ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಕೇವಲ 55 ರನ್‌ಗೆ ಆಲೌಟ್ ಮಾಡಿದ ಭಾರತ ಓವರ್‌ಗಳಲ್ಲಿ ಪಂದ್ಯ ಗೆದ್ದುಕೊಂಡಿದೆ.ಭಾರತ ಮಹಿಳೆಯರ ಸಾಧನೆಗೆ ಹಲವು ದಾಖಲೆ ನಿರ್ಮಾಣವಾಗಿದೆ.
ದುಬೈ (ಆ.05) ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿದೆ. ಭಾರತ ವಿರುದ್ದ ಕಣಕ್ಕಿಳಿದ ಪಾಕಿಸ್ತಾನ ಮಾರಕ ಬೌಲಿಂಗ್ ದಾಳಿಗೆ ಸಂಪೂರ್ಣ ನೆಲಕಚ್ಚಿದ್ದು ಮಾತ್ರವಲ್ಲ, ಹೀನಾಯ ಸೋಲು ಕಂಡಿದೆ. ಟಿ20 ಪಂದ್ಯದಲ್ಲಿ ಪಾಕಿಸ್ತಾನ 18 ಓವರ್ ಬ್ಯಾಟಿಂಗ್ ಮಾಡಿ 55 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ ಮಹಿಳಾ ತಂಡ ಇತಿಹಾಸದಲ್ಲೇ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಸುಲಭ ಗುರಿ ಚೇಸ್ ಮಾಡಿದ ಭಾರತ ಓವರ್‌ಗಲ್ಲಿ ವಿಕೆಟ್ ಗೆಲುವು ದಾಖಲಿಸಿತು.
ಪಾಕಿಸ್ತಾನದ ಅತ್ಯಂತ ಲೋ ಸ್ಕೋರ್
ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಅತ್ಯಂತ ಲೋ ಸ್ಕೋರ್ ದಾಖಲಿಸಿದ ಅಪಖ್ಯಾತಿಗೆ ಗುರಿಯಾಗಿದೆ. ಅದು ಕೂಡ ಭಾರತ ವಿರುದ್ದ ಅನ್ನೋದು ಮತ್ತೊಂದು ಮುಖಭಂಗ. ಕೇವಲ 55 ರನ್ ಮೂಲಕ ಪಾಕಿಸ್ತಾನ ಮತ್ತೊಂದು ಸೋಲಿಗೂ ಗುರಿಯಾಯಿತು. ಇದಕ್ಕೂ ಮೊದಲು 2024ರಲ್ಲಿ ಪಾಕಿಸ್ತಾನ ಮಹಿಳಾ ತಂಡ ನ್ಯೂಜಿಲೆಂಡ್ ವಿರುದ್ದ 56 ರನ್‌ಗೆ ಆಲೌಟ್ ಆಗಿತ್ತು.
ಸುಲಭ ಇನ್ನಿಂಗ್ಸ್ ಚೇಸ್‌ನಲ್ಲಿ 3 ವಿಕೆಟ್ ಕಳೆದುಕೊಂಡ ಭಾರತ
56 ರನ್ ಟಾರ್ಗೆಟ್ ಪಡೆದ ಭಾರತ ಆರಂಭದಲ್ಲೇ ವಿಕೆಟ್ ಪತನಗೊಂಡಿತು. ಟಾರ್ಗೆಟ್ ಸುಲಭವಾಗಿತ್ತು. ಶೆಫಾಲಿ ವರ್ಮಾ, ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಲು ವಿಫಲರಾದರು. ಶೆಫಾಲಿ 12 ರನ್ ಸಿಡಿಸಿ ಔಟಾದರೆ, ಮಂಧಾನ 9 ರನ್ ಸಿಡಿಸಿ ನಿರ್ಗಮಿಸಿದರು. ಪ್ರತೀಕಾ ರಾವಲ್ 4 ರನ್ ಸಿಡಿಸಿ ಔಟಾದರು. ಹರ್ಮನ್ ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಜೊತೆಯಾಟದಿಂದ ಭಾರತ 8.4 ಓವರ್‌ಗಳಲ್ಲಿ ಗೆಲುವು ಸಾಧಿಸಿತು. 7 ವಿಕೆಟ್ ಗೆಲವು ದಾಖಲಿಸಿದ ಭಾರತ ಎ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.


