ಯೂರೋಪಿಯನ್ ಟಿ20 ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡುಪ್ಲೆಸಿಸ್ ಹಾಗೂ ರೊಟ್ಟರ್ ಡ್ಯಾಮ್ ತಂಡದ ಸದಸ್ಯರು ನಟ ಹಾಗೂ ಸಂಸದ ರವಿ ಕಿಶನ್ ವೈರಲ್ ಸ್ಟೆಪ್ಸ್ ಇಮಿಟೇಟ್ ಮಾಡಿದ್ದಾರೆ. ತಂಡದ ಡ್ಯಾನ್ಸ್ ವೈರಲ್ ಆಗಿದೆ.
ಲಂಡನ್ (ಆ.29) ಯೂರೋಪಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೊಟ್ಟರ್ ಡ್ಯಾಮ್ ಡಾಕರ್ಸ್ ತಂಡ ನಾಯಕ ಫಾಫ್ ಡುಪ್ಲಸಿಸ್ ಹಾಗೂ ತಂಡದ ಸದಸ್ಯರು ಭರ್ಜರಿ ಸ್ಟೆಪ್ಸ್ ಹಾಕಿ ಮಿಂಚಿದ್ದಾರೆ. ವಿಶೇಷ ಅಂದರೆ ಬಾಲಿವುಡ್ ನಟ, ಸಂಸದ ರವಿ ಕಿಶನ್ ವೈರಲ್ ಹಾಗೂ ಸಿಗ್ನೆಚರ್ ಸ್ಟೆಪ್ಸ್ ಡ್ಯಾನ್ಸ್ ಇದೀಗ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸದ್ದು ಮಾಡುತ್ತಿದೆ. ಇಟಿಪಿಎಲ್ ಟೂರ್ನಿಯಲ್ಲಿ ರೊಟ್ಟರ್‌ಡ್ಯಾಮ್ ಡಾಕರ್ಸ್ ನಾಯಕ ಮತ್ತು ಸಹ-ಮಾಲೀಕ ಫಾಫ್ ಡು ಪ್ಲೆಸಿಸ್ ಈ ವೈರಲ್ ಟ್ರೆಂಡ್‌ನಲ್ಲಿ ಭಾಗಿಯಾಗಿಯಾಗಿದ್ದಾರೆ. ಇದೇ ವೇಳೆ ರವಿ ಕಿಶನ್ ವೈರಲ್ ಡ್ಯಾನ್ಸ್ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ.
ರವಿ ಕಿಶನ್ ವೈರಲ್ ಸ್ಟೈಲ್ ಈಗ ವಿದೇಶದಲ್ಲೂ ಜನಪ್ರಿಯ
ಫಾಫ್ ಡುಪ್ಲಸಿಸ್ ಹಾಗೂ ತಂಡದ ಸದಸ್ಯರು ರವಿ ಕಿಶನ್ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದಾರೆ. ತಂಡದ ಸದಸ್ಯರು ಡುಪ್ಲಸಿಸ್ ಜೊತೆ ವೈರಲ್ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದಾರೆ. ಇತ್ತೀಚೆಗೆ ಭಾರತದ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದ್ದ ರವಿ ಕಿಶನ್ ಡೈಲಾಗ್, ಡ್ಯಾನ್ಸ್, ಸ್ವಾಗ್ ಶೈಲಿಗಳು ಇದೀಗ ಯೂರೋಪಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸದ್ದು ಮಾಡುತ್ತಿದೆ.
ಗುಚ್ಚಿ ವಾಕ್ ಸ್ಟೈಲ್
ಡಿಜಿಟಲ್ ಜಗತ್ತಿನಲ್ಲಿ ರವಿ ಕಿಶನ್ ಅವರ ವಿಶಿಷ್ಟ ಡ್ಯಾನ್ಸ್ ಸ್ಟೆಪ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದೆ . ರವಿ ಕಿಶನ್ ಅವರ 'ಗುಚ್ಚಿ ವಾಕ್' ಸೇರಿದಂತೆ ಅವರ ಐಕಾನಿಕ್ ಮೂವ್ಸ್ ಮತ್ತು ಸ್ಫೂರ್ತಿದಾಯಕ ಪ್ರದರ್ಶನಗಳನ್ನು ಹಲವು ಸೆಲೆಬ್ರೇಟಿಗಳು, ಅಭಿಮಾನಿಗಳು ಅನುಕರಿಸುತ್ತಿದ್ದಾರೆ. ಪಂದ್ಯಗಳಲ್ಲಿ ಕೆಲ ಕ್ರಿಕೆಟಿಗರು ಡ್ಯಾನ್ಸ್ ಮೂವ್ಸ್ ಮಾಡಿ ಗಮನಸೆಳೆದಿದ್ದಾರೆ.
ಯೂರೋಪ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಆವೃತ್ತಿ ಆರಂಭಗೊಂಡಿದೆ. ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ಸ್‌ನ ಆರು ನಗರ ಆಧಾರಿತ ಫ್ರಾಂಚೈಸಿಗಳನ್ನು ಒಳಗೊಂಡ ಈ ಟೂರ್ನಿ ಇದಾಗಿದೆ. ಮೊದಲ ಹಂತದಲ್ಲಿ ನೆದರ್ಲೆಂಡ್ಸ್‌ನ ವೂರ್ಬರ್ಗ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯುತ್ತಿದೆ, ಮುಂದಿನ ತಿಂಗಳು ಐರ್ಲೆಂಡ್‌ನ ಮಲಹೈಡ್‌ಗೆ ಶಿಫ್ಟ್ ಆಗಲಿದೆ.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಇಟಿಪಿಎಲ್‌ನ ಪ್ರಮುಖ ಕ್ರಿಕೆಟಿಗ ಮಾತ್ರವಲ್ಲ, ತಂಡದ ಸಹ ಮಾಲೀಕರಾಗಿದ್ದಾರೆ. ರೊಟ್ಟರ್‌ಡ್ಯಾಮ್ ಡಾಕರ್ಸ್‌ಗೆ ನಾಯಕರಾಗಿ ಮಾತ್ರವಲ್ಲ, ಹೈನ್ರಿಚ್ ಕ್ಲಾಸೆನ್ ಮತ್ತು ಜಾಂಟಿ ರೋಡ್ಸ್ ಜತೆಗೆ ಸಹ-ಮಾಲೀಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಸ್ಟ್ 26ರಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ಫಾಫ್ ಅಜೇಯ 83 ರನ್ ಸಿಡಿಸಿ, ರೊಟ್ಟರ್‌ಡ್ಯಾಮ್ ಡಾಕರ್ಸ್‌ಗೆ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ವಿರುದ್ಧ ಅಬ್ಬರಿಸಿದ್ದಾರೆ. ಈ ಮೂಲಕ ತಂಡಕ್ಕೆ ಭರ್ಜರಿ ಗೆಲುವು ನೀಡಿದ್ದರು.


