Asianet Suvarna News Asianet Suvarna News

1000 ಕೋಟಿ ರೂ. ಸಮೀಪಕ್ಕೆ KGF 2; 11 ದಿನಗಳ ಸಂಪೂರ್ಣ ಲೆಕ್ಕಾ ಇಲ್ಲಿದೆ

ಅತೀ ಕಡಿಮೆ ಅವಧಿಯಲ್ಲಿ ಕೆಜಿಎಫ್-2 1000 ಕೋಟಿ ರೂಪಾಯಿನತ್ತ ಸಮೀಪಿಸುತ್ತಿದೆ. ಸಿನಿಮಾ ಬಿಡುಗಡೆಯಾಗಿ 11 ದಿನಗಳಲ್ಲಿ ಕೆಜಿಎಫ್-2 ಬರೋಬ್ಬರಿ 880 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ಕೆಜಿಎಫ್-2 5ನೇ ಸ್ಥಾನದಲ್ಲಿದೆ.

Yash starrer KGF2 earns Rs 880 crore worldwide in Day 11 sgk
Author
Bengaluru, First Published Apr 25, 2022, 3:02 PM IST

ಕೆಜಿಎಫ್-2 (KGF 2) ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಿದೆ. ಸಿನಿಮಾ ಬಿಡುಗಡೆಯಾಗಿ 11 ದಿನಗಳಲ್ಲಿ ರಾಕಿ ಭಾಯ್ ಸಿನಿಮಾ ಹಿಂದಿಯಲ್ಲಿ 300 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮತ್ತೊಂದು ದಾಖಲೆ ಮಾಡಿದೆ. ವಿಶ್ವದಾದ್ಯಂತ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಬೀಗುತ್ತಿದೆ. ಕೆಜಿಎಫ್-2 ಸಿನಿಮಾ ಬಿಡುಗಡೆಗೂ ಮೊದಲೇ ಅನೇಕ ದಾಖಲೆಗಳನ್ನು ಮಾಡಿತ್ತು. ಬಿಡುಗಡೆ ಬಳಿಕವೂ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಅನೇಕ ಘಟಾನುಘಟಿ ಕಲಾವಿದರ ಸಿನಿಮಾಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ. ಈಗಾಗಲೇ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕೆಜಿಎಫ್-2 1000 ಕೋಟಿ ರೂ. ಸಮೀಪಿಸುತ್ತಿದೆ.

ಅತೀ ಕಡಿಮೆ ಅವಧಿಯಲ್ಲಿ ಕೆಜಿಎಫ್-2 1000 ಕೋಟಿ ರೂಪಾಯಿನತ್ತ ಸಮೀಪಿಸುತ್ತಿದೆ. ಸಿನಿಮಾ ಬಿಡುಗಡೆಯಾಗಿ 11 ದಿನಗಳಲ್ಲಿ ಕೆಜಿಎಫ್-2 ಬರೋಬ್ಬರಿ 880 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ಕೆಜಿಎಫ್-2 5ನೇ ಸ್ಥಾನದಲ್ಲಿದೆ. ಏಪ್ರಿಲ್ 14ರಂದು ತೆರೆಗೆ ಬಂದ ಕೆಜಿಎಫ್-2 ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿತ್ತು. ಎರಡು ದಿನಗಳಲ್ಲೇ ಯಶ್ ಸಿನಿಮಾ ಹಿಂದಿಯಲ್ಲಿ ಬರೋಬ್ಬರಿ 100 ಕೋಟಿ ಕ್ಲಬ್ ಸೇರಿತ್ತು.

ಕೆಜಿಎಫ್-2 ಎರಡನೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಶಾಹಿದ್ ಕಪೂರ್ ಜರ್ಸಿ ಸಿನಿಮಾ ಬಿಡುಗಡೆಯಾಗಿದ್ದರೂ ಸಹ ಕೆಜಿಎಫ್-2 ಆರ್ಭಟ ಮುಂದುವರೆದಿದೆ. ಶನಿವಾರ ಮತ್ತು ಭಾನುವಾರ ಹಿಂದಿಯಲ್ಲಿ ಉತ್ತಮ ಕಮಾಯಿ ಮಾಡಿರುವ ಕೆಜಿಎಫ್-2 2ನೇ ವಾರದ ಕಲೆಕ್ಷನ್ ಲೆಕ್ಕವನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಹಂಚಿಕೊಂಡಿದ್ದಾರೆ. ಶನಿವಾರ 18.25 ಕೋಟಿ ರೂ. ಭಾನುವಾರ 22.68 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತರಣ್ ಆದರ್ಶ್ ಹೇಳಿದ್ದಾರೆ.

ಹಿಂದಿಯಲ್ಲಿ 300 ಕೋಟಿ ರೂ. ಬಾಚಿದ ದಕ್ಷಿಣದ 2ನೇ ಸಿನಿಮಾ KGF 2; ಒಟ್ಟು ಕಲೆಕ್ಷನ್ ಎಷ್ಟು?

ಹಿಂದಿಯಲ್ಲಿ ಕೆಜಿಎಫ್-2 ಗಳಿಕೆ

ಹಿಂದಿಯಲ್ಲಿ ಈಗಾಗಲೇ ಕೆಜಿಎಫ್-2 300 ಕೋಟಿ ರೂ. ಕ್ಲಬ್ ಸೇರಿದೆ. ಅತೀ ಕಡಿಮೆ ಅವದಿಯಲ್ಲಿ 300 ಕೋಟಿ ರೂಪಾಯಿ ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಕೂಡ ಕೆಜಿಎಫ್-2 ಗಳಿಸಿದೆ. ಬಾಕ್ಸ್ ಆಫೀಸ್ ಮಾನ್ಸ್ಟಾರ್ ಆಗಿರುವ ಕೆಜಿಎಫ್-2 ಸಿನಿಮಾವನ್ನು ಎಲ್ಲರೂ ಹಾಡಿಹೊಗಳುತ್ತಿದ್ದಾರೆ. ಹೃತಿಕ್ ರೋಷನ್ ಮತ್ತು ಜಾಕಿ ಶ್ರಾಫ್ ನಟನೆಯ ವಾರ್ ಸಿನಿಮಾ ಬಳಿಕ ಹಿಂದಿಯಲ್ಲಿ 300 ಕೋಟಿ ದಾಟಿದ ಸಿನಿಮಾ ಕೆಜಿಎಫ್-2 ಆಗಿದೆ ಎಂದು ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಹೇಳಿದ್ದಾರೆ. ಇನ್ನು ಹಿಂದಿಯಲ್ಲಿ 300 ಕೋಟಿ ಕ್ಲಬ್ ಸೇರಿದ ದಕ್ಷಿಣ ಭಾರತದ ಎರಡನೇ ಸಿನಿಮಾ ಎನ್ನಲಾಗಿದೆ.


ಬಾಕ್ಸ್ ಆಫೀಸ್‌ನಲ್ಲಿ 'ಕೆಜಿಎಫ್- ಚಾಪ್ಟರ್ 2' ಅಬ್ಬರ, ಇದೇ ಖುಷಿಯಲ್ಲಿ ಚಿತ್ರ ತಂಡದಿಂದ ಭರ್ಜರಿ ಪಾರ್ಟಿ

 

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. ವಾರದ ಬಳಿಕವೂ ಕೆಜಿಎಫ್2 ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ."

Latest Videos
Follow Us:
Download App:
  • android
  • ios