ಬಿಡುಗಡೆ ಅಗಿರುವ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಟ್ರೈಲರ್ ಭಾರೀ ಕ್ರೇಜ್ ಸೃಷ್ಟಿಸಿದೆ. ಕ್ರೇಜ್ ಮಾತ್ರವಲ್ಲ, ಈ ಬಗ್ಗೆ ದೂರು ಕೂಡ ದಾಖಲಾಗಿದೆ. ಕುಟುಂಬದವರು ಒಟ್ಟಿಗೇ ಕುಳಿತು ಈ ಟ್ರೇಲರ್ ನೋಡುವಂತಿಲ್ಲ ಎಂದು ಹಲವರು ಕಿಡಿ ಕಾರುತ್ತಿದ್ದಾರೆ. ಆದರೆ, ನಿರೀಕ್ಷೆ ಸೃಷ್ಟಿಸಿರೀದಂತೂ ಸತ್ಯ.

ಹೊಸ ದಾಖಲೆ ಬರೆದ ಯಶ್ ಸಿನಿಮಾ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ನಟನೆಯ 'ಟಾಕ್ಸಿಕ್' ಸಿನಿಮಾ ಮುಂದಿನ ತಿಂಗಳು, ಅಂದರೆ 19 ಮಾರ್ಚ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಇದೀಗ ಟಾಕ್ಸಿಕ್ ಅಡ್ಡದಿಂದ ಹೊಸ ಸುದ್ದಿಯೊಂದು ಬಂದಿದೆ. ಯಶ್ ನಟನೆಯ ಟಾಕ್ಸಿಕ್​ ಸಿನಿಮಾಗೆ ತೆಲುಗು ನಾಡಿನಲ್ಲಿ ಭಾರಿ ಬೇಡಿಕೆ ಬಂದಿದೆ. ಅಲ್ಲಿ ಟಾಕ್ಸಿಕ್ ಸಿನಿಮಾದ ಡಿಸ್ಟ್ರಿಬ್ಯೂಷನ್‌ ಭಾರಿ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ.

ಆಂಧ್ರ, ತೆಲಂಗಾಣ ಸಿನಿ ಜಗತ್ತಲ್ಲಿ ಟಾಕ್ಸಿಕ್ ಸಂಚಲನ:

ಹೌದು, ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ, ಅಂದರೆ ತೆಲುಗು ಸಾಮ್ರಾಜ್ಯದಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾಗೆ ಅದೆಷ್ಟು ಬೇಡಿಕೆ ಬಂದಿದೆ ಎಂದರೆ ,ಇಲ್ಲಿಯವರೆಗೂ ಯಾವುದೇ ಸಿನಿಮಾ ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಗದೇ ಇರೋ ರೇಟಿಗೆ ಟಾಕ್ಸಿಕ್ ಸಿನಿಮಾ ಸೇಲ್ ಆಗಿದೆ. ಬರೋಬ್ಬರಿ 120 ಕೋಟಿ ರೂಪಾಯಿಗೆ ತೆಲುಗು ಭಾಷೆಯ ವಿತರಣೆ ಹಕ್ಕು ಮಾರಾಟವಿದ್ದು, ಹೊಸ ದಾಖಲೆ ಬರೆದಿದೆ.

ತೆಲುಗು ಭಾಷೆಯೆ ವಿತರಣೆ ಹಕ್ಕುಗಳನ್ನು ಟಾಲಿವುಡ್ ನಿರ್ಮಾಪಕರು ಹಾಗೂ ಹಂಚಿಕೆದಾರರಾಗಿರುವ ದಿಲ್ ರಾಜು ಪಡೆದುಕೊಂಡಿದ್ದಾರೆ. ಇದುವರೆಗೂ ತೆಲುಗು ಸಿನಿಮಾದ ಯಾವುದೇ ವಿತರಣೆ ಹಕ್ಕು 120 ಕೋಟಿ ರೂ.ಗೆ ಮಾರಾಟ ಆಗಿಲ್ಲ. ಆದರೆ, ಕನ್ನಡದ ಪ್ಯಾನ್ ವಲ್ಡ್‌ ಸಿನಿಮಾ ಈ ದಾಖಲೆ ಬರೆದಿದೆ.

120 ಕೋಟಿ ಡಿಸ್ಟ್ರಿಬ್ಯೂಷನ್ ರೈಟ್ಸ್​ಮಾರಾಟ ಆಗಿದೆ ಎಂದರೆ ಅದು ಸಣ್ಣ ಮಾತಲ್ಲ. ಈ ವ್ಯವಹಾರದ ಸುದ್ದಿ ಕೇಳಿಯೇ ಕೆಲವರು ಕುಳಿತಲ್ಲೇ ಶಾಕ್ ಆಗಿದ್ದಾರೆ. ವಿತರಣೆ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು ಇದೇ ಮೊದಲು ಎಮದು ಹಲವರು ಹೌಹಾರುತ್ತಿದ್ದಾರೆ. 

ಅಂದಹಾಗೆ, ಕಳೆದ ತಿಂಗಳು ಬಿಡುಗಡೆ ಅಗಿರುವ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಟ್ರೈಲರ್ ಭಾರೀ ಕ್ರೇಜ್ ಸೃಷ್ಟಿಸಿದೆ. ಕ್ರೇಜ್ ಮಾತ್ರವಲ್ಲ, ಈ ಬಗ್ಗೆ ದೂರು ಕೂಡ ದಾಖಲಾಗಿದೆ. ಕುಟುಂಬದವರು ಒಟ್ಟಿಗೇ ಕುಳಿತು ಈ ಟ್ರೇಲರ್ ನೋಡುವಂತಿಲ್ಲ ಎಂದು ಹಲವರು ಕಿಡಿ ಕಾರುತ್ತಿದ್ದಾರೆ. ದೂರುದುಮ್ಮಾನಗಳು ಅದೇನೇ ಇದ್ದರೂ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಭಾರೀ ಅಬ್ಬರ ಹಾಗೂ ನಿರೀಕ್ಷೆ ಸೃಷ್ಟಿಸಿರುವುದಂತೂ ಸುಳ್ಳಲ್ಲ.