ಚೆನ್ನೈನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಈಸ್ಟ್ ಝೋನ್, ಸೌತ್ ಝೋನ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವೈಭವ್ ಸೂರ್ಯವಂಶಿ ಸ್ಪೋಟಕ 44 ರನ್ ಗಳಿಸಿ ಉತ್ತಮ ಆರಂಭ ನೀಡಿದರೆ, ಅಭಿಮನ್ಯ ಈಶ್ವರನ್ ಜೊತೆಗೂಡಿ ಮೊದಲ ವಿಕೆಟ್‌ಗೆ 100 ರನ್‌ಗಳ ಜೊತೆಯಾಟವಾಡಿದರು.
ಚೆನ್ನೈ: ತಮಿಳುನಾಡಿನ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ದುಲೀಪ್ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಈಸ್ಟ್ ಝೋನ್ ತಂಡವು ಸೌತ್ ಝೋನ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಇದರಂತೆ ಇನ್ನಿಂಗ್ಸ್ ಆರಂಭಿಸಿದ ಈಸ್ಟ್ ಝೋನ್ ತಂಡದ ಆರಂಭಿಕರಾದ ಅಭಿಮನ್ಯ ಈಶ್ವರನ್ ಹಾಗೂ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ನೀಡಿದ್ದಾರೆ.
ದುಲೀಪ್ ಟ್ರೋಫಿ ಫೈನಲ್: ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೂ ಮುನ್ನ, ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಫೈನಲ್ ಸ್ಫೋಟಕ ಪ್ರದರ್ಶನ ನೀಡಿದ್ದಾರೆ. ಸೆಮಿಫೈನಲ್‌ನಲ್ಲಿ ಪೂರ್ವ ವಲಯದ ಪರವಾಗಿ ವೈಭವ್ ಅದ್ಭುತ ಪ್ರದರ್ಶನ ನೀಡಿದರು.
2026-27ರ ದುಲೀಪ್ ಟ್ರೋಫಿಯ ಫೈನಲ್‌ನಲ್ಲಿ ಪೂರ್ವ ವಲಯವು ದಕ್ಷಿಣ ವಲಯವನ್ನು ಎದುರಿಸುತ್ತಿದ್ದು, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಜಸ್ಟ್ 37 ಎಸೆತಗಳಲ್ಲಿ ಐದು ಬೌಂಡರಿ, ಒಂದು ಸಿಕ್ಸರ್ ನೊಂದಿಗೆ 44 ರನ್ ಗಳಿಸಿ ಮಿಂಚಿದರು. ಆದರೆ ಅರ್ಧ ಶತಕದ ಸನಿಹದಲ್ಲಿ ಎಡವಿದ ವೈಭವ್, ಚಮಾ ಮಿಲಿಂದ್ ಬೌಲಿಂಗ್‌ನಲ್ಲಿ ತನಯ್ ತ್ಯಾಗರಾಜ್‌ಗೆ ಕ್ಯಾಚ್ ಕೊಟ್ಟು ನಿರ್ವಹಿಸಿದರು. ಶಾರ್ಟ್ ಪಿಚ್ ಚೆಂಡನ್ನು ಸಿಕ್ಸರ್ ಸಿಡಿಸುವ ಬರದಲ್ಲಿ ಕ್ಯಾಚ್ ನೀಡಿದರು, ಇದರೊಂದಿಗೆ ಅರ್ಧಶತಕ ಗಳಿಸುವ ನಿರೀಕ್ಷೆ ನಿರಾಸೆ ಮೂಡಿಸಿತು. ಆದರೆ ವೈಭವ್, ಈಶ್ವರನ್ ಜೋಡಿ ಮೊದಲ ವಿಕೆಟ್‌ಗೆ 100 ರನ್ ಗಳ ಜೊತೆಯಾಟ ನೀಡಿತ್ತು.
ಇನ್ನಿಂಗ್ಸ್ ಆರಂಭದಿಂದಲೇ ತಮ್ಮ ಸ್ಪೋಟಕ ಬ್ಯಾಟಿಂಗ್ ಪವರ್ ತೋರಿಸಿದ ವೈಭವ್, ಇನ್ನಿಂಗ್ಸ್ನ ಮೂರನೇ ಓವರ್‌ನಲ್ಲಿ ಸಿರಾಜ್ ಅವರ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿದರು. 6ನೇ ಓವರ್‌ನಲ್ಲಿ ಎರಡು ಬಾರಿ, ಆ ನಂತರ ಓವರ್‌ನಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿಯೊಂದಿಗೆ ಬರೋಬ್ಬರಿ 16 ರನ್ ಗಳಿಸಿದರು.
ಫೈನಲ್ ಪಂದ್ಯದಲ್ಲಿ ಪೂರ್ವ ವಲಯದ ನಾಯಕ ಇಶಾನ್ ಕಿಶನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇಶಾನ್ ಕಿಶನ್ ಆಡುವ 11 ಬಳಗದಲ್ಲಿ ಕೇವಲ ಒಂದು ಬದಲಾವಣೆ ಮಾಡಿದರೆ, ಸೌತ್ ಝೋನ್ ತಂಡದಲ್ಲಿ ನಾಲ್ಕು ಬದಲಾವಣೆ ಕಂಡು ಬಂತು. ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಕನ್ನಡಿಗ ದೇವದತ್ ಪಡಿಕ್ಕಲ್ ಆಡುವ 11ರ ಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು, ಕ್ವಾರ್ಟರ್ ಫೈನಲ್‌ನಲ್ಲಿ ನಾರ್ಥ ಈಸ್ಟ್ ಝೋನ್ ವಿರುದ್ಧ ಕೇವಲ 08 ರನ್ ಗಳಿಸಿದ್ದ ವೈಭವ್, ಬೌಲಿಂಗ್‌ನಲ್ಲಿ ಎರಡು ವಿಕೆಟ್ ಪಡೆದು ಮಿಂಚಿದರು. ಆದರೆ ಸೆಂಟ್ರಲ್ ಝೋನ್ ವಿರುದ್ಧ ಸೆಮಿಫೈನಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 92 ರನ್ ಗಳಿಸಿದರೆ, 2ನೇ ಇನ್ನಿಂಗ್ಸ್ನಲ್ಲಿ 40 ರನ್ ಗಳಿಸಿದ್ದರು. ಇದರೊಂದಿಗೆ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು.
ಈಸ್ಟ್ ಝೋನ್ ಪ್ಲೇಯಿಂಗ್ ಇಲೆವೆನ್: ಅಭಿಮನ್ಯ ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರ, ಸುದೀಪ್ ಕುಮಾರ್ ಘರಾಮಿ, ಇಶಾನ್ ಕಿಶನ್, ಶಿಖರ್ ಮೋಹನ್, ಅನುಕುಲ್ ರಾಯ್, ಮೊಹಮ್ಮದ್ ಕೌನೈನ್ ಖುರೇಷಿ, ಮೊಹಮ್ಮದ್ ಶಮಿ, ಅಭಿಜಿತ್ ಕೆ ಸರ್ಕಾರ್, ಮುಖೇಶ್ ಕುಮಾರ್.
ಸೌತ್ ಝೋನ್ ಪ್ಲೇಯಿಂಗ್ ಇಲೆವೆನ್: ರಿಕಿ ಭುಯಿ, ನಾರಾಯಣ ಜಗದೀಸನ್, ಪಡಿಕ್ಕಲ್, ಶೇಖ್ ರಶೀದ್, ತಿಲಕ್ ವರ್ಮಾ, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ತ್ರಿಪುರಾಣ ವಿಜಯ್, ಸಿರಾಜ್, ಚಾಮ ಮಿಲಿಂದ್, ಎಂಡಿ ನಿಧೀಶ್.
ಸಂಕ್ಷೀಪ್ತ ಸ್ಕೋರ್: ಈಸ್ಟ್ ಝೋನ್ ಮೊದಲ ಇನ್ನಿಂಗ್ಸ್- 30 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ. ಆರಂಭಿಕರಾದ ಈಶ್ವರನ್ 76 ರನ್, ವೈಭವ್ 44 ರನ್ ಗಳಿಸಿ ನಿರ್ಗಮಿಸಿದರೆ. ಶಿಖರ್ ಮೋಹನ್ (23), ಸುದೀಪ್ ಕುಮಾರ್ ಘರಾಮಿ (6) ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.


