- Home
- Entertainment
- Sandalwood
- ಬಾಕ್ಸ್ ಆಫೀಸ್‌ನಲ್ಲಿ 'ಕೆಜಿಎಫ್- ಚಾಪ್ಟರ್ 2' ಅಬ್ಬರ, ಇದೇ ಖುಷಿಯಲ್ಲಿ ಚಿತ್ರ ತಂಡದಿಂದ ಭರ್ಜರಿ ಪಾರ್ಟಿ
ಬಾಕ್ಸ್ ಆಫೀಸ್‌ನಲ್ಲಿ 'ಕೆಜಿಎಫ್- ಚಾಪ್ಟರ್ 2' ಅಬ್ಬರ, ಇದೇ ಖುಷಿಯಲ್ಲಿ ಚಿತ್ರ ತಂಡದಿಂದ ಭರ್ಜರಿ ಪಾರ್ಟಿ
ಎಲ್ಲ ನಿರೀಕ್ಷೆಗಳನ್ನೂ ಮೀರಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' (KGF Chapter 2) ಸಿನಿಮಾ ಯಶಸ್ವಿ ಆಗಿದೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೂ ಡಬ್ ಆಗಿ ಈ ಸಿನಿಮಾ ರಿಲೀಸ್ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇನ್ನು ಹಲವು ಚಿತ್ರಗಳ ದಾಖಲೆಗಳನ್ನು ಧೂಳಿಪಟ ಮಾಡಿದೆ. ಬಿಡುಗಡೆಯಾಗಿ ಹಲವು ದಿನಗಳು ಕಳೆದಿದ್ದರೂ ಚಿತ್ರದ ಆರ್ಭಟ ಕಮ್ಮಿ ಆಗಿಲ್ಲ. ಇದರ ಖುಷಿಯಲ್ಲಿ ಕೆಜಿಎಫ್ ಚಾಪ್ಟರ್ 2 ಗೋವಾದಲ್ಲಿ ಸಕ್ಸಸ್ ಪಾರ್ಟಿ ಮಾಡಿದೆ.

KGF Chapter 2 ಹಿಂದಿಯಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಕೆಲವೇ ಸಿನಿಮಾಗಳ ಸಾಲಿಗೆ 'ಕೆಜಿಎಫ್: ಚಾಪ್ಟರ್ 2' ಚಿತ್ರ ಕೂಡ ಸೇರ್ಪಡೆ ಆಗಿದೆ. ಯಶ್ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಎಲ್ಲ ನಿರೀಕ್ಷೆಗಳನ್ನೂ ಮೀರಿ 'ಕೆಜಿಎಫ್: ಚಾಪ್ಟರ್ 2' (KGF Chapter 2) ಸಿನಿಮಾ ಯಶಸ್ವಿ ಆಗಿದೆ.
ಹಿಂದಿಯಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಕೆಲವೇ ಸಿನಿಮಾಗಳ ಸಾಲಿಗೆ 'ಕೆಜಿಎಫ್: ಚಾಪ್ಟರ್ 2' ಚಿತ್ರ ಕೂಡ ಸೇರ್ಪಡೆ ಆಗಿದೆ. ಯಶ್ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಎಲ್ಲ ನಿರೀಕ್ಷೆಗಳನ್ನೂ ಮೀರಿ 'ಕೆಜಿಎಫ್: ಚಾಪ್ಟರ್ 2' (KGF Chapter 2) ಸಿನಿಮಾ ಯಶಸ್ವಿ ಆಗಿದೆ. ಇದೇ ಖುಷಿಯಲ್ಲಿ ಚಿತ್ರ ತಂಡ ಗೋವಾದಲ್ಲಿ ಭರ್ಜರಿ ಸಕ್ಸಸ್ ಪಾರ್ಟಿ ಮಾಡಿದೆ.
ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಹಲವು ಕಡೆ ಸಕ್ಸಸ್ ಕಾಣುತ್ತಿದೆ. ಈ ಖುಷಿಯನ್ನು ಚಿತ್ರ ತಂಡ ಗೋವಾದಲ್ಲಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದೆ.
ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವ 'ಕೆಜಿಎಫ್: ಚಾಪ್ಟರ್ 2' ಸಿನಿಮಾವು ಈಗ ಮತ್ತೊಂದು ಅದ್ವಿತೀಯ ದಾಖಲೆಯನ್ನು ಬರೆದಿದೆ. ಒಂದು ಸಿನಿಮಾ 100, 200, 250, 300 ಕೋಟಿ ಕ್ಲಬ್‌ಗೆ ಸೇರುವುದು ಒಂದು ಮೈಲಿಗಲ್ಲು. ಅದೇ ರೀತಿ 'ಕೆಜಿಎಫ್ 2' ಹಿಂದಿ ವರ್ಷನ್ 300 ಕೋಟಿ ಕ್ಲಬ್‌ಗೆ ಎಂಟ್ರಿ ಪಡೆದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ.
KGF Chapter 2
ಬಾಕ್ಸ್ ಆಫೀಸ್‌ನಲ್ಲಿ 'ಕೆಜಿಎಫ್: ಚಾಪ್ಟರ್ 2' ಅಬ್ಬರ ಮುಂದುವರಿದಿದೆ. ದಿನೇ ದಿನೇ ಹೊಸ ದಾಖಲೆಗಳನ್ನು ಬರೆಯುತ್ತ, ಭರ್ಜರಿ ಕಲೆಕ್ಷನ್ ಮಾಡುತ್ತ ನಿರ್ಮಾಪಕ ಖಜಾನೆಯನ್ನು ತುಂಬಿಸುತ್ತಿದ್ದಾನೆ 'ರಾಕಿ ಭಾಯ್'. ಅದರಲ್ಲೂ ಬಾಲಿವುಡ್ ಅಂಗಳದಲ್ಲಂತೂ 'ಕೆಜಿಎಫ್: ಚಾಪ್ಟರ್ 2' ಕಡೆಯಿಂದ ಹೊಸ ಇತಿಹಾಸವೇ ಸೃಷ್ಟಿಯಾಗಿದೆ. ಚಿತ್ರ ತಂಡದ ಸಂಭ್ರಮಾಚರಣೆಯಲ್ಲಿ ರಾಧಿಕಾ ಪಂಡಿತ್ ಸಹ ಪಾಲ್ಗೊಂಡು ಪತಿಯ ಯಶಸ್ವಿ ಸಾಧನೆಯನ್ನು ಸಂಭ್ರಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.