ಬಳಸಿದ ಪದಕ್ಕೆ ಕ್ಷಮೆ ಇಲ್ಲ, ಬಾಂಗ್ಲಾ ಪ್ರಶಸ್ತಿ ಗೆದ್ದರೂ ಬುದ್ಧಿ ಬಿಟ್ಟಿಲ್ಲ !

ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ನೋವಿನ ಜೊತೆಗೆ ಬಾಂಗ್ಲಾದೇಶ ತಂಡದ ಆಟಗಾರರ ವರ್ತನೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಭಾರತ ತಂಡದ ಆಟಗಾರರಿಗೆ ಬಳಸಿದ ಪದ ಯಾರೂ ಕೂಡ ಸಹಿಸಲ್ಲ. ಕ್ರಿಕೆಟ್‌ಗೆ ಕಳಂಕವಾದ ಬಾಂಗ್ಲಾ ಕ್ರಿಕೆಟಿಗರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. 

Under 19 Final Bangladesh behavior shocked everyone after ugly fight against India

ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್

ಡಿಯರ್ ಬಾಂಗ್ಲಾ ಬಾಯ್ಸ್ 
World Cup ಗೆದ್ದಿದ್ದಕ್ಕೆ ಬೆಹನ್ ....ದ್ ಅನ್ನಬೇಕೆ....?

ಗೆಲುವುಗಳು ಗೌರವ ಹಾಗೂ ಘನತೆಯನ್ನ ಎತ್ತಿ ಹಿಡಿಯುವಂತಿರಬೇಕು. ನಿಮಗ್ಯಾರಿಗೂ ಇನ್ನೂ ಇಪ್ಪತ್ತು ತುಂಬಿಲ್ಲ. ಭಾರತದ ಮೇಲೆ ಫೈನಲ್‌ ಮ್ಯಾಚ್ ಗೆದ್ದ ಮೇಲೆ ನೀವು ಬಳಸಿದ ಭಾಷೆಯನ್ನ ಒಮ್ಮೆ ಟಿವಿ ರಿಪ್ಲೈನಲ್ಲಿ ನೋಡಿ.

ಇದನ್ನೂ ಓದಿ: ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಮಾದರ್..ಚೋ...ಬೆಹನ್ ಚೋ...ಇದಾ ಭಾಷೆ. ಇದನ್ನ ಹೇಳೋದಿಕ್ಕೆ ವಿಶ್ವಕಪ್‌ ಎತ್ತಿ ಹಿಡಿಯಬೇಕಿತ್ತೇ?
ಒಪ್ಪಿಕೊಳ್ತೇನೆ, Aggression ಆಟದ  ಒಂದು ಭಾಗ, ಅದಿಲ್ಲದೆ ಆಟ ಮಜಾ ಇಲ್ಲ. ಗಂಗೂಲಿ, ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ  ಕ್ರಿಕೆಟರ್ ಗಳಲ್ಲಿ ಅಗ್ರೆಷನ್ ನೋಡಿದ್ದೇನೆ. 

ನಮ್ಮ ಹುಡುಗರು ಅಗ್ರೆಸಿವ್ ಆಟ ತೋರಿಸಿದರು. ಆದರೆ ಎಲ್ಲಿಯೂ ನಿಮ್ಮ ಅಮ್ಮ, ಅಕ್ಕರನ್ನ ಆಟದ ಮೈದಾನಕ್ಕೆ ಕರೆಯಲಿಲ್ಲ. ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಗೊತ್ತಾ?

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್‌ ವಿರುದ್ಧ ಹೊಡೆದಿದ್ದು ಸೆಂಚುರಿ..!

ನಿನ್ನೆ Under-19 World cup Final ಮ್ಯಾಚ್ ನೋಡುತ್ತಿದ್ದೆ. 
ಫೈನಲ್ ನಲ್ಲಿ ಭಾರತ ಮತ್ತು ಬಾಂಗ್ಲಾ ಮುಖಾಮುಖಿ. ಅತ್ಯದ್ಭುತ ಪಂದ್ಯ. ಬಾಂಗ್ಲಾ ಬೌಲರ್ ಮತ್ತು ಭಾರತದ ಬೌಲರ್ ಗಳ ಆಟ, ಅಪ್ಪಟ ಅಪರಂಜಿ. ಸ್ಕೋರ್ ಬೋರ್ಡ್ ನಲ್ಲಿ ಭಾರತ ಒಂದಿಪ್ಪತ್ತು ರನ್ ಗಳಿಗೆ ಶಾರ್ಟ್ ಆಯಿತು. ಬಾಂಗ್ಲಾ‌ ನಾಯಕ ಅಕ್ಬರ್ ಅಲಿಯ ತಾಳ್ಮೆಯ ಆಟ ಅವರಿಗೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟಿತು.

ಲೈಫ್‌ನಲ್ಲಿ ನೀನು ಏನೂ ಆಗೊಲ್ಲ ಎನಿಸಿಕೊಂಡವರು ಶಾರ್ದೂಲ್ ಕಥೆಯನ್ನೊಮ್ಮೆ ಓದಿ.

ಇರಲಿ ವಿಷಯ ಅದಲ್ಲ.
 ಗೆದ್ದ ಮೇಲೆ ಡಗೌಟ್ ನಿಂದ ನುಗ್ಗಿದ ಆಟಗಾರರು, ಸೋತು ಸುಮ್ಮನೆ ನಿಂತಿದ್ದ ಭಾರತದ ಆಟಗಾರರ ಮೇಲೆ ಕಾಲಕೇಯನ ಸೈನ್ಯದಂತೆ ನುಗ್ಗಿಬಂದು ಮನಬಂದಂತೆ ಬೈದು, ಹೊಡೆಯಲಿಕ್ಕೆ‌ ಹಾರಿ ಬಿಡೋದೆ? ಅಂಥಾದ್ದೇನಾಗಿತ್ತು. ಇದ್ದುದರಲ್ಲಿ ಸ್ವಲ್ಪ ಉದ್ದನೆಯ ಹುಡುಗ ಯಶಸ್ವಿ ಜೈಸ್ವಾಲ್ ಒಂದಿಬ್ಬರನ್ನ ತಳ್ಳಿ ಸಮಾಧಾನ ಮಾಡಲು ಯತ್ನಿಸಿದ್ದ. 

ಅದೇಕೇ ಹಾಗಾಡಿದರು? ಗೊತ್ತಿಲ್ಲ. ಬಾಂಗ್ಲಾ ಬಾಯ್ಸ್, ಕ್ರಿಕೆಟ್ ಪಂದ್ಯ ಇಲ್ಲಿಗೆ ಮುಗಿಯುವುದಿಲ್ಲ. ನೀವು ನಿಮ್ಮ ದೇಶದ ಸೀನಿಯರ್ ತಂಡಕ್ಕೆ ಆಡುತ್ತೀರಾ? ಭಾರತದ ಈ ಹುಡುಗರು ಇಂದಲ್ಲ‌ ನಾಳೆ ಆಡುತ್ತಾರೆ. ಆಗ ನೀವು ಸೋಲಬಹುದು. ನಮ್ಮವರು ಗೆಲ್ಲಬಹುದು. ನಿಮ್ಮವರು ಮಾಡಿದಂತೆ ನಮ್ಮವರು ಮಾಡಿದರೆ? ಸಹಿಸಿಕೊಳ್ಳುತ್ತೀರಾ?

ಎಲ್ಲಕ್ಕೂ ಮೊದಲು ಕ್ರಿಕೆಟ್ ಜಂಟಲ್ ಮನ್  ಆಟ. ಅದಕ್ಕೆ ಮರ್ಯಾದೆ ಇರಲಿ. ಅನುಮಾನ ಬೇಡ..ನಮ್ಮ ಹುಡುಗರಿಗೆ ಕ್ರಿಕೆಟ್ ಒಳ್ಳೆಯ ಸಂಸ್ಕಾರ ಕಲಿಸಿದೆ. ಸಾಧ್ಯವಾದರೆ‌ ನೀವು ತಿದ್ದುಕೊಳ್ಳಿ. ವಿಶ್ವಕಪ್ ನ ಗೌರವ ಹೆಚ್ಚುತ್ತೆ. ಅಕ್ಬರ್ ಅಲಿ ನೀನು ಕ್ಷಮೆ ಕೇಳಿ ತೂಕ ಹೆಚ್ಚಿಸಿಕೊಂಡೆ..

Latest Videos
Follow Us:
Download App:
  • android
  • ios