ಲಾರ್ಡ್ಸ್ ಮೈದಾನದಲ್ಲಿ ನಾಟ್‌ವೆಸ್ಟ್ ಸರಣಿ ಗೆದ್ದು ಫ್ಲಿಂಟಾಫ್‌ಗೆ ತಿರುಗೇಟು ಕೊಟ್ಟ ಸೌರವ್ ಗಂಗೂಲಿ ಶರ್ಟ್ ಸೆಲೆಬ್ರೇಷನ್‌ ಇದೀಗ ಮಿಶ್ರ ಅಂಗವೈಕ್ಯಲ ಟೀಂ ಇಂಡಿಯಾ ರಿಕ್ರಿಯೇಟ್ ಮಾಡಿದೆ. ಇಂಗ್ಲೆಂಡ್ ಮಣಿಸಿದ ವಿಶೇಷ ವಿಶೇತನ ಟೀಂ ಈ ಸಂಭ್ರಮಾಚರಣೆ ಮಾಡಿದೆ.

ಲಾರ್ಡ್ಸ್ (ಆ.29) ಸೌಮ್ಯವಾಗಿದ್ದ ಟೀಂ ಇಂಡಿಯಾ ಸೌರವ್ ಗಂಗೂಲಿ ನಾಯಕತ್ವದಲ್ಲಿ ಹೆಚ್ಚು ಅಗ್ರೆಸ್ಸೀವ್ ಆಗಿತ್ತು. ಸ್ಲೆಡ್ಜಿಂಗ್ ಮಾಡಿದರೆ ತಿರುಗೇಟು ನೀಡದೆ ಬಿಡುತ್ತಿರಲಿಲ್ಲ. ಆ್ಯಂಡ್ರೂ ಫ್ಲಿಂಟಾಪ್ ಶರ್ಟ್ ಬಿಚ್ಚಿ ಕುಣಿದಾಡಿದ್ದ ಘಟನೆ ಸೌರವ್ ಗಂಗೂಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ಲಾರ್ಡ್ಸ್‌ ಮೈದಾನದಲ್ಲಿ ನಾಟ್ ವೆಸ್ಟ್ ಸರಣಿ ಗೆದ್ದ ಬೆನ್ನಲ್ಲೇ ಸೌರವ್ ಗಂಗೂಲಿ ಡ್ರೆಸ್ಸಿಂಗ್ ರೂಂ ಬಾಲ್ಕಿಯಲ್ಲಿ ಶರ್ಟ್ ತೆಗೆದು ತಿರುಗಿಸಿ ಸಂಭ್ರಮಿಸಿದ್ದರು. ಇದು ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ರಿವೇಂಜ್ ಸೆಲೆಬ್ರೇಷನ್ ಆಗಿತ್ತು. ಇದೀಗ ಇದೇ ಗಂಗೂಲಿ ರಿವೇಂಜ್ ಸೆಲೆಬ್ರೇಷನ್‌ನನ್ನು ಭಾರತದ ವಿಶೇಷ ಚೇತನ ಮಿಶ್ರ ತಂಡ ಮರುಸೃಷ್ಟಿಸಿದೆ. ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ ಗಂಗೂಲಿ ಸೆಲೆಬ್ರೇಷನ್ ಮಾಡಿ ಸಂಭ್ರಮಿಸಿದೆ.

24 ವರ್ಷ ಬಳಿಕ ಟಿ ಶರ್ಟ್ ಸೆಲೆಬ್ರೇಷನ್

ಲಾರ್ಡ್ಸ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ ವಿಶೇಷ ಚೇತನ ಮಿಶ್ರ ತಂಡ, ಇಂಗ್ಲೆಂಡ್ ತಂಡವನ್ನು 118 ರನ್‌ಗಳಿಂದ ಮಣಿಸಿತ್ತು. 118 ರನ್ ಭರ್ಜರಿ ಗೆಲುವಿನ ಬೆನ್ನಲ್ಲೇ ವಿಶೇಷ ಚೇತನ ಮಿಶ್ರ ತಂಡ ಸೌರವ್ ಗಂಗೂಲಿ ಸೆಲೆಬ್ರೇಷನ್ ಮಾಡಿದೆ. ಗೆಲುವಿನ ಬಳಿಕ ತಂಡದ ಆಟಗಾರರರು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಬರೋಬ್ಬರಿ 24 ವರ್ಷಗಳ ಬಳಿಕ ಲಾರ್ಡ್ಸ್ ಮೈದಾನದಲ್ಲಿ ಮತ್ತೆ ಟಿಶರ್ಟ್ ಸೆಲೆಬ್ರೇಷನ್ ಸದ್ದು ಮಾಡಿತ್ತು. 2002ರಲ್ಲಿ ನಾಟ್ ‌ವೆಸ್ಟ್ ಸರಣಿ ಗೆದ್ದು ಗಂಗೂಲಿ ಟಿಶರ್ಟ್ ಸೆಲೆಬ್ರೇಷನ್ ಮಾಡಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 206 ರನ್ ಸಿಡಿಸಿತ್ತು. 7 ಪಂದ್ಯಗಳ ಕೊನೆಯ ಪಂದ್ಯದಲ್ಲಿ ಭಾರತ ದಿಟ್ಟ ಹೋರಾಟ ನೀಡಿ ಅಬ್ಬರಿಸಿತ್ತು. ಅರ್ಜುನ್ ಗವಾರೆ, ಮೇಜರ್ ಮಾಗ್ರೆ, ಸಾಯಿ ಆಕಾಶ್ ಸೇರಿದಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಭಾರತದ ಮಾರಕ ಬೌಲಿಂಗ್ ದಾಳಿ ನಡೆಸಿದ ಭಾರತ ತಂಡ ಇಂಗ್ಲೆಂಡ್‌ಗೆ ಶಾಕ್ ನೀಡಿತ್ತು. ಪರಿಣಾಮ 88 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಇಂಗ್ಲೆಂಜ್ 4-3 ಅಂತರದಲ್ಲಿ ಗೆಲುವು ಸಾಧಿಸಿದೆ.

ಲಾರ್ಡ್ಸ್‌ನಲ್ಲಿ ಸರಣಿ ಗೆಲುವು ಪ್ರಮುಖವಾಗಿತ್ತು. ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಸಂಭ್ರಮ ಹೇಳತೀರದು. ಹೀಗಾಗಿ ಗಂಗೂಲಿ ಸಂಭ್ರಮನ್ನು ಮಾಡಿದ್ದೇವೆ ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.