ರಾಕಿಂಗ್ ಸ್ಟಾರ್ ಯಶ್ ಸಹ-ನಿರ್ಮಾಣದ 'ರಾಮಾಯಣ' ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಚಿತ್ರದ ಒಟಿಟಿ ಹಕ್ಕುಗಳಿಗಾಗಿ ಬಂದಿದ್ದ 700 ಕೋಟಿ ರೂಪಾಯಿಗಳ ಬೃಹತ್ ಆಫರ್ ಅನ್ನು ನಿರ್ಮಾಪಕರಾದ ಯಶ್ ಮತ್ತು ನಮಿತ್ ಮಲ್ಹೋತ್ರಾ ತಿರಸ್ಕರಿಸಿದ್ದಾರೆ.  

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್​ ನಿರ್ಮಾಣದ ರಾಮಾಯಣ ಸಿನಿಮಾ ಭಾರಿ ಚರ್ಚೆ ಹುಟ್ಟುಹಾಕಿದೆ. ಬಂದಿರೋ ಒಂದೇ ಒಂದು ಟೀಸರ್​, ಈ ಸಿನಿಮಾ ಮೇಲಿನ ನಿರೀಕ್ಷೆಯನ್ನ ಬೆಟ್ಟದಷ್ಟು ಮಾಡಿದೆ. ಹೀಗಿರುವಾಗ ರಾಮಾಯಣದ ನಿರ್ಮಾಪಕರು 700 ಕೋಟಿಯ ಆಫರ್ ಒಂದನ್ನ ಎಡಗಾಲಿನಲ್ಲಿ ಒದ್ದಿದ್ದಾರೆ ಎಂದರೆ ನೀವು ನಂಬ್ತೀರಾ? ಯೆಸ್ ಇಂಥಾದ್ದೊಂದು ಸತ್ಯ ಘಟನೆ ಮುಂಬೈ ನಗರಿಯಿಂದ ಹೊರ ಬರ್ತಾ ಇದೆ. ಹಾಗಾದ್ರೆ ಏನಿದು ರಾಮಾಯಣ 700 ಕೋಟಿ ಆಫರ್​​? ನೋಡೋಣ ಬನ್ನಿ.

ರಾಮಾಯಣ. ಭಾರತೀಯ ಚಿತ್ರರಂಗದ ಮತ್ತೊಂದು ಮಹೋನ್ನತ ಸಿನಿಮಾ. ಜೆಸ್ಟ್ ಒಂದೇ ಒಂದು ಟೀಸರ್‌ನಿಂದ ವಿಶ್ವ ಸಿನಿ ಜಗತ್ತನ್ನ ಆಕರ್ಶಿಸುತ್ತಿರೋ ರಾಮಾಯಣ ಸಿನಿಮಾ ಇವತ್ತು ಯಶ್ ಕಂಡ ಕನಸ್ಸನ್ನ ನನಸು ಮಾಡುತ್ತಿದೆ. ಪ್ಯಾನ್ ವರ್ಲ್ಡ್‌ನಲ್ಲಿ ತನ್ನ ಸಿನಿಮಾಗಳು ಮಿಂಚಿ ಮೆರೆದಾಡಬೇಕು ಎನ್ನುತ್ತಿದ್ದ ಯಶ್​ ಟಾಕ್ಸಿಕ್​ ಸಿನಿಮಾ ಮಾಡಿ ಅದನ್ನ ನಿಜ ಮಾಡೋದಕ್ಕೆ ಹೊರಟಿದ್ದಾರೆ. ಆದ್ರೆ ಅದಕ್ಕೂ ಮೊದಲೇ ಯಶ್ ನಿರ್ಮಾಣದ ರಾಮಾಯಣ ಆ ಸಾಧನೆ ಹಾದಿಯಲ್ಲಿದೆ. ಯಾಕಂದ್ರೆ ಈ ಸಿನಿಮಾ ಬಗ್ಗೆ ವಿಶ್ವ ಸಿನಿ ಪ್ರೇಕ್ಷಕರು ಗಮನ ಹರಿಸಿದ್ದಾರೆ.

ಯಶ್​​ ನಿರ್ಮಾಣದ ರಾಮಾಯಣಕ್ಕೆ 700 ಕೋಟಿ ಆಫರ್..!

ಹೌದು, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ವಿಶ್ವದಾದ್ಯಂತ ತೆರೆ ಕಾಣುತ್ತೆ. ಜೆಸ್ಟ್ ಟೀಸರ್ ಬಿಟ್ಟು ಸಿನಿಮಾ ಬ್ಯುಸಿನೆಸ್​​​​ ಮಾಡೋದಕ್ಕೆ ಕೈ ಇಟ್ಟಿರೋ ಈ ಸಿನಿಮಾದ ನಿರ್ಮಾಣ ಸಂಸ್ಥೆಗಳು ಬರೋಬ್ಬರಿ 700 ಕೋಟಿಯ ಆಫರ್ ಒಂದನ್ನ ಒಂದೇ ಏಟಿಗೆ ರಿಜೆಕ್ಟ್ ಮಾಡಿದ್ದಾರೆ.

ರಾಮಾಯಣಕ್ಕೆ ಯಶ್​, ನಮಿತ್ ಮಲ್ಹೋತ್ರಾ ಬಂಡವಾಳ...!

ರಾಮಾಯಣ ಸಿನಿಮಾ ಅದ್ಧೂರಿತನ ತುಂಬಿದೆ. ರಣಬೀರ್​​, ಸಾಯಿ ಪಲ್ಲವಿ ಮೈನ್ ಹೈಲೆಟ್. ರಾವಣ ಯಶ್​​ ಆಗಿದ್ರಿಂದ ಈ ಸಿನಿಮಾ ಬ್ರ್ಯಾಂಡ್ ವ್ಯಾಲ್ಯೂ ಇನ್ನೂ ಹೆಚ್ಚಾಗಿದೆ. ಹೀಗಾಗಿ ಈ ಸಿನಿಮಾದ ಒಟಿಟಿ ರೈಟ್ಸ್‌ಗೆ ಭಾರಿ ಡಿಮ್ಯಾಂಡ್​ ಬಂದಿದೆ. ಪ್ರತಿಷ್ಠಿತ ಒಟಿಟಿ ಕಂಪನೆಯೊಂದು ಬರೋಬ್ಬರಿ 700 ಕೋಟಿ ಆಫರ್​ ಮಾಡಿದೆ. ಆದ್ರೆ ಸಿನಿಮಾ ನಿರ್ಮಾಪಕರಾದ ಯಶ್ ಹಾಗು ನಮಿತ್ ಮಲ್ಹೋತ್ರಾ ಈ ಆಫರ್‌ನ ಅನ್ನ ರಿಜೆಕ್ಟ್ ಮಾಡಿದ್ದಾರೆ. ನಮಗೆ 1 ಸಾವಿರ ಕೋಟಿ ಕೊಡಿ ಅಂತ ಡೀಲ್‌ಗೆ ಇಳಿದಿದ್ದಾರಂತೆ.

ಒಟ್ನಲ್ಲಿ 'ರಾಮಾಯಣ' ಕೇವಲ ಬಾಲಿವುಡ್ ಸಿನಿಮಾ ಅಲ್ಲ, ಹಾಲಿವುಡ್ ಸಿನಿಮಾ ಅಂತ ಚಿತ್ರತಂಡ ಮೊದಲೇ ಹೇಳಿದೆ. ಉತ್ತರ ಭಾರತದ ಮಾರುಕಟ್ಟೆಯ ಜೊತೆಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಈ ಚಿತ್ರಕ್ಕೆ ಡಿಮ್ಯಾಂಡ್ ಇದೆ. ಇನ್ನೂ ಸಪ್ತಸಾಗರದಾಚೆ ಕೂಡ 'ರಾಮಾಯಣ' ಕಣ್ತುಂಬಿಕೊಳ್ಳಲು ಬಹುದೊಡ್ಡ ವರ್ಗ ಕಾಯ್ತಾ ಇದೆ. ಹೀಗಾಗಿ ಓಟಿಟಿ ಹಕ್ಕು 1,000 ಕೋಟಿ ಡಿಮ್ಯಾಂಡ್ ಮಾಡುತ್ತಿದೆ ಚಿತ್ರತಂಡ ಹಾಗೇನಾದ್ರು 'ರಾಮಾಯಣ'ದ ಹಕ್ಕುಗಳು ₹1,000 ಕೋಟಿಗೆ ಸೇಲ್ ಆದ್ರೆ ಭಾರತೀಯ ಚಿತ್ರರಂಗದಲ್ಲಿ ಇದೊಂದು ಇತಿಹಾಸ ಆಗಲಿದೆ.