನ್ನಾಗಿರುವಂತೆ ಮಾಡಿದ್ದಾಳೆ. ಅವರಪ್ಪ ಈಗ ತರಕಾರಿ ಮಾರಲ್ಲ. ದೊಡ್ಡ ಜನರಲ್​ ಸ್ಟೋರ್​ ನಡೆಸುತ್ತಾರೆ. ಅದರ ಹೆಸರು ರಾಧಾ ಜನರಲ್​ ಸ್ಟೋರ್​!!!